ಬೆಂಗಳೂರು; ಸ್ಯಾಂಡಲ್ ವುಡ್ ನ ಮೇಲೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ. ಮೊನ್ನೆಯಷ್ಟೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಾವಿಬ್ಬರು ಬೇರೆಯಾಗಿದ್ದೇವೆ ಅನ್ನೋ ಶಾಕಿಂಗ್ ಸುದ್ದಿ ನೀಡಿದ್ರು. ಆ ಸುದ್ದಿಯನ್ನು ಅರಗಿಸಿಕೊಳ್ಳುವ ಮೊದಲೇ ಇದೀಗ ಅಭಿಮಾನಿಗಳಿಗೆ ಮತ್ತೊಂದು ಬೇಸರ ಸುದ್ದಿ ಹೊರ ಬಿದ್ದಿದೆ. ರಾಜ್ ಕುಮಾರ್ ವಂಶದ ಕುಡಿ, ಅಭಿಮಾನಿಗಳ ಪ್ರೀತಿಯ ಯುವರಾಜ, ನಟ ಯುವರಾಜ್ ಕುಮಾರ್ ಅವರ ಸಾಂಸರಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಫ್ಯಾಮಿಲಿ ಕೋರ್ಟ್ ನಲ್ಲಿ ಜೂನ್ 6 ರಂದು ಯುವ ರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಆರು ತಿಂಗಳಿಂದ ಯುವ ಹಾಗೂ ಶ್ರೀದೇವಿ ಪರಸ್ಪರ ದೂರವಾಗಿದ್ದರು. ಅಲ್ಲದೇ ಶ್ರೀದೇವಿ ಅಮೇರಿಕಾದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇನ್ನು ಅರ್ಜಿಯಲ್ಲಿ ಯುವ ಶ್ರೀದೇವಿ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಶ್ರೀದೇವಿ ಅವರಿಂದ ನನಗೆ ಮಾನಸಿಕ ಕಿರುಕುಳ ಆಗ್ತಿದೆ ಆ ಕಾರಣಕ್ಕೆ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದೇನೆ ಎಂದಿದ್ದಾರೆ ಅನ್ನೋ ಮಾಹಿತಿಯಿದೆ.
ಇನ್ನು ಯುವ ಡಿವೋರ್ಸ್ ಗಾಗಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಶ್ರೀದೇವಿ ಭೈರಪ್ಪ ಅವರಿಗೆ ಕೋರ್ಟ್ ನಿಂದ ನೋಟಿಸ್ ಜಾರಿಯಾಗಿದೆ. 2019ರಲ್ಲಿ ಯುವ ರಾಜ್ ಕುಮಾರ್ ಅವರನ್ನು ಶ್ರೀದೇವಿ ಅವರನ್ನು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. 7 ವರ್ಷಗಳ ಕಾಲ ಪ್ರೀತಿಸಿ ಯುವ ಹಾಗೂ ಶ್ರೀದೇವಿ ವಿವಾಹವಾಗಿದ್ದರು ಎನ್ನಲಾಗಿದೆ. ರಾಜ್ ಕುಮಾರ್ ಎಐಎಸ್ ಅಕಾಡೆಮಿಯನ್ನು ಶ್ರೀದೇವಿ ನಡೆಸಿಕೊಂಡು ಹೋಗುತ್ತಿದ್ದರು. ಅಲ್ಲ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ.
ಸದ್ಯ ನಿವೇದಿತಾ ಚಂದನ್ ಡಿವೋರ್ಸ್ ಸುದ್ದಿಯ ಶಾಕ್ ನಿಂದ ಹೊರಗೆ ಬರೋಕೆ ಸಾಧ್ಯವಾಗದ ಅಭಿಮಾನಿಗಳಿಗೆ ಯುವ ರಾಜ್ ಕುಮಾರ್ ವಿಚ್ಛೇದನ ವಿಚಾರ ಬರ ಸಿಡಿಲು ಬಡಿದಂತಾಗಿದೆ. ಆದರ್ಶ ಮನೆತನದ ಜೋಡಿಯೊಂದು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡ್ರೆ ಹೇಗೆ. ರಾಜ್ ಮನೆತನದಲ್ಲೇ ಹೀಗಾದ್ರೆ ಹೇಗೆ ಅಂತಾ ಜನ ಮಾತನಾಡುಕೊಳ್ಳುತ್ತಿದ್ದಾರೆ.ಅಲ್ಲದೇ ಈ ನಿರ್ಧಾರವನ್ನು ಅವರು ಬದಲಿಸಲಿ ಕುಳಿತು ಮಾತನಾಡಿಕೊಂಡು ಎಲ್ಲವನ್ನೂ ಬಗೆಹರಿಸಿಕೊಳ್ಳಲಿ ಇಂತಹ ಕೆಟ್ಟ ನಿರ್ಧಾರ ಬೇಡ. ಪುನೀತ್ ರಾಜ್ ಕುಮಾರ್ ಅವರನ್ನು ನಾವು ಯುವ ರಾಜ್ ಕುಮಾರ್ ಅವರಲ್ಲಿ ನೋಡುತ್ತಿದ್ದೇವೆ. ಹೀಗಿರುವಾಗ ಅವರೇ ಹೀಗೆ ಮಾಡಿದರೆ ಹೇಗೆ ಅಂತಾ ಜನ ಪ್ರಶ್ನೆ ಮಾಡುತ್ತಿದ್ದಾರೆ.