ಬೆಂಗಳೂರು; ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಜೂ ಗೌಡ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಅವರು ಯತ್ನಾಳ್ ಈಗ ಸ್ವತಂತ್ರರು. ಅವರು ಏನೇ ಮಾಡಿದರೂ ನಡೆಯುತ್ತದೆ. ಇಷ್ಟು ದಿನ ಪಕ್ಷದಲ್ಲಿ, ಪಕ್ಷದ ಚೌಕಟ್ಟಿನಲ್ಲಿ ಇದ್ದರು. ಒಂದು ಪಕ್ಷ ಆದರೂ ಕಟ್ಟಲಿ, 4 ಪಕ್ಷ ಕಟ್ಟಿದರೂ ನಡೆಯುತ್ತದೆ. ಅದರ ಬಗ್ಗೆ ನಾವೇನೂ ಹೆಚ್ಚು ಹೇಳಲು ಹೋಗಲ್ಲ. ಕೆಲವು ಹಿಂದೂ ಕಾರ್ಯಕರ್ತರು ಅವರ ಜೊತೆ ಸೇರಿದ್ದಾರೆ. ಸ್ವಲ್ಪ ದಿನ ಆದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದರು.
ಯತ್ನಾಳರನ್ನು ಪಕ್ಷಕ್ಕೆ ವಾಪಸ್ ಕರೆಸುವ ಬಗ್ಗೆ ಯತ್ನಾಳ್ ಟೀಂ ನಿಂದ ಹೈಕಮಾಂಡ್ ಗೆ ಮನವಿ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಮಾಧ್ಯಮಗಳ ಮುಂದೆ ಮನವಿ ಮಾಡಿದರೆ ಏನೂ ಪ್ರಯೋಜನವಿಲ್ಲ, ಸರಿ ಹೋಗಲ್ಲ. ಪಕ್ಷದ ಚೌಕಟ್ಟಿನಲ್ಲಿ ವರಿಷ್ಠರ ಜೊತೆ ಮಾತಾಡಿ, ಮನವೊಲಿಕೆ ಮಾಡಿ ಇನ್ನೊಂದು ಸಲ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವ ಬಗ್ಗೆ ಮಾತಾಡಿದರೆ ಏನಾದರೂ ಆಗಬಹುದು. ಯಡಿಯೂರಪ್ಪ, ವಿಜಯೇಂದ್ರ ವಿರುದ್ದ ಹೋರಾಟ ಮುಂದುವರೆಯುತ್ತದೆ ಎಂಬ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪ ಇಬ್ಬರು ಶಾಸಕರಿಂದ ಪಕ್ಷ ಪ್ರಾರಂಭ ಮಾಡಿದರು. ಒಬ್ಬರು ಬಿಟ್ಟು ಹೋದ ಮೇಲೆ ಅವರೊಬ್ಬರೇ ಇದ್ದು ಪಕ್ಷ ಬೆಳೆಸಿದ್ದಾರೆ. ಯತ್ನಾಳ್ ಅವರದ್ದು ಒಂದೇ ಅಜೆಂಡಾ ಇದೆ. ಅವರ ಅಜೆಂಡಾಗೋಸ್ಕರವೇ ಇಷ್ಟೆಲ್ಲಾ ಸಮಸ್ಯೆ ಆಗುತ್ತಿವೆ ಎಂದರು.
ಪಕ್ಷದ ಚೌಕಟ್ಟಿಲ್ಲಿ ನಮಗೆ ಪಕ್ಷ ಏನು ಹೇಳಿದೆಯೋ ಅದರಂತೆ ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ಯಾರು ಯಾರು ಹೊಸ ಪಕ್ಷ ಕಟ್ಟಿದರು, ಅವೆಲ್ಲಾ ಏನಾಗಿದೆ ಅಂತ ಎಲ್ಲರೂ ನೋಡಿದ್ದಾರೆ. ಯಾರು ಎಷ್ಟು ಯಶಸ್ಸು ಆಗಿದ್ದಾರೆ ಎಲ್ಲರಿಗೂ ಗೊತ್ತಿದೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಒಬ್ಬರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ; ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು; ಒಬ್ಬರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಬದಲಾವಣೆ ಅನ್ನೋದು ಸಹಜವಾಗಿ ನಡೆಯುತ್ತೆ. ಡಿ.ಕೆ ಶಿವಕುಮಾರ್ ಕೂಡ ಒಳ್ಳೆಯ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಯನ್ನ ಚನ್ನಾಗಿ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ ಅದರಲ್ಲಿ ಯಾವುದೇ ಅನುಮಾನ ಇಲ್ಲವೇ ಇಲ್ಲ. ಆದರೆ, ಅಧ್ಯಕ್ಷರ ಬದಲಾವಣೆ ವಿಚಾರವಾಗಿ ನಮಲ್ಲಿ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ಯಾವುದೇ ರೀತಿ ದುಡುಕಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ನೇಶ್ ಗುಂಡೂರಾವ್ ಹೇಳಿದ್ದಾರೆ.
ರಂಜಾನ್ ಹಬ್ಬ ಪವಿತ್ರವಾದ ಹಬ್ಬ. ಪುನರುತ್ಥಾನ ಮಾಡಿಕೊಳ್ಳಲು ಒಂದು ಅವಕಾಶ ಇದು. ಎಲ್ಲ ಧರ್ಮಗಳು ಇರುವ ದೇಶ ನಮ್ಮದು. ಪ್ರಚೋದನಾಕಾರಿ ಮಾತುಗಳಿಗೆ ಇತಿಶ್ರೀ ಹಾಡಬೇಕು. ವಕ್ಫ್ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶನ ಮಾಡ್ತಿದ್ದಾರೆ. ವಖ್ಪ್ ವಿರೋಧಿಸಿ ನಮ್ಮ ಸರ್ಕಾರ ಕೂಡ ನಿಲುವಳಿ ಮಾಡಿದೆ. ಕಾನೂನುಬದ್ದವಾಗಿ ಮುಂದೆ ಸಾಗಬೇಕು. ಕೇಂದ್ರ ಉದ್ದೇಶ ಒಳ್ಳೆಯದಾಗಿಲ್ಲ, ಒಳ್ಳೆ ಉದ್ದೇಶ ಇಟ್ಟುಕೊಂಡಿಲ್ಲ. ವಿಶ್ವಾಸ ಪ್ರೀತಿಯಿಂದ ಗೆಲ್ಲಬೇಕೇ ಹೊರತು ದ್ವೇಷದಿಂದ ಆಗಲ್ಲ ಎಂದ್ರು.
ಇದು ನಮ್ಮ ಪಕ್ಷದ ಆಂತರಿಕ ವಿಷಯ. ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೆಪಿಸಿಸಿ ಸ್ಥಾನ ಪರ್ಮನೆಂಟ್ ಅಲ್ಲ, ಶಾಶ್ವತ ಹುದ್ದೆ ಅಲ್ಲ ಅದು. ಒಬ್ಬರೇ ಮುಂದುವರಿಯಬೇಕು ಎಂಬುದೂ ಕೂಡ ಇಲ್ಲ. ಇವರನ್ನೇ ಮುಂದುವರಿಸಬೇಕು ಎಂಬುದಾದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೇ ಅಧ್ಯಕ್ಷರಾದರೂ ಬೇರೆ ಬೇರೆ ಅಭಿಪ್ರಾಯ ಗಳು ಇದ್ದೇ ಇರುತ್ತದೆ. ತೀರ್ಮಾನ ತೆಗೆದುಕೊಳ್ಳುವುದು ಹೈಕಮಾಂಡ್. ಅಧ್ಯಕ್ಷರಾದ ಡಿಕೆಶಿ ಕೂಡ ಬೇರೆ ರೀತಿ ಆಲೋಚನೆ ಮಾಡ್ತಿಲ್ಲ. ಎಲ್ಲರೂ ಒಂದಾಗಿ ಹೋಗೋಣ ಎಂದೇ ಆಲೋಚನೆ ಇದೆ. ಶಾಶ್ವತವಾಗಿ ಒಬ್ಬರೇ ಇರಬೇಕು ಎಂದೇನಿಲ್ಲ ಎಂದರು.
ಯತ್ನಾಳ್ ಹೊಸ ಪಕ್ಷ ಕಟ್ಟುತ್ತಿರುವ ವಿಚಾರದ ಬಗ್ಗೆ ಮಾತನಾಡಿ ವಿಶ್ಲೇಷಣೆ ಮಾಡುವುದಿಲ್ಲ ಈಗ. ಆದರೆ ಅನೇಕ ಜನ ಪಾರ್ಟಿ ಹುಟ್ಟಿ ಹಾಕುವ ಪ್ರಯತ್ನ ಮಾಡಿದರು ರಾಜ್ಯದಲ್ಲಿ ದೊಡ್ಡ ದೊಡ್ಡವರೇ ಪಾರ್ಟಿ ಹುಟ್ಟು ಹಾಕಿದರು. ಆದರೆ ಯಶಸ್ವಿ ಆಗಿಲ್ಲ. ಯತ್ನಾಳ್ ಅವರ ಪಕ್ಷಗಳ ಗೊಂದಲದಿಂದ ಪಾರ್ಟಿ ಹುಟ್ಟುತ್ತಿದೆ. ಯತ್ನಾಳ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಡೆ ಬರಲು ಸಾಧ್ಯವಿಲ್ಲ. ಅವರ ಸಿದ್ದಾಂತವೇ ಬೇರೆ ನಮ್ಮ ಸಿದ್ದಾಂತವೇ ಬೇರೆ. ಜೆಡಿಎಸ್ ಕಡೆ ಬೇಕಿದ್ದರೆ ಹೋಗಲು ಚರ್ಚೆ ಮಾಡಬಹುದು. ಯತ್ನಾಳ್ ಅವರಿಗೆ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುತ್ತದೆ ಎಂದು ನನಗಂತೂ ಅನಿಸುವುದಿಲ್ಲ ಎಂದ್ರು.
ರಾಜೇಂದ್ರ ರಾಜಣ್ಣ ಸುಪಾರಿ ವಿಚಾರ ಬಹಳ ಗಂಭೀರವಾದ ವಿಷಯ. ತನಿಖೆ ಮಾಡಿ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜಣ್ಣ ಕೂಡ ಹನಿಟ್ರ್ಯಾಪ್ ಬಗ್ಗೆ ದೂರು ಕೊಟ್ಟಿದ್ದಾರೆ. ಮಾಹಿತಿ ಸಂಗ್ರಹ ಆಗಿ ಎಲ್ಲ ಹೊರ ಬರಲೇಬೇಕು. ಪರಮೇಶ್ವರ್ – ರಾಜಣ್ಣ ಬಹಳ ಒಳ್ಳೆ ಬಾಂಧವ್ಯ ಇದೆ. ಅವರಿಬ್ಬರೂ ಬೆಂಚ್ ಮೇಟ್ಸ್ ಕೂಡ. ಹೀಗಾಗಿ ಒಳ್ಳೆಯ ತನಿಖೆಯೇ ಆಗುತ್ತದೆ. ದೆಹಲಿಗೆ ಹೋಗಿ ಸಿಎಂ ಬಹಳ ದಿನಗಳಾಗಿತ್ತು. ಕೇಂದ್ರದಲ್ಲಿ ವರಿಷ್ಟರನ್ನು ಭೇಟಿ ಮಾಡ್ತಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಯವರನ್ನೂ ಕೂಡ ಸಿಎಂ ಭೇಟಿ ಮಾಡ್ತಾರೆ. ಬಹಳ ದಿನ ಆಗಿತ್ತು ಸಿಎಂ ದೆಹಲಿಗೆ ಹೋಗಿ. ಮುಡಾ ಪ್ರಕರಣ ಆದಮೇಲೆ ಆರೋಗ್ಯ ಸ್ವಲ್ಪ ಏರು ಪೇರಾಗಿ ಬಜೆಟ್ ಕೂಡ ಇದ್ದ ಕಾರಣದಿಂದ ದೆಹಲಿಗೆ ಸಿಎಂ ಹೋಗಿರಲಿಲ್ಲ. ಎಲ್ಲ ವಿಷಯಗಳನ್ನೂ ಚರ್ಚೆ ಮಾಡಿ ಬರ್ತಾರೆ . ಸಿಎಂ ದೆಹಲಿಯಿಂದ ಬಂದ ಮೇಲೆ ಮುಂದಿನ ಹೆಜ್ಜೆ ಏನು ಎಂಬುದು ಗೊತ್ತಾಗುತ್ತದೆ ಎಂದ್ರು