ಕೋಲಾರ: ಯತೀಂದ್ರ ಅಪ್ಪ ಮುಂದುವರೆದರೆ ತನ್ನ ಜೋಳಿಗೆ ತುಂಬುತ್ತೆ ಅಂದುಕೊಂಡಿದ್ದಾರೆ ಎಂದು ಕೋಲಾರದ ಕೆಜಿಎಫ್ ನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್ ನಲ್ಲಿ ಭೀಮ ನಡಿಗೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಇನ್ನು ಎರಡೂವರೆ ವರ್ಷ ಮುಂದುವರೆಯುತ್ತಾರೆ ಅನ್ನೋ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಯತೀಂದ್ರ ಅಪ್ಪ ಮುಂದುವರೆದರೆ ತನ್ನ ಜೋಳಿಗೆ ತುಂಬುತ್ತೆ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಮಗನಷ್ಟೇ ಅಲ್ಲ ಹಲವರಿಂದ ಈ ರೀತಿ ಹೇಳಿಸುತ್ತಿದ್ದಾರೆ. ಹೀಗೆ ಹೇಳಿ ಕೆಲವರ ಮಂತ್ರಿ ಪದವಿಯೇ ಹೋಗಿದೆ. ಬೆಳಗಾವಿಯಲ್ಲಿ ಸತೀಶ್ ಜಾರಕೊಹೊಳಿ ಅವರನ್ನು ಎತ್ತಿಕಟ್ಟುತ್ತಿದ್ದಾರೆ ಎಂದಿದ್ದಾರೆ.
ಪಂಚ ಗ್ಯಾರಂಟಿ ವಿಚಾರವಾಗಿ ವ್ಯಂಗ್ಯವಾಡಿದ ಪ್ರತಾಪ್ ಸಿಂಹ ನಿನ್ನ ಹೆಂಡತಿಗೂ ಫ್ರೀ ಅಂತ ಹೇಳಿ ಬರೀ ತಮಟೆ ಹೊಡೆಯುತ್ತಿದ್ದಾರೆ. ಹಾಲಿನ ಬಿಲ್ ಜಾಸ್ತಿ ಆಯ್ತು, ಬಸ್ ವ್ಯವಸ್ಥೆ ಹಾಳಾಯ್ತು, ಗೃಹ ಲಕ್ಷ್ಮಿ ಹಣ ಬರ್ತಿಲ್ಲ, ಹೀಗೆ ರಾಜ್ಯದ ಅರ್ಥ ವ್ಯವಸ್ಥೆ ಹಾಳು ಮಾಡಿ ಎಂಟು ಲ ಕ್ಷಕೋಟಿ ಸಾಲ ಮಾಡಿದ ಕುಖ್ಯಾತಿ ಸಿದ್ದರಾಮಯ್ಯ ಅವರಿಗಿದೆ.ಹದಿನಾರು ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಸತ್ತ ಸರ್ಕಾರದ ಮುಖ್ಯಮಂತ್ರಿ. ಸರ್ಕಾರ ಸತ್ತುಹೋಗಿದೆ ಸತ್ತ ಸರ್ಕಾರದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊರುತ್ತಿದ್ದಾರೆ . ಡಿಕೆ ಶಿವಕುಮಾರ್ ಹಿಂದೆ ಹೊರುತ್ತಿದ್ದಾರೆ.ಈಗ ಡಿಕೆ ಶಿವಕುಮಾರ್ ಗೆ ಮುಂದೆ ಹೊರಬೇಕು ಅಂತ ಆಸೆ ಇದೆ ಆದರೆ ಸಿದ್ದರಾಮಯ್ಯ ನಾನೇ ಹೊರಬೇಕು ಎನ್ನುತ್ತಿದ್ದಾರೆ ಆದರೆ ಯಾರೇ ಹೊರಲಿ ಸರ್ಕಾರ ಮಾತ್ರ ಸತ್ತೋಗಿದೆ ಎಂದು ಲೇವಡಿ ಮಾಡಿದ್ದಾರೆ.
ಸರ್ಕಾರವನ್ನು ತೊಲಗಿಸಲು ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ. ನೂರ ನಲವತ್ತು ಸೀಟು ಕೊಟ್ಟ ಜನರು ಮಾಡಿದ ತಪ್ಪಿಗೆ ಜನರು ಅನುಭವಿಸಬೇಕು. ಮೈಮರೆತ ನಾವು ಬಿಜೆಪಿಯವರು ಅನುಭವಿಸಬೇಕು. ಕೇಂದ್ರದ ವಿತ್ತ ಸಚಿವರನ್ನು ಸಿದ್ದರಾಮಯ್ಯ ಏಕವಚನದಲ್ಲಿ ಸಂಭೋಧನೆಯನ್ನು ಪ್ರತಾಪ್ ಸಿಂಹ ಖಂಡಿಸಿದ್ದಾರೆ. ನೀವು ಒಬ್ಬ ಹಣಕಾಸು ಸಚಿವರಾಗಿ ಕೇಂದ್ರದ ಹಣಕಾಸು ಸಚಿವರ ಹೆಸರು ಗೊತ್ತಿಲ್ಲವೇ. ಗೊತ್ತಿದ್ದರೂ ಈ ರೀತಿ ಉಢಾಪೆ ಮಾತಾಡಿದ್ರಾ. ನಾವು ನಿಮ್ಮನ್ನ ಯಾವೊನೋ ಅವನು ಮೂಡಾದಲ್ಲಿ ಹೆಂಡತಿ ಹೆಸರಲ್ಲಿ ೧೪ ಸೈಟ್ ಹೊಡೆದೋನು ಯಾವೋನೋ ಅಂದರೆ ನಿಮಗೆ ಹೇಗಾಗುತ್ತೆ. ಕೇಂದ್ರ ಸಚಿವೆ ಹೆಣ್ಣು ಮಗಳ ಬಗ್ಗೆ ಹೀಗೆ ಮಾತಾಡಿ ಸಮಾಜಕ್ಕೆ ಯಾವ ಮೇಲ ಪಂಕ್ತಿ ಹಾಕಿ ಕೊಡುತ್ತಿದ್ದೀರಿ. ದ್ವೇಷ ಬಾಷಣ ಬಿಲ್ ಪಾಸ್ ಆದರೆ ಮೊದಲ ಪ್ರಕರಣ ಸಿದ್ದರಾಮಯ್ಯ ಅವರ ಮೇಲೆ ಹಾಕಬೇಕು. ದೇಶದ ಹೆಣ್ಣು ಮಗಳ ಬಗ್ಗೆ ಅಗೌರವ ತೋರಿರುವ ಸಿದ್ದರಾಮಯ್ಯ ಮೇಲೆ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.











