ಬೆಂಗಳೂರು; ವಿಜಯೇಂದ್ರಗೆ ಅಮಿತ್ ಶಾ ಕರೆ ಮಾಡಿದ್ದರ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಕರೆನೂ ಮಾಡಿಲ್ಲ ಹೋರಾಟದ ಮಾಹಿತಿಯೂ ಕೇಳಿಲ್ಲ. ಇವ್ರೇ ಯಾರೋ ಕಾಲ್ ಮಾಡಿ ನಾಟಕ್ ಮಾಡಿದ್ದಾರೆ. ಪ್ರೀತಂ ಗೌಡನೋ, ಯಾವನೋ ಕಾಲ್ ಮಾಡಿ ಮಾತಾಡಿದ್ದಾರೆ. ನೀವು ಅದನ್ನ ತೋರಿಸಿದ್ದೀರಾ.ವಿಜಯೇಂದ್ರ ರಾಕ್ ವಿರೋಧಿಗಳು ಫ್ಲಾಪ್ ಅಂತೆಲ್ಲಾ ತೋರಿಸಿದ್ದೀರಾ .ವಿಜಯೇಂದ್ರ ಬಂದಿದಾರೆ ನಮಗೆ ಬರ್ರಿ ಅಂತ ಅಭಿಮಾನಿಗಳು ಕರೀತಿದ್ದಾರೆ ಎಂದಿದ್ದಾರೆ.
ನಾನು ಹೋಗಿ ಸುಳ್ಳು ಹೇಳುವ ಮಗಾ ಅಲ್ಲ. ರಾತ್ರಿ ಮಲಗಿ ಸಂಜೆ ಮುಂದೆ ಬಂದು ಬರ್ತಡೆ ಪಾರ್ಟಿ ಆಚರಣೆ ಮಾಡಿಕೊಂಡ ರೈತ ಧೀಮಂತ ನಾಯಕ. ವಿಜಯೇಂದ್ರ ಒಂದು ರಾತ್ರಿಗೆ ರೈತ ನಾಯಕ ಆಗೋದಾದ್ರೆ ವಿದೇಶದಲ್ಲಿ ಯಾಕೆ ಆಸ್ತಿ ಮಾಡಿದ್ದೀರಾ. 5 ಸಕ್ಕರೆ ಫ್ಯಾಕ್ಟರಿ ಮಾಡಲಿ ಮೂರುವರೆ ಸಾವಿರ ರೂಪಾಯಿ ಕೊಡಲಿ .ಸಕ್ಕರೆ ಫ್ಯಾಕ್ಟರಿ ಮಾಡಿ ರೈತರಿಗೆ ಮೂರುವರೆ ಸಾವಿರ ಯಾಕೆ ಐದು ಸಾವಿರ ಕೊಡಲಿ. ನಾವೇ ವಿಜಯೇಂದ್ರ ಅವರಿಗೆ ಜಯ ಜಯ ಅಂತ ಹಾಡು ಹಾಡುತ್ತೇವೆ .ಸೋಲಾರ್ ಪ್ಲಾಂಟ್ ವಿದ್ಯುತ್ ಯಾರ್ಯಾರದಿದೆ ಹೇಳಲಿ .ಡಿಕೆ ಶಿವಕುಮಾರ್ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಲಿ ಇದನ್ನ. ಕಾರ್ಖಾನೆ ವಿದ್ಯುತ್ ಇವ್ರು ತೆಗೆದುಕೊಳ್ಳುವುದಿಲ್ಲ .ನಮ್ಮದೇ ಫ್ಯಾಕ್ಟರಿಯಲ್ಲಿ 40 ವ್ಯಾಟ್ ವಿದ್ಯುತ್ ಮಾಡಬಹುದು ಎಂದು ತಿಳಿಸಿದ್ದಾರೆ.
ಕೆಲವು ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಇರೋದಿಲ್ಲ ಎಥೆನಾಲ್ ಇರೋದಿಲ್ಲ .ಬರೀ ಸಕ್ಕರೆ ಮಾಡುವ ಫ್ಯಾಕ್ಟರಿಗೆ ಅಷ್ಟು ಕೊಡಿ ಇಷ್ಟು ಕೊಡಿ ಅಂತ ಹೇಳೋದಕ್ಕೆ ಆಗಲ್ಲ .ವಿಜಯೇಂದ್ರಂದು ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಜೊತೆ ಒಳ್ಳೆ ಸಂಬಂಧ ಇದೆ. ಶಿವಾನಂದ ಪಾಟೀಲ್ ಅತೀ ಆತ್ಮೀಯರು ಅವರ ಜೊತೆಗೆ ಸೇರಿ ನಮ್ಮನ್ನ ಪ್ರತಿ ಎಲೆಕ್ಷನ್ನಲ್ಲಿ ಸೋಲಿಸೋಕೆ ಪ್ಲಾನ್ ಮಾಡ್ತಿರ್ತಾರೆ. ವಿಜಯೇಂದ್ರ ಡಿಕೆ ಶಿವಕುಮಾರ್ ಚೆನ್ನಾಗಿದ್ದಾರೆ .ನಮ್ಮ ಭಿಕ್ಷೆಯಿಂದ ಆಗಿದ್ದಾರೆ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಲ್ಲಿಗೆ ಬಂದು ನಿಂತಿದೆ ರಾಜಕಾರಣ ಏನು ಹೇಳಲಿ ಎಂದು ಅಸಹಾಯಕತೆ ಹೊರ ಹಾಕಿದ್ದಾರೆ.










