ಮನೆ Latest News ಸಿದ್ದರಾಮಯ್ಯ ಐದು ವರ್ಷ ಸಿಎಂ ಅನ್ನೋದು ಸೆಟಲ್ ಆಗಿರೋ ವಿಚಾರ ಎಂಬ ಯತೀಂದ್ರ ಹೇಳಿಕೆ ;...

ಸಿದ್ದರಾಮಯ್ಯ ಐದು ವರ್ಷ ಸಿಎಂ ಅನ್ನೋದು ಸೆಟಲ್ ಆಗಿರೋ ವಿಚಾರ ಎಂಬ ಯತೀಂದ್ರ ಹೇಳಿಕೆ ; ಅದು ಅವರ ವೈಯಕ್ತಿಕ ಹೇಳಿಕೆ ಎಂದ ಡಾ.ಜಿ ಪರಮೇಶ್ವರ್

0

ಬೆಂಗಳೂರು; ಸಿದ್ದರಾಮಯ್ಯ ಐದು ವರ್ಷ ಸಿಎಂ ಅನ್ನೋದು ಸೆಟಲ್ ಆಗಿರೋ ವಿಚಾರ ಎಂಬ ಯತೀಂದ್ರ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು  ಅದು ಅವರ ವೈಯಕ್ತಿಕ ಹೇಳಿಕೆ. ನಾವು ಹೈಕಮಾಂಡ್ ಮೇಲೆ ಡಿಪೆಂಡ್ ಆಗಿದೀವಿ.ಅಧಿಕಾರ ಒಪ್ಪಂದ ಆಗಿದೆ ಅಂತ ಯಾರು ಹೇಳಿದ್ದು, ಹೈಕಮಾಂಡ್ ನವ್ರು ಹೇಳಿದ್ದಾರಾ?. ಅದನ್ನು ಹೈಕಮಾಂಡ್ ಹೇಳಬೇಕು. ಅದರ ಬಗ್ಗೆ ಡಿಕೆಶಿ ಹೇಳಿರಬಹುದು, ಅದು ಅವರ ಅಭಿಪ್ರಾಯ. ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ. ಅವರು ಒಳಗೆ ಇದ್ರು. ಏನು ನಡೆದಿದೆ ಅಂತ ಸಿಎಂ ಡಿಸಿಎಂಗೆ‌ ಮತ್ತು ಹೈಕಮಾಂಡ್ ಗೆ ಅಷ್ಟೇ ಗೊತ್ತಿದೆ.

ಆದರೆ ಹೈಕಮಾಂಡ್ ಸುಮ್ಮನೆ ಇದ್ರೆ ಏನು ಅರ್ಥ ಮಾಡಿಕೊಳ್ಳೋದು ನಾವು?. ಒಪ್ಪಂದ ಆಗಿದ್ರೆ ಹೈಕಮಾಂಡ್ ಹೇಳಬಹದು ಅಥವಾ ಕ್ರಮ ತಗೋಬಹುದು. ಹೈಕಮಾಂಡ್ ಏನೂ ಹೇಳದೇ, ಏನೂ ತೀರ್ಮಾನ ಮಾಡದೇ ನಮಗೆ ಕೇಳಿದ್ರೆ ಪ್ರಯೋಜನ ಇಲ್ಲ. ಹೈಕಮಾಂಡ್ ಗೆ ಏನು ಮಾಡಬೇಕು ಅಂತ ಗೊತ್ತಿದೆ. ಹೈಕಮಾಂಡ್ ಗೆ ಯಾವ ರೀತಿ ಮ್ಯಾನೇಜ್ ಮಾಡಬೇಕು ಅಂತ ಗೊತ್ತಿದೆ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಬೇಕು ಅನೇಕರು ಹೇಳಿಕೆಗಳನ್ನು ಕೊಡಬಹುದು, ಅವು ಹೇಳಕೆಗಷ್ಟೇ ಸೀಮಿತ ಆಗುತ್ವೆ. ಆದ್ರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಪರಿಸ್ಥಿತಿ ಏನಿದೆ ಎಲ್ಲ ಗಮನಿಸಿದ್ದಾರೆ ಹೈಕಮಾಂಡ್. ಯಾವಾಗ ತೀರ್ಮಾನ ಮಾಡಬೇಕೋ ಮಾಡ್ತಾರೆ.ಹೈಕಮಾಂಡ್ ಕರೆ ಬಂದರೆ ಮಾತ್ರ ಎಲ್ಲ ಇತ್ಯರ್ಥ ಆಗೋದು ಎಂದಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಲೈಪ್ ಸರ್ಟಿಫಿಕೇಟ್ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಕ್ಕಳ ಕಲ್ಯಾಣ ಸಚಿವರು ಇದ್ದಾರೆ. ಈ ಬಗ್ಗೆ ಕ್ಯಾಬಿನೆಟನಲ್ಲಿ ಚರ್ಚೆಯಾಗಿಲ್ಲ ಎಂದಿದ್ದಾರೆ. 54 ಜನರಿಗೆ ನಿಗಮಮಂಡಳಿ ಸದಸ್ಯರಿಗೆ ಕ್ಯಾಬಿನೆಟ್ ಸ್ಥಾನ ಕೊಟ್ಟಿರೋ ವಿಚಾರದ ಬಗ್ಗೆ ಮಾತನಾಡಿ ಸಿಎಂ ಹಿಂದೆ ಬೋರ್ಡ್ ಅಧ್ಯಕ್ಷರಿಗೆ ಕೊಟ್ಟಿದ್ದರೋ, ಅದೇ ಸ್ಥಾನಮಾನವನ್ನ ಕೊಡಬೇಕು. ಹಿಂದೆ ಇರೋ ರೀತಿ ಸ್ಥಾನಮಾನ ಕೊಟ್ಟಿದ್ದಾರೆ. ಹೊಸದೇನಿಲ್ಲ.  ಎಂದು ತಿಳಿಸಿದ್ದಾರೆ.