ಬೆಂಗಳೂರು: ಯಡಿಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಲೋಕಾಯುಕ್ತ ಪೊಲೀಸರ ಮುಂದೆ ಮಾಜಿ ಸಿಎಂ ಯಡಿಯೂರಪ್ಪ ಹಾಜರು ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮತ್ತೆ ಯಡಿಯೂರಪ್ಪ ಅವರಿಗೆ ತಪ್ಪು ಹೆಸರು ತರಲು ಟಾರ್ಗೆಟ್ ಮಾಡಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ.ಬಿಜೆಪಿ ಮುಡಾ ಹೋರಾಟ ಆರಂಭಿಸಿದ ಬಳಿಕ ಸರ್ಕಾರ ಎಲ್ಲವನ್ನೂ ಕೆದಕುತ್ತಿರುವುದು ಗಮನಕ್ಕೆ ಬಂದಿದೆ.ನಾವು ಇದಕ್ಕೆ ಯಾವುದಕ್ಕೂ ಹೆದರುವುದಿಲ್ಲ.ವಿಪಕ್ಷಗಳಿಗೆ ಯಾವುದೇ ಮಾಹಿತಿ ಕೊಡಬಾರದು ಅಂತಾ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.ಬಿಜೆಪಿ ಸರ್ಕಾರದ ನಿರ್ಧಾರಗಳನ್ನು ಈ ಸರ್ಕಾರ ಟಾರ್ಗೆಟ್ ಮಾಡಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ.ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದೆ ಅಂತಾ ಮೊದಲು ಒಪ್ಪಿಕೊಳ್ಳಲಿ, ನಂತರ ತನಿಖೆ ಮಾಡಲಿ ಎಂದಿದ್ದಾರೆ.
ಇನ್ನು ಗಂಗೇನಹಳ್ಳಿ ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಷ್ಟು ಕೇಸ್ ಇತ್ತು?.ಅವೆಲ್ಲಾ ಎಸಿಬಿಗೆ ಹೋಯಿತು.ಎಲ್ಲವೂ ಬಿ ರಿಪೋರ್ಟ್ ಹಾಕಿದರು.ಕೇಳಿದರೆ ಅದು ಒಂದು ಸಂಸ್ಥೆ ಅಂತಾರೆ.ಹ್ಯೂಬ್ಲೋ ಸಿಎಂ ಸಿದ್ದರಾಮಯ್ಯ, ಭ್ರಷ್ಟಾಚಾರದ ಸಿಎಂ ಸಿದ್ದರಾಮಯ್ಯ.ಭ್ರಷ್ಟಾಚಾರದ ವಿರುದ್ಧ ಹೋರಾಟ ನಾವು ಮಾಡುತ್ತೇವೆ.ಕಾನೂನಿನ ಮೂಲಕ ಹೋರಾಟ ಸ್ಪಷ್ಟವಾಗಿ ಇರಲಿದೆ.ಸರ್ಕಾರದವರಿಗೆ ಏನು ಮಾಡಬೇಕು ಅಂತ ಗೊತ್ತಿಲ್ಲ.ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ; ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು: ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ.ಈ ಪ್ರಕರಣದಲ್ಲಿ ಸ್ಪಷ್ಟವಾದ ಮಾಹಿತಿ ಇದೆ.ಕುಮಾರಸ್ವಾಮಿ ಅವರು ಬಹಳ ಜೋರಾಗಿ ಮಾತನಾಡುತ್ತಾರೆ.ಈಗ ಸತ್ಯಾಸತ್ಯತೆ ಅವರ ಮುಂದೇನೆ ಇದೆ.ಯಾರ ಹೆಸರಿಗೆ ಡಿನೋಟಿಫಿಕೇಶನ್ ಮಾಡಿದ್ದರು.ಯಾರಿಗೆ ಈಗ ಈ ಜಾಗ ಹೋಗಿದೆ, ಜಾಗದ ಜಿಪಿಎ ಯಾರ ಬಳಿ ಇತ್ತು.ಇದನ್ನ ಯಾರು ಪ್ರಾರಂಭ ಮಾಡಿದ್ರು, ಅಂತಿಮವಾಗಿ ಇದನ್ನ ಯಾರು ಮಾಡಿಸಿಕೊಟ್ಟರು .ಈ ಎಲ್ಲಾ ಸತ್ಯಾಸತ್ಯತೆ ಕುಮಾರಸ್ವಾಮಿ ಮುಂದೆಯೇ ಇದೆ.ಇದು ಯಡಿಯೂರಪ್ಪ ಕುಮಾರಸ್ವಾಮಿ ಸೇರಿ ಮಾಡಿರೋದು.ಎಲ್ಲಾ ಫ್ಯಾಕ್ಟ್ ಗಳನ್ನ ದಾಖಲೆಗಳ ಮೂಲಕ ಹೇಳುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕುಮಾರಸ್ವಾಮಿಯವರು ಇದು ನನ್ನ ಸಿಗ್ನೇಚರ್ ಅಲ್ಲ ಅಂತ ಅಷ್ಟೇ ಹೇಳಬಹುದು. ಲೋಕಾಯುಕ್ತವರು ತನಿಖೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಿ.ಕುಮಾರಸ್ವಾಮಿ ಅವರು, ತಮ್ಮ ಬಾಮೈದನಿಗೆ ಡಿನೋಟಿಫಿಕೇಶನ್ ಇಂದ ಅನುಕೂಲ ಆಗಿದೆಯಾ ಇಲ್ವಾ ಹೇಳಲಿ.ಕುಮಾರಸ್ವಾಮಿಯವರ ಅತ್ತೆ ಇದರ ಜಿಪಿಎ ಹೋಲ್ಡರ್ ಆಗಿದ್ರ ಇಲ್ವಾ ಹೇಳಲಿ.ಕುಮಾರಸ್ವಾಮಿ ಮಾಡಲು ಪ್ರಯತ್ನ ಮಾಡಿದ್ರು ಯಡಿಯೂರಪ್ಪನವರು ಬಂದು ಇವರಿಗೆ ಮಾಡಿಸಿಕೊಟ್ಟರು. ಕೊನೆಗೆ ಇವರೇ ಅದರ ಫಲಾನುಭವಿ ಅಲ್ಲವೇ..?.ಇದಕ್ಕೇನು ಕುಮಾರಸ್ವಾಮಿ ಉತ್ತರ ಕೊಡಲ್ಲ.ಸಿದ್ದರಾಮಯ್ಯನವರ ಮೇಲೆ ಸತ್ತವರ ಹೆಸರಲ್ಲಿ ಡಿನೋಟಿಫಿಕೇಶನ್ ಮಾಡಿದ್ದಾರೆ ಅಂತಾರೆ.ಸಿದ್ದರಾಮಯ್ಯ ಡಿನೋಟಿಫಿಕೇಶನ್ನೇ ಮಾಡಿಸಿಲ್ಲ.ಈ ಪ್ರಕರಣ ಅವರ ಬಾಮೈದ ಹೆಸರಿನಲ್ಲೇ ಆಗಿರೋದು.ಇದಕ್ಕೆ ಉತ್ತರ ಏನು ಕುಮಾರಸ್ವಾಮಿ ಅವರೇ..? ಎಂದು ಪ್ರಶ್ನೆ ಮಾಡಿದ್ದಾರೆ.
ಕುಮಾರಸ್ವಾಮಿ ಅವರಿಗೆ ಯಾವಾಗ ಸಮಸ್ಯೆ ಆಗುತ್ತೋ ಅವಾಗ ತೀರಚಿ ಹೇಳ್ತಾರೆ.ಕುಮಾರಸ್ವಾಮಿಯವರಿಗೆ ಸ್ಪಷ್ಟ ಉತ್ತರ ಕೊಡಲು ಆಗದೆ ಪಲಾಯನ ಮಾಡುತ್ತಿದ್ದಾರೆ.ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಸರ್ಕಾರದ 100 ಕೋಟಿ ಆಸ್ತಿಯನ್ನು ಕುಮಾರಸ್ವಾಮಿ ಯಡಿಯೂರಪ್ಪ ಲೂಟಿ ಮಾಡಿದ್ದಾರೆ.ಅವರಿಬ್ಬರು ಭಾಗಿಯಾಗಿರೋದು ಸತ್ಯ, ತನಿಖೆಯಿಂದ ಅದು ಹೊರಗೆ ಬರಬಹುದು ಎಂಬುದು ಸತ್ಯ.ಯಡಿಯೂರಪ್ಪ ಅವರನ್ನು ಈಗಾಗಲೇ ವಿಚಾರಣೆ ಮಾಡಿ ಕಳಿಸಿದ್ದಾರೆ.ಕುಮಾರಸ್ವಾಮಿ ಅವರನ್ನು ಕೂಡ ಲೋಕಾಯುಕ್ತರು ವಿಚಾರಣೆಗೆ ಕರೆಸಬೇಕು.ಅವರ ಬಳಿ ಮಾಹಿತಿ ಪಡೆಯಲಿ.ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಅದು ಆಗಲಿ ಎಂಬುದಷ್ಟೇ ನಮ್ಮ ಅಗ್ರಹ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.