ಬೆಂಗಳೂರು: ನಟ ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ವೈವಾಹಿಕ ಜೀವನ ಕೋರ್ಟ್ ಮೆಟ್ಟಿಲೇರಿರೋದು ನಿಮ್ಗೆ ಗೊತ್ತೇ ಇದೆ. ಇದರ ಬೆನ್ನಲ್ಲೇ ಬೆಳವಣಿಗೆಗಳ ಮೇಲೆ ಬೆಳವಣಿಗೆಗಳು ನಡಿತಾನೇ ಇದೆ. ಇದೀಗ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ ಬೆನ್ನಲ್ಲೇ ಶ್ರೀದೇವಿ ಕೂಡ ಗಂಭೀರ ಆರೋಪ ಮಾಡಿದ್ದಾರೆ. ಇದರ ಮಧ್ಯೆ ವಕೀಲ ಪ್ರಸಾದ್ ಅವರು ಕೂಡ ಶ್ರೀದೇವಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.
ಯೆಸ್.. .ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಯುವ ರಾಜ್ ಕುಮಾರ್ ಮಾಡಿದ ಆರೋಪದ ಬೆನ್ನಲ್ಲೇ ಅಮೇರಿಕಾದಿಂದಲೇ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಮೊದಲಿಗೆ ಯುವ ನೀಡಿರುವ ಯಾವುದೇ ನೋಟಿಸ್ ನನಗೆ ತಲುಪಿಲ್ಲ ಎಂದಿದ್ದಾರೆ. ಅಲ್ಲದೇ ಯುವ ರಾಜ್ ಕುಮಾರ್ ಹಾಗೂ ಅವರ ಕುಟುಂಬದವರು ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದು ಗಂಭೀರ ಆರೋಪ ಮಾಡಿರುವ ಶ್ರೀದೇವಿ ಯುವ ಸ್ಯಾಂಡಲ್ ವುಡ್ ನಟಿಯೊಬ್ಬರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ನಾನು ಮನೆಯಲ್ಲಿ ಇರುವಾಗಲೇ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದರು ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಲಾಯರ್ ಪ್ರಸಾದ್ ಅನ್ನೋರು ಶ್ರೀದೇವಿ ಅವರ ವಿರುದ್ಧ ಅತ್ಯಂತ ದೊಡ್ಡ ಆರೋಪವೊಂದನ್ನು ಮಾಡಿದ್ದಾರೆ. ಶ್ರೀದೇವಿ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂದಿದ್ದಾರೆ. ಅಲ್ಲದೇ ಯುವಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಬೆದರಿಕೆ ಕೂಡ ಹಾಕಿದ್ದಾರೆ. ಈ ಬೆದರಿಕೆಯ ಮೆಸೇಜ್ ಗಳು ನಮ್ಮ ಬಳಿ ಇವೆ. ಯುವ ಆಕೆಯನ್ನು ಬಹಳ ರಿಸ್ಕ್ ತೆಗೆದುಕೊಂಡು ಮದುವೆಯಾಗಿದ್ದಾರೆ. ಆಕೆ ಒಳ್ಳೆ ಹುಡುಗಿ ಅಲ್ಲ ಎಂದಿದ್ದಾರೆ. ಆಕೆ ಪ್ರತಿ ಬಾರಿ ಯುವರನ್ನು ಆಕೆಯ ಬಾಯ್ ಫ್ರೆಂಡ್ ಜೊತೆಗೆ ಹೋಲಿಕೆ ಮಾಡಿ ಮಾತನಾಡುತ್ತಿದ್ದರು. ಅಲ್ಲದೇ ಮಗು ಮಾಡಿಕೊಳ್ಳೋದಕ್ಕೂ ಹಿಂದೇಟು ಹಾಕಿದ್ದಾರೆ. ಆದರೆ ಬಾಯ್ ಫ್ರೆಂಡ್ ನಿಂದ ಮಗು ಮಾಡಿಕೊಳ್ಳುತ್ತೇನೆ ಎಂದು ಯುವಗೆ ಹೆದರಿಸಿದ್ದಾರೆ ಎಂಬ ಹಲವು ಗಂಭೀರ ಆರೋಪ ಮಾಡಿದ್ದಾರೆ.
ಇದರ ಮಧ್ಯೆ ಶ್ರೀದೇವಿ ಅವರ ತಂದೆ ಭೈರಪ್ಪ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ್ದು ನನ್ನ ಮಗಳನ್ನು ಅವರು ತುಂಬಾ ಒತ್ತಾಯ ಮಾಡಿ ಮದುವೆ ಮಾಡಿಕೊಂಡಿದ್ದರು. ನಾನು ಆರಂಭದಲ್ಲೇ ಆಕೆ ಬೇಡ ಅಂದಿದ್ದೆ. ಅವರೇ ನಮ್ಮ ಮನೆಗೆ ಬಂದು ಕೇಳಿದ್ರು. ಎಂಗೇಜ್ ಮೆಂಟ್ ಆದ ಬಳಿಕವೂ ನಾನು ಮದುವೆ ಮಾಡಿಕೊಡಲು 1 ವರ್ಷ ಗ್ಯಾಪ್ ತೆಗೆದುಕೊಂಡಿದ್ದೆ. ಮದುವೆ ಆದ ಮರುದಿನವೇ ಯುವ ಹಾಗೂ ಮನೆಯವರು ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಯುವ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಕೆಯನ್ನು ಒತ್ತಾಯ ಪೂರ್ವಕವಾಗಿ ಯುಎಸ್ ಗೆ ಕಳುಹಿಸಿದ್ರು. ಇದೆಲ್ಲಾ ಅವರ ಪ್ಲ್ಯಾನ್. ಈಗ ಡಿವೋರ್ಸ್ ನೀಡಲು ಕೋರ್ಟ್ ಮೊರೆ ಹೋಗಿದ್ದಾರೆ, ನನ್ನ ಮಗಳಿಗೆ ತುಂಬಾ ಅನ್ಯಾಯವಾಗಿದೆ ಎಂದಿದ್ದಾರೆ.ಅಲ್ಲದೇ ನನ್ನ ಮಗಳು ಸದ್ಯ ಯುಎಸ್ ನಲ್ಲಿ ಎಂಬಿಎ ಮಾಡುತ್ತಿದ್ದು ಆಕೆ ಬಂದ ಬಳಿಕ ನಾವು ಈ ಬಗ್ಗೆ ಇನ್ನಷ್ಟು ಮಾತನಾಡುತ್ತೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದ್ದು. ಈ ಬಗ್ಗೆ ಯುವ ರಾಜ್ ಕುಮಾರ್ ಮಾಧ್ಯಮದ ಮುಂದೆ ಬಂದು ಪ್ರತಿಕ್ರಿಯೆ ಕೊಡ್ತಾರಾ? ಇಲ್ಲ ಶ್ರೀದೇವಿ ಮಾತಾಡ್ತಾರಾ ಕಾದು ನೋಡ್ಬೇಕಿದೆ.