ಬೆಂಗಳೂರು; ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಆರೋಪ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಕ್ಲೀನ್ ಚಿಟ್ ಕೊಟ್ಟಿರುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು ಸಿಎಂ ಹೇಳಿದಂತೆ ಕ್ಲೀನ್ ಚಿಟ್ ಕೊಟ್ಟುಕೊಂಡು ಹೋಗುತ್ತಾರೆ. ಸಿಐಡಿ ಅಧಿಕಾರಿಗಳು ಸಿಎಂ ಹೇಳಿದಂತೆ ಕ್ಲೀನ್ ಚಿಟ್ ಕೊಟ್ಟುಕೊಂಡು ಹೋಗುತ್ತಾರೆ. ಕಾಂಗ್ರೆಸ್ ಒಳಜಗಳ ಬಹಿರಂಗ ವಾಗುವ ಭಯದಿಂದ ಏನೂ ಸಾಕ್ಷಿಗಳಿಲ್ಲ ಅಂತಾ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಣೆ ಮಾಡದೇ ಇದ್ಧರೆ ಹೈಕಮಾಂಡ್ ನಾಯಕರಿಗೆ ದೊಡ್ಡ ತೊಂದರೆ ಆಗುತ್ತಿತ್ತು.ಅದಕ್ಕೆ ರಾಜಣ್ಣಗೆ ಡಿಸಿಎಂ ಮಾಡುತ್ತೇವೆ ಅಂತಾ ಹೇಗಿರಬೇಕು. ಪಾಪ ಡಿ.ಕೆ. ಶಿವಕುಮಾರ್ ಗೆ ಏನೂ ಗೊತ್ತಿರುವುದಿಲ್ಲ.ರಾಜ್ಯದ ಮುಗ್ಧ ರಾಜಕಾರಣಿ ಡಿ.ಕೆ. ಶಿವಕುಮಾರ್ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯಲ್ಲಿ ಈಗ ಬಹಳ ಒಗ್ಗಟ್ಟು ಇದೆ.ರಾಘವೇಂದ್ರ ಒಬ್ಬರನ್ನು ಬಿಟ್ಟರೆ ಇವರನ್ನು ಮುಂದುವರಿಸಬೇಕು ಅಂತಾ ಯಾರೂ ಹೇಳಲ್ಲ.ಅಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿದ್ದರೆ ಇಷ್ಟೊತ್ತಿಗೆ ಘೋಷಣೆ ಮಾಡಿರುತ್ತಿದ್ದರು. ಐಸಿಯುನಲ್ಲಿದ್ದಾಗಲೂ, ವೆಂಟಿಲೇಟರ್ ಹಾಕಿದಾಗಲೂ ಡಾಕ್ಟರ್ ಇನ್ನೂ ಚಾನ್ಸ್ ಇದೆ ಅಂತಾ ಹೇಳುತ್ತಾರೆ. ಬಿಜೆಪಿಗೆ ವಿಜಯೇಂದ್ರನೇ ಬೇಕು ಅಂತಾ ಇದ್ದರೆ ನಮ್ಮ ಹೊಸ ಪಕ್ಷ ನಿಶ್ಚಿತ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಹಾಕುತ್ತೇವೆ.ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ.ನಾವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಬೊಮ್ಮಾಯಿ ದೆಹಲಿಗೆ ಹೋದಾಗ ಸುನೀಲ್ ಕುಮಾರ್ ಮತ್ತು ಸೋಮಣ್ಣ ಇಬ್ಬರ ಹೆಸರು ತೆಗೆದುಕೊಂಡು ಹೋಗಿದ್ದಾರೆ. ಎಸ್.ಟಿ. ಸೋಮಶೇಖರ್ ಗೆ ಅನುಕೂಲ ಆಗಲಿ ಅಂತಾ ಯಡಿಯೂರಪ್ಪ ರುದ್ರೇಶ್ ಹೆಸರು ಘೋಷಣೆ ಮಾಡಿದ್ದಾರೆ.ಸೋಮಶೇಖರ್ ಯಡಿಯೂರಪ್ಪನವರಿಗೆ ಬಹಳ ಆಪ್ತರು.ಆದಷ್ಟು ಬೇಗ ಜೆಡಿಎಸ್ ಜೊತೆ ಜಗಳ ಪ್ರಾರಂಭ ಆಗಲಿ ಅಂತಾ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಚುನಾವಣಾ ಅಕ್ರಮ ಮಾಡಿರುವುದೇ ಕಾಂಗ್ರೆಸ್ ನವರು.ರಾಜ್ಯದಲ್ಲಿ ಇವಿಎಂ ಹ್ಯಾಕ್ ಮಾಡಿದ್ದಾರೆ ಅಂತಾ ನಾನು ಹೇಳುತ್ತೇನೆ.ಕಾಂಗ್ರೆಸ್ 136 ಸ್ಥಾನಗಳ ಬದಲು 36 ಸೀಟು ಬರುತ್ತಿತ್ತು ಎಂದಿದ್ದಾರೆ.ಮಾಲೇಗಾಂವ್ ಸ್ಫೋಟ ಪ್ರಕರಣ ಆದಾಗ ಯುಪಿಎ ಸರ್ಕಾರ ಇತ್ತು. ಹಿಂದೂ ಭಯೋತ್ಪಾದನೆ ಎಂಬ ವ್ಯಾಖ್ಯಾನ ಮಾಡುವ ಪ್ರಯತ್ನ ಮಾಡಿತ್ತು. ದೇಶದಲ್ಲಿ ಕಾಂಗ್ರೆಸ್ ಇವತ್ತಿನವರೆಗೂ ಹಿಂದೂಗಳನ್ನು ಟಾರ್ಗೆಟ್ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಮಾನಸಿಕತೆ ಭಾರತದ ಜೊತೆಗಿಲ್ಲ. ಸುಶೀಲ್ ಕುಮಾರ್ ಶಿಂಧೆ ಹಿಂದೂ ಭಯೋತ್ಪಾದನೆ ಎಂದಿದ್ದಲ್ಲೆ ಅವರ ರಾಜಕೀಯ ಅಂತ್ಯವೇ ಆಯಿತು. ಭಯೋತ್ಪಾದಕ ಕೆಲಸವನ್ನು ಹಿಂದೂಗಳು ಎಂದೂ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.