ಮನೆ Latest News ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ?; ಗೃಹ ಸಚಿವ ಡಾ.ಜಿ....

ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ?; ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಶ್ನೆ

0

ಬೆಂಗಳೂರು; ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು  ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಭವಿಷ್ಯದ ಆಹಿಂದ ನಾಯಕತ್ವ ಕುರಿತು ಯತೀಂದ್ರ ಹೇಳಿಕೆ  ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ

ಅದರಲ್ಲಿ ತಪ್ಪೇನಿದೆ? ಎಂದಿದ್ದಾರೆ. ಹಿಂದೆ ಅವರು ಅಹಿಂದ ಚಳುವಳಿಯಲ್ಲಿದ್ರು, ಅವರಿಗೆ ಆ ಬದ್ಧತೆ ಇದೆ ಅಂತ ಹೇಳಿರಬಹುದು. ಸಿಎಂ ಹುದ್ದೆಯನ್ನು ದೃಷ್ಟಿಯಲ್ಲಿ ಇಟ್ಕೊಂಡು ಅವರು ಹೇಳಿಲ್ಲ ಎಂಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಪೈಪೋಟಿ  ವಿಚಾರದ ಬಗ್ಗೆ ಮಾತನಾಡಿ ಸಂಘಸಂಸ್ಥೆಗಳು ಅನುಮತಿ ಪಡೆಯುವ ಬಗ್ಗೆ ಆದೇಶ ಆಗಿದೆ.ಅದರಂತೆ ಅನುಮತಿ ಪಡೆಯಬೇಕು. ಸಂಘರ್ಷ ನಡೀತಿರುವ ಬಗ್ಗೆ ಗೊತ್ತಿಲ್ಲ ನನಗೆ. ಸಂಘದವರೂ ಅನುಮತಿ ಕೇಳಿದ್ದಾರೆ, ಬೇರೆ ಸಂಘಟನೆಗಳೂ ಕೇಳಿದ್ದಾರೆ. ಸ್ಥಳೀಯ ಆಡಳಿತ ಸುತ್ತೋಲೆ ಆಧರಿಸಿ ತೀರ್ಮಾನ ತಗೊಳ್ಳುತ್ತೆ.ನಮ್ಮ ಸುತ್ತೋಲೆಯಲ್ಲಿ ಎಲ್ಲೂ ಆರ್‌ಎಸ್‌ಎಸ್ ಅನ್ನುವ ಶಬ್ಧ ಬಂದಿಲ್ಲ. ನಾವು ಆರ್‌ಎಸ್‌ಎಸ್‌ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಆದೇಶ ಮಾಡಿಲ್ಲ. ಇದು ಎಲ್ಲರಿಗೂ ಅನ್ವಯ ಆಗುತ್ತೆ. ಸಂಘರ್ಷ ಆಗಬಾರದು, ಅಂತ ನಿಯಮ ಹಾಕಿದೀವಿ. ಶಾಲಾ ಕಾಲೇಜುಗಳಿಗೆ ತೊಂದರೆ ಆಗಬಾರದು ಅನ್ನೋ ಉದ್ದೇಶ ಎಂದು ಹೇಳಿದ್ದಾರೆ.

2013 ಶೆಟ್ಟರ್ ಸಿಎಂ ಆಗಿದ್ದಾಗ ಶಾಲಾ ಚಟುವಟಿಕೆಗಳಿಗಾಗಿಯೇ ಆದೇಶ ಮಾಡಿದ್ರು. ಅದನ್ನೇ ನಾವು ಪುನರ್ ಪರಿಶೀಲನೆ ಮಾಡಿ ತಂದಿದ್ದೇವೆ.ಸಮಸ್ಯೆ ಬಂದಾಗ ಪರಿಹಾರ ಕಂಡುಕೊಳ್ಳಬೇಕು, ಅದನ್ನೇ ಮಾಡಿದೀವಿ.ಸಂಘ ಪಥ ಸಂಚಲನದಿಂದ ಈ ಗೊಂದಲ ಶುರುವಾಗಿರಬಹುದು, ಆದ್ರೆ ತೊಂದರೆ ಆಗಬಾರದು ಅಂತ ಆದೇಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಯತೀಂದ್ರ ಅವರು ಸೈದ್ಧಾಂತಿಕವಾಗಿ ಸತೀಶ್ ಜಾರಕಿಹೊಳಿ ಹೆಸರು ಹೇಳಿದ್ದಾರೆ . ಅಹಿಂದ ಪ್ರಾರಂಭ ಆದಾಗ ಸತೀಶ್ ಜಾರಕಿಹೊಳಿ ಮುಖ್ಯ ಪಾತ್ರ ವಹಿಸಿದ್ರು. ಆ ಹಿನ್ನೆಲೆಯಲ್ಲಿ ಅವರ ಹೆಸರು ಹೇಳಿದ್ದಾರೆ, ಅದರಲ್ಲಿ ತಪ್ಪೇನಿದೆ?.ನಾಯಕತ್ವದ ಲೆಕ್ಕದಲ್ಲಿ ಯತೀಂದ್ರ ಮಾತಾಡಿಲ್ಲ ಅಂತ ನನಗೆ ಅನ್ಸತ್ತೆ. ಸಮಾಜದ ಬದ್ಧತೆ, ಪಕ್ಷದ ಬದ್ಧತೆ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ. ಹಿಂದೆ ಅವರು ಅಹಿಂದ ಸಂಘಟನೆಯಲ್ಲಿದ್ರು, ಅವರಿಗೆ ಆ ಬದ್ಧತೆ ಇದೆ ಅಂತ ಹೇಳಿರಬಹುದು, ತಪ್ಪೇನಿಲ್ಲ ಎಂದರು. ಸಿಎಂ ಸ್ಥಾನದ ಬದಲಾವಣೆ ಬಗ್ಗೆ ಚರ್ಚೆ ಆಗ್ತಿರುವ ವಿಚಾರದ ಬಗ್ಗೆ ಮಾತನಾಡಿ ಈ ಥರ ಚರ್ಚೆ ಏನೂ ನಡೀತಿಲ್ಲ.ಎಲ್ರೂ ಇದರ ಬಗ್ಗೆ ನೂರು ಸ್ಪಷ್ಟನೆ ಕೊಟ್ಟಿದ್ದಾರೆ. ರೇಸ್ ನಲ್ಲಿ ಪರಮೇಶ್ವರ್ ಹೆಸರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ  ಯಾವುದಾದರೂ ರೇಸ್ ಇರಲಿ, ಹೈಕಮಾಂಡ್ ನಿರ್ಧಾರ ಅಂತಿಮ.ಆ ಸಂದರ್ಭ ಬಂದಾಗ ಸಿಎಲ್‌ಪಿ ಸಭೆ ಕರೆಯುತ್ತಾರೆ, ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ವೀಕ್ಷಕರು ಹೈಕಮಾಂಡ್ ಗೆ ವರದಿ ಕೊಟ್ಟು ನಂತರ ಘೋಷಣೆ ಆಗುತ್ತೆ, ಇದು ಪದ್ಧತಿ. ಇದನ್ನು ಶಾರ್ಟ್ ಕಟ್ ಹೇಗೆ ಮಾಡ್ತಾರೆ ಹೇಳಿ.ನಾನು, ಸತೀಶ್, ಮಹದೇವಪ್ಪ ಕಾಫಿಗೆ ಸೇರಿದ್ವಿ ಅಷ್ಟೇ ಎಂದಿದ್ದಾರೆ.