ಮನೆ Latest News ಯತೀಂದ್ರ‌ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ; ಯತೀಂದ್ರ‌ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ.

ಯತೀಂದ್ರ‌ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ; ಯತೀಂದ್ರ‌ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ.

0

ಯತೀಂದ್ರ‌ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ. ಅವರ ತಂದೆ ನಂತ್ರ ಸತೀಶ್ ಹೆಸರು ಪ್ರಸ್ತಾಪ ಮಾಡಿದ್ದಾರೆ.ಎರಡೂವರೆ ವರ್ಷ ಆದ್ಮೇಲೆ ಹೇಳಿದ್ದು. ಸತೀಶ್ ಜಾರಕಿಹೊಳಿ ಆಗಬೇಕು ಎಂದು ಹೇಳಿದ್ದಾರೆ ಅಷ್ಟೇ. ಆದ್ರೆ ಸತೀಶ್ ಅವರು 28 ಕ್ಕೆ ಸಿಎಂ ಆಕಾಂಕ್ಷಿ ಅಂತ‌ ಜಾರಕಿಹೊಳಿ ಹೇಳಿದ್ದಾರೆ ಎಂದು ಎಂಎಲ್ಸಿ ರಾಜೇಂದ್ರ ರಾಜಣ್ಣ ಹೇಳಿದ್ದಾರೆ.

ಚರ್ಚೆ ನಡೀತಾ ಇರಬಹುದು, ಇದು ಸಿಎಂ ಹೇಳಿಕೆ ಅಲ್ಲ. ಇದು ಯತೀಂದ್ರ ಹೇಳಿಕೆ, ಅದು ಅವರ ವೈಯಕ್ತಿಕ ಹೇಳಿಕೆ. ನಮಗೂ ಆಸೆ ಇದೆ, ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಇದೆ. ಇದು ಹೈಕಮಾಂಡ್ ತೀರ್ಮಾನ ಮಾಡಬೇಕು. ಇದು ಪಕ್ಷದ ಅಧ್ಯಕ್ಷ ಹೇಳಿದ್ದಾರೆ. ಯಾರಾದರೂ ಹೇಳಿಕೆ ಕೊಟ್ಟರೇ ನೋಟಿಸ್ ನೀಡುತ್ತೇನೆ ಎಂದಿದ್ದಾರೆ

ಹೈಕಮಾಂಡ್ ಗಿಂತ ಯತೀಂದ್ರ ಪವರ್ ಫುಲ್ ಅಂತ‌ ಏನಿಲ್ಲ. ಅವರೊಂದು ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ . ಅದರಲ್ಲಿ ಏನೂ ತಪ್ಪಿಲ್ಲ, ಅದು ವೈಯಕ್ತಿಕ ಹೇಳಿಕೆ. ಸಿಎಂ‌ ಮಗನದ್ದು ಹೇಳಿಕೆ ಅಷ್ಟೇ , ಸತೀಶ್ ಸಿಎಂ ಆಗಲಿ ಎಂದಿದ್ದಾರೆ. ನಮಗೂ ಆಸೆ ಇದೆ, ಸತೀಶ್ ಜಾರಕಿಹೊಳಿ ಸಿಎಂ‌ಆದ್ರೆ ಒಳ್ಳೆಯದು ಎಂಬ ಭಾವನೆ ನಮ್ಮದು ಇದೆ. ನೋಟಿಸ್ ಬಗ್ಗೆ ಅಧ್ಯಕ್ಷ ರು ನೋಡುತ್ತಾರೆ. ನೋಟಿಸ್ ಕೊಟ್ಟರೂ ಕೊಡಬಹುದೇನೋ ಎಂದು ತಿಳಿಸಿದ್ದಾರೆ.

ಡಿಕೆ ಟೆಂಪಲ್ ರನ್ ವಿಚಾರದ ಬಗ್ಗೆ ಮಾತನಾಡಿದ ಅವರು ದೇವಸ್ಥಾನಕ್ಕೆ ಯಾಕೆ ಹೋಗ್ತಾರೆ. ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ಹೋಗ್ತಾರೆ. ನೀವು ನಾವು ಹೋಗಬಹುದು. ದೇವಸ್ಥಾನಕ್ಕೆ ಹರಕೆ ತಿರಿಸಿಲು, ಅಥವಾ ಒಳ್ಳೆಯ ಸ್ಥಾನಕ್ಕೆ ಹೋಗಲಿ ಎಂದು ಹೋಗಬಹುದು ಎಂದ ಅವರು ಡಿಸೆಂಬರ್ ನಂತ್ರ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ  ಶಾಸಕಾಂಗ ಸಭೆ ಕರೀಬೇಕು ಅಲ್ವೇ. ಸಭೆ ಕರೆದು, ಶಾಸಕರು ಹೇಳಬೇಕು. ಬಿಹಾರ ಎಲೆಕ್ಷನ್ ಆದ್ಮೇಲೆ‌ ಬಹಳ ಬದಲಾವಣೆ ಇದೆ.ಬಿಹಾರ ಎಲೆಕ್ಷನ್ ಆಗಲಿ. ಬದಲಾವಣೆ ಅಂತ ಇದೆ, ಆಗಬಹುದು ಅಂತ‌ ನಾನು ಹೇಳುತ್ತೇನೆ ಎಂದಿದ್ದಾರೆ.

ರಾಜಣ್ಣ ಮತ್ತೆ ಸಂಪುಟ ಸೇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಏನೂ ತಪ್ಪು ಮಾಡಿಲ್ಲಂತವರಿಗೆ ತೆಗೆದಿದ್ದಾರೆ.ಮುಂದೆ ಮಾಡಬಹುದು, ಪುನಾರಚನೆ ವೇಳೆ ಮಾಡಬೇಕು ಎಂದು ಕೇಳಿದ್ದೇವೆ ಎಂದ ಅವರು  ಪರಮೇಶ್ವರ್ ಕ್ಷೇತ್ರ ಆಯ್ಕೆ ವಿಚಾರವಾಗಿ ಮಾತನಾಡಿ ಅವರು ಹಿರಿಯ ಶಾಸಕರು. ಮಧುಗಿರಿಯಲ್ಲಿ ನಿಲ್ಲೋದಾದ್ರೆ ನಾವೇನು ಬೇಡ ಅನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯತೀಂದ್ರಗೆ ನೋಟಿಸ್ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ  ಅದನ್ನು ಪಕ್ಷದ ಅಧ್ಯಕ್ಷರು ನೋಡುತ್ತಾರೆ. ನೋಟಿಸ್ ಕೊಡಬಹುದೇ ಎನ್ನೋ ಗೊತ್ತಿಲ್ಲ ಎಂದರು. ಡಿಕೆಶಿ ಟೆಂಪಲ್ ರನ್ ವಿಚಾರವಾಗಿ ಮಾತನಾಡಿ ದೇವಸ್ಥಾನ ಹೋಗೋದರಲ್ಲಿ ತಪ್ಪು ಇಲ್ಲ ನೀವು ಹೋಗ್ತೀರಿ ನಾನು ದೇವಸ್ಥಾನಕ್ಕೆ ಹೋಗ್ತೀನಿ. ಮುಂದೆ ಒಳ್ಳೆ ಅಧಿಕಾರ ಸಿಗಲಿ ಅಂತ ಕೂಡ ಹೋಗಬಹುದು ಎಂದರಪು. ಡಿಸೆಂಬರ್ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ  ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಲ್ವಾ. ಅಲ್ಲಿ ಶಾಸಕರು ಯಾರಿಗೆ CLP ನಾಯಕರನ್ನಾಗಿ ಆಯ್ಕೆ ಮಾಡ್ತಾರೆ ನೋಡಬೇಕು ಎಂದು ಹೇಳಿದ್ದಾರೆ.

ರಾಜಣ್ಣ ಅವರ ನವೆಂಬರ್ ಕ್ರಾಂತಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಬಿಹಾರ ಎಲೆಕ್ಷನ್ ಆದ ಮೇಲೆ ಬದಲಾವಣೆ ಆಗುತ್ತೆ. ರಾಜಣ್ಣ ಅವರು ಮತ್ತೆ ಸಚಿವ ಸಂಪುಟ ಸೇರ್ತಾರೆ ಅಂತ ಭರವಸೆ ಇದೆ. ಶಿರಾ ತಾಲೂಕು ಸೇರಿ ಹಲವು ಕಡೆ ಹೋರಾಟ ಮಾಡಿದರೆ ರಾಜಣ್ಣಗೆ ಸಚಿವ ಸ್ಥಾನ ಕೊಡಿ ಅಂತಾ ಎಂದಿದ್ದಾರೆ.