ಬೆಂಗಳೂರು; ನಾನು ಸಾಯ್ತೀನಿ ಅಂತಾ ನಾಲ್ಕು ಅಂತಸ್ತಿನ ಕಟ್ಟಡವೇರಿ ಯುವಕ ರಂಪಾಟ ನಡೆಸಿದ ಘಟನೆ ಶೇಷಾದ್ರಿಪುರಂ ಕಾಲೇಜು ಹಿಂಭಾಗದಲ್ಲಿರೊ ಕಟ್ಟಡದಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆಯೇ ಕಟ್ಟಡವೇರಿರುವ ಯುವಕ ಪೊಲೀಸರ ಜೀವ ಹಿಂಡುತ್ತಿದ್ದಾನೆ.ತಾನು ಹುಣಸಮಾರನಹಳ್ಳಿಯ ಮಂಜುನಾಥ್ ಎಂಬ ಯುವಕ ಎಂದು ಹೇಳುತ್ತಿರುವ ಆತ, ಆಸ್ತಿಯ ವಿಚಾರವಾಗಿ ನನಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸರ ಮುಂದೆ ಆರೋಪಿಸಿದ್ದಾನೆ. ಅಲ್ಲದೇ ನನ್ನ ಕೆಜಿ ಹಳ್ಳಿಯ ಜನರಲ್ ಆಸ್ಪತ್ರೆಗೆ ಸೇರಿಸಿದ್ರು.ಗಾಂಜಾ ಸೇವನೆ ಮಾಡ್ತೀಯಾ ಅಂತಾ ಹೇಳಿ ಚಿಕಿತ್ಸೆ ನನಗೆ ಕೊಡಿಸಲು ಮುಂದಾಗಿದ್ರು ಎಂದು ಆರೋಪಿಸಿದ್ದಾನೆ.
ಅಷ್ಟೇ ಅಲ್ಲದೇ ಕುಟುಂಬಸ್ಥರು ನನ್ನ ಹೆಂಡತಿಯನ್ನ ನನ್ನಿಂದ ದೂರು ಮಾಡಿದರು.ನನ್ನನ್ನು ವಿಷ ಹಾಕಿ ಕೊಲ್ಲಲು ಕೂಡ ಪ್ರಯತ್ನ ಪಟ್ಟಿದ್ದಾರೆ.ನಾನು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದೀನಿ.ನನಗೆ ನ್ಯಾಯ ಬೇಕು ನನ್ನ ಮೊಬೈಲ್ ನಲ್ಲಿ ಎಲ್ಲಾ ರಹಸ್ಯ ಇದೆ.ನಾನು ಕೆಳಗೆ ಬಂದ್ರೆ ಹುಚ್ಚ ಅನ್ನೋ ಪಟ್ಟ ಕಟ್ಟುತ್ತಾರೆ.ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಯುವಕ ಗೋಳಾಡಿದ್ದಾನೆ.
ಇನ್ನು ಈತ ಮಾನಸಿಕ ಅಸ್ವಸ್ಥ ಅಂತಾ ಹೇಳಲಾಗುತ್ತಿದೆ.ಬೆಳಗ್ಗೆಯೇ ಶೇಷಾದ್ರಿಪುರಂ ಕಾಲೇಜು ಹಿಂಭಾಗದಲ್ಲಿರೊ ಹೊಸದಾಗಿ ನಿರ್ಮಾಣವಾಗ್ತಿರೊ ನಾಲ್ಕಂತಸ್ತಿನ ಕಟ್ಟಡವೇರಿರುವ ಆತ ಕುಟುಂಬದವರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾನೆ. ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ. ಎಲ್ಲಾ ಸೇರಿ ನನ್ನ ಈ ಸ್ಥಿತಿಗೆ ತಂದ್ರು ಅಂತಾ ಆರೋಪ ಮಾಡಿದ್ದಾನೆ. ನಾನು ಈಗ ಇಲ್ಲಿಂದ ಹಾರಿ ಸಾಯ್ತಿನಿ ಅಂತ ಬೆದರಿಕೆ ಹಾಕಿದ್ದಾನೆ.ಬಿಲ್ಡಿಂಗ್ ಮೇಲಿಂದ ಯುವಕನನ್ನು ಇಳಿಸಲು ಪೊಲೀಸರು ಹರಸಾಹಸವನ್ನೇ ಮಾಡಿದ್ದಾರೆ. ಆದರೆ ಎಷ್ಟೆ ಮನವೋಲಿಸಿದ್ರೂ ಇಳಿಯಲು ಯುವಕ ಒಪ್ಪಿಲ್ಲ. ನನ್ನನ್ನ ಸಾಯಲು ಬಿಡಿ ಎನ್ನುತ್ತಿದ್ದಾನೆ ಯುವಕ ಮಂಜುನಾಥ್. ಆತನನ್ನು ಕೆಳಗೆ ಇಳಿಸಲು ಪೊಲೀಸರು ಇನ್ನಿಲ್ಲದ ಸರ್ಕಸ್ ಮಾಡುತ್ತಲೇ ಇದ್ದರು. ಆದರೆ ಆತ ಮಾತ್ರ ಏನೂ ಮಾಡಿದರೂ ಕೆಳಗೆ ಇಳಿಯಲು ಒಪ್ಪಿಲ್ಲ. ಕೊನೆಗೆ ಪೋಲಿಸರು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಆತನ ಮನವೊಲಿಸಿದ ಪರಿಣಾಮ ಕೊನೆಗೂ ಆತ ಕೆಳಗೆ ಇಳಿದಿದ್ದಾನೆ ಎನ್ನಲಾಗಿದೆ. ಬಳಿಕ ಯುವಕನನ್ನು ಶೇಷಾದ್ರಿ ಪುರಂ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಇನ್ನು ಶೇಷಾದ್ರಿ ಪುರಂ ಠಾಣೆಗೆ ಕರೆದೊಯ್ದು ಅವರ ಪೋಷಕರಿಗೆ ಮಾಹಿತಿ ನೀಡಲಾಯಿತು. ಶೇಷಾದ್ರಿ ಪುರಂ ಠಾಣೆಯಲ್ಲಿ ಕೂಡ ಆತ ಪೋಲಿಸರಿಗೆ ಕಾಟ ಕೊಟ್ಟಿದ್ದಾನೆ ಎನ್ನಲಾಗಿದೆ.









