ಕ್ರಿಕೆಟ್. ಭಾರತ ಕ್ರೀಡೆಯ ಅವಿಭಾಜ್ಯ ಅಂಗ. ಕ್ರಿಕೆಟ್ ಭಾರದಲ್ಲಿ ಬರೀ ಕ್ರೀಡೆಯಲ್ಲ, ಅದೊಂದು ಭಾವನೆ. ಒಂದು ಕಾಲದಲ್ಲಿ ಕ್ರಿಕೆಟ್ ನಲ್ಲಿ ವಿಪರೀತ ಹಣದ ಹರಿವು ಇರ್ಲಿಲ್ಲ. ಕ್ರಿಕೆಟ್ ತಾರೆಯರಿಗೆ ಮೋಜು ಮಸ್ತಿಗೆ ಹೆಚ್ಚಿನ ಅವಕಾಶ ಇರ್ಲಿಲ್ಲ. ಆದ್ರೆ ಕಾಲ ಬದಲಾದಂತೆ ಎಲ್ಲವೂ ಬದಲಾಗ್ತಿದೆ. ಐಪಿಎಲ್ ಎಂಟ್ರಿ, ಎಲ್ಲವನ್ನೂ ಬದಲಿಸ್ತಿದೆ. ಟೆಸ್ಟ್ ಕ್ರಿಕೆಟ್, ಒನ್ ಡೇ ಕ್ರಿಕೆಟ್ ನ ಹಂತಹಂತವಾಗಿ ನುಂಗಿ ಹಾಕುವ ಹಾಗೆ ಕಾಣಿಸ್ತಿದೆ. ಐಪಿಎಲ್ ಅಂದ್ರೆ ಹಣದ ಸುರಿಮಳೆ, ಮೋಜು ಮಸ್ತಿ ಎನ್ನುವಂತಾಗಿದೆ. ಆಟಗಾರರಿಗೆ ಈ ಹಿಂದೆ ಇದ್ದ ಶಿಸ್ತು, ಕ್ರಿಕೆಟ್ ಎಂದರೆ ಇದ್ದ ದೈವಿಕ ಭಾವನೆ ಅದ್ಯಾವುದು ಇದ್ದ ಹಾಗೆ ಕಾಣಿಸ್ತಿಲ್ಲ. ಹಣಕ್ಕಾಗಿ ಆಡು ಎನ್ನುವಂತಾಗಿದೆ. ಹೀಗಾಗಿ ಅದೆಷ್ಟೋ ಆಟಗಾರರಿಗೆ ಭಾರತ ತಂಡದಲ್ಲಿ ಆಡ್ಬೇಕು ಎನ್ನುವ ಮಹದಾಸೆಗಿಂತ ಐಪಿಎಲ್ ಆಡಿ ಕೋಟಿ ಬೇಬಿಗಿಳಿಸಿಕೊಂಡ್ರೆ ಸಾಕು ಎನ್ನುವಂತಾಗಿದೆ. ಈ ಐಪಿಎಲ್ ನ ಹುಚ್ಚು, ಕ್ರಿಕೆಟ್ ನ ಎಲ್ಲಿಗೆ ಕೊಂಡೊಯ್ಯುತ್ತೋ ಎನ್ನುವ ಆತಂಕ ನಿಜವಾದ ಕ್ರಿಕೆಟ್ ಪ್ರೇಮಿಗಳಲ್ಲಿ ಶುರುವಾಗಿದೆ. ಹೀಗಾಗಿ ಐಪಿಎಲ್ ಗೂ ಒಂದಷ್ಟು ಕಠಿಣ ನಿಯಮ ತರಲೇಬೇಕಿದೆ. ಈ ಹಣ, ಮೋಜು ಮಸ್ತಿ ಕ್ರೀಡೆಯನ್ನು ಮುಳುಗಿಸುತ್ತೇ ಹೊರತು ಬೆಳೆಸುವುದಿಲ್ಲ.