ಬೆಂಗಳೂರು; ಪಿಸಿಬಿ ಕಚೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ ನಡೆಸಿದ್ರು.ನಿನ್ನೆ ಮಧ್ಯಾಹ್ನದಿಂದ ಧರಣಿ ಯತ್ನಾಳ್ ನಡೆಸಿದ್ರು. ನಿನ್ನೆ ಅಹೋರಾತ್ರಿ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ ನಡೆಸಿದ್ದಾರೆ. ಈ ವೇಳೆ ಕಾರ್ಖಾನೆ ತೆರೆಯಲು ಅನುಮತಿ ನೀಡುತ್ತಿಲ್ಲವೆಂದು ಆಕ್ರೋಶ ಹೊರ ಹಾಕಿದ್ರು.ನಿನ್ನೆ ತಡರಾತ್ರಿವರೆಗೆ ಯತ್ನಾಳ್ ಅವರಿಗೆ ವಿಪಕ್ಷ ನಾಯಕ ಆರ್ ಅಶೋಕ್ ಸಾಥ್ ನೀಡಿದ್ರು. ಇವತ್ತು ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಬಿಜೆಪಿ ಶಾಸಕರಿಂದ ಪ್ರತಿಭಟನೆ ನಡೆಯಿತು.
ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಬಿಜೆಪಿ ಶಾಸಕ ಯತ್ನಾಳ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಯಿಸಿದ ಸಿಎಂ ಸಿದ್ದರಾಮಯ್ಯ ಶಾಸಕ ಯತ್ನಾಳ್ ಗೆ ಪೋನ್ ಕರೆ ಮಾಡಿ ಪ್ರತಿಭಟನೆ ಕೈ ಬಿಡಲು ತಿಳಿಸಿದ್ರು.ಪೋನ್ ಕರೆ ಮಾಡಿ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದ್ರು.ಏನಾದರೂ ಸಮಸ್ಯೆ ಇದ್ರೆ ಕಾನೂನಾತ್ಮಕವಾಗಿ ಬಗೆಹರಿಸೋಣ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ರು.
ಪ್ರತಿಭಟನೆ ಬಗ್ಗೆ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಕಾನೂನು, ನ್ಯಾಯ ಸತ್ತು ಹೋಗಿದೆ, ದ್ವೇಷದ ರಾಜಕಾರಣ ನಡೆಯುತ್ತಿದೆ.ಎಲ್ಲವೂ ಕಾನೂನು ಪ್ರಕಾರ ಮಾಡಿ ಯತ್ನಾಳ್ ಅವರು ಸಕ್ಕರೆ ಕಾರ್ಖಾನೆ ಶುರು ಮಾಡಿದ್ರು.ಆದರೆ ಕಳೆದ ವರ್ಷ ಇವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗೆ ಅನುಮತಿ ಕೊಡಲಿಲ್ಲ.ಆಗ ಇವರು ಕೋರ್ಟ್ ಮೊರೆ ಹೋದ್ರು, ಕೋರ್ಟ್ ನಾಲ್ಕು ವಾರದೊಳಗೆ ಕಾರ್ಖಾನೆ ಪುನಾರಂಭಕ್ಕೆ ಆದೇಶ ಕೊಡ್ತು.ಯತ್ನಾಳ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಅನುಮತಿ ಕೊಡ್ತಿಲ್ಲ.ಪಿಸಿಬಿನವ್ರು ತಾಂತ್ರಿಕ ಕಾರಣದ ನೆಪ ಹೇಳ್ತಿದ್ದಾರೆ.ಬಹಳ ದೊಡ್ಡ ತಾರಯಮ್ಯ ಮಾಡ್ತಿದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಂದು ಆರೋಪಿಸಿದ್ರು.ಹಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟು, ಇವರಿಗೆ ತಾರತಮ್ಯ ಮಾಡಲಾಗ್ತಿದೆ.ಕಾನೂನು ಉಲ್ಲಂಘಿಸಿದ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದೆ ಪಿಸಿಬಿ.ನಾವು ಇದನ್ನು ಇಲ್ಲಿಗೇ ಬಿಡಲ್ಲ, ಹೋರಾಟ ಮಾಡ್ತೇವೆ.ಈ ಕಾರ್ಖಾನೆ ನಂಬಿ ಸಾವಿರಾರಿ ರೈತರು ಇದ್ದಾರೆ.ಈ ಸಲ ಆ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆದಿದ್ದಾರೆ, ಈ ಕಾರ್ಖಾನೆ ತೆರೆಯಬೇಕಿದೆ ಎಂದ್ರು.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ ಯತ್ನಾಳ್ ಅವರು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ.ಅವರಿಗೆ ನಾವೆಲ್ಲ ಬೆಂಬಲ ಕೊಟ್ಟಿದ್ದೇವೆ.ಮಾಲಿನ್ಯ ನಿಯಂತ್ರಣ ಮಂಡಳಿ ಸ್ವಾಯತ್ತ ಮಂಡಳಿ.ಆದರೆ ಸ್ವಾಯತ್ತ ಇಲ್ಲ ಇದಕ್ಕೆ, ಸರ್ಕಾರ, ಮಂತ್ರಿಗಳ ಪ್ರಭಾವವಿದೆ.ಮಂಡಳಿ ಅಧಿಕಾರಿಗಳು ಎಲ್ಲಕ್ಕೂ ಮಂತ್ರಿಗಳ ಕಡೆ ನೋಡ್ತಿದ್ದಾರೆ.ಪಿಸಿಬಿಯಲ್ಲಿ ಸೂಟ್ ಬೂಟ್ ಧರಿಸಿ ಸೂಟ್‌ಕೇಸ್ ಹಿಡಿದು ಬಂದವರಿಗೆ ಮಾತ್ರ ಅವಕಾಶ.ಕೋರ್ಟ್ ಆದೇಶವಾಗಿ ಒಂದು ವಾರ ಬಂದರೂ, ಆದೇಶ ಪ್ರತಿ ಬಂದಿಲ್ಲ ಅಂತಾರೆ ಅಧ್ಯಕ್ಷರು.ಕೋರ್ಟ್ ಆದೇಶದ ಅಧಿಕೃತ ಪ್ರತಿ ಕೊಟ್ರೂ ಅನುಮತಿ ಕೊಡ್ತಿಲ್ಲ.ಪಿಸಿಬಿ ಅಧ್ಯಕ್ಷರು ಕಾಣೆಯಾಗಿದ್ದಾರೆ.ನಾವೆಲ್ಲ ಬಂದಿದ್ದರೂ ತಪ್ಪಿಸಿಕೊಂಡು ಕಳ್ಳನ ಥರ ಹೋಗಿದ್ದಾರೆ ಅಧ್ಯಕ್ಷರು.ಸರ್ಕಾರದ ಒತ್ತಡ ಇದೆ, ಅನುಮತಿ ಕೊಡ್ತಿಲ್ಲ ಅಂತ ಪಿಸಿಬಿ ಅಧ್ಯಕ್ಷರು ಹೇಳಲಿ.ಯತ್ನಾಳ್ ಅವರಿಗೆ ತೊಂದರೆ ಕೊಡಬೇಕು ಅಂತನೇ ಅನುಮತಿ ಕೊಡ್ತಿಲ್ಲ.ಸರ್ಕಾರ ಹಗರಣಗಳಲ್ಲಿ ಮುಳುಗಿದೆ, ಇವರಿಗೆ ನಾಚಿಕೆ ಇಲ್ಲ.ಪಿಸಿಬಿ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ಹಸ್ತಕ್ಷೇಪಕ್ಕೆ ಅವಕಾಶವೂ ಇಲ್ಲ.ಆದರೂ ಸರ್ಕಾರ ರಾಜಕೀಯ ಮಾಡ್ತಿದೆ, ಯತ್ನಾಳ್ ಗೆ ಅನ್ಯಾಯ ಮಾಡ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಮಾತನಾಡಿ ಕಲ್ಯಾಣ ಕರ್ನಾಟಕದ ರೈತರ ವಿಚಾರದಲ್ಲಿ ಸರ್ಕಾರ ಅನ್ಯಾಯ ಮಾಡಬಾರದು.ನಿಮ್ಮ ಪಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ.ನೀವು ಅನ್ಯಾಯ ಮಾಡಿದ್ರೆ ಜನ ನಿಮ್ಮನ್ನು ಬೀದಿಯಲ್ಲಿ ಅಟ್ಟಾಡಿಸಿ ಹೊಡೀತಾರೆ.ನಮ್ಮ ತಾಳ್ಮೆ ಗೂ ಒಂದು ಮಿತಿ ಇದೆ.ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಅನುಮತಿ ಕೊಟ್ರೆ ಸರಿ.ಇಲ್ಲದಿದ್ರೆ ಹೇಗೆ ಅನುಮತಿ ತಗೋಬೇಕು ಅಂತ ಗೊತ್ತಿದೆ ನಮಗೆ.ಇನ್ವೆಸ್ಟ್ ಕರ್ನಾಟಕ ಅಂತೀರಿ, ಹೀಗೆ ಕಿರುಕುಳ ಕೊಟ್ರೆ ಇನ್ವೆಸ್ಟ್ ಮಾಡೋಕ್ಕೆ ಯಾರು ಬರ್ತಾರೆ ಎಂದರು.
ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಧರಣಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟ್ವೀಟ್ ಮೂಲಕ ಬೆಂಬಲ ನೀಡಿದ್ದಾರೆ.ರಾಜ್ಯ ಸರ್ಕಾರ ಮಧ್ಯಪ್ರವೇಶಿಸುವಂತೆ ಟ್ವೀಟ್ ಮೂಲಕ ವಿಜಯೇಂದ್ರ ಆಗ್ರಹಿಸಿದ್ರು.ಯತ್ನಾಳ್ ಪ್ರಶ್ನಿಸುತ್ತಿರುವ ಕ್ರಮ ನ್ಯಾಯೋಚಿತ.ಸರ್ಕಾರ ಜರೂರು ಕ್ರಮ ಕೈಗೊಳ್ಳದೇ ಹೋದರೆ ಕಾರ್ಖಾನೆ ವಿಷಯದಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.ಟ್ವೀಟ್ ಮೂಲಕ ಶಾಸಕ ಯತ್ನಾಳ್ ಗೆ ವಿಜಯೇಂದ್ರ ಬೆಂಬಲ ನೀಡಿದ್ದಾರೆ.