ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್, ಬಿಜೆಪಿ ಮಹಿಳಾ ಮೋರ್ಛಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶಾಂತಲಾ ಭಟ್, ಮಹಿಳಾ ಮೋರ್ಛಾ ಮಾಜಿ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧನೆ ಮಾಡಿದ ಆರು ಮಹಿಳೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ಎಂದರೆ ಅಡುಗೆ ಮನೆಗೆ ಸೀಮಿತ ಎಂಬ ಭಾವನೆ. ಹಾಗಾಗಿ ಅವರು ಯಾವತ್ತೂ ಮಹಿಳೆಯರನ್ನು ಮುಂದೆ ತರಲು ಪ್ರಯತ್ನವನ್ನೇ ಮಾಡಲಿಲ್ಲ.ನಿನ್ನೆಯ ಬಜೆಟ್ ಜಮೀರ್ ಅಹಮದ್ ಬಜೆಟ್ ಅಂತಾ ಎಲ್ಲಾ ಹಿಂದೂಗಳಿಗೆ ಅನ್ನಿಸಿದೆ.ಸಿದ್ದರಾಮಯ್ಯನವರೇ ಹಿಂದೂ ಮಹಿಳೆಯರು ನಿಮ್ಮ ಬಜೆಟ್ ನಲ್ಲಿ ಫಲಾನುಭವಿಗಳು ಆಗಲು ಸಾಧ್ಯವಿಲ್ವಾ?.ಭಾಗ್ಯಲಕ್ಷ್ಕೀ ಯೋಜನೆ ಲಾಭ ಮುಸ್ಲಿಂ ಮಹಿಳೆಯರು ಪಡೆದಿಲ್ವಾ?.ನನ್ನ ಪ್ರಕಾರ ಭಾಗ್ಯಲಕ್ಷ್ಮೀ ಯೋಜನೆ ಲಾಭ ಅತಿ ಹೆಚ್ಚು ಪಡೆದಿದ್ದು ಮುಸ್ಲಿಂ ಮಹಿಳೆಯರು ಎಂದಿದ್ದಾರೆ.
ಸಿದ್ದರಾಮಯ್ಯ ನಿನ್ನೆ ತಮ್ಮ ಕೊನೆಯ ಬಜೆಟ್ ಮಂಡಿಸಿದ್ದಾರೆ.ಪ್ರಧಾನಿ ಮೋದಿ ನಾರಿ ಶಕ್ತಿಗೆ ವಿಶೇಷ ಆದ್ಯತೆ ಕೊಟ್ಟಿದ್ದಾರೆ.33% ಮಹಿಳಾ ಮೀಸಲಾತಿ ಜಾರಿಯಾದರೆ ತಾಯಂದಿರಿಗೆ ಅವಕಾಶ ಸಿಗುತ್ತದೆ
ನಗರಕ್ಕೆ ಸೀಮಿತ ಆಗಿದ್ದ ಬಿಜೆಪಿಯನ್ನು ಹಳ್ಳಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಯಡಿಯೂರಪ್ಪ, ಅನಂತಕುಮಾರ್ ಹಾಗೂ ಇತರ ಮುಖಂಡರು ಮಾಡಿದ್ದಾರೆ.ಯಡಿಯೂರಪ್ಪ 80-90ರ ದಶಕದಲ್ಲಿ ಪಕ್ಷ ಸಂಘಟನೆ ಮಾಡಿದ್ದರ ಹಿಂದಿನ ಶಕ್ತಿ ನಮ್ಮ ತಾಯಿ ಮೈತ್ರಾದೇವಿ. ಯಡಿಯೂರಪ್ಪನವರು ಯಾವತ್ತೂ ದೀಪಾವಳಿ, ಗಣೇಶ ಹಬ್ಬ ಕುಟುಂಬದ ಜೊತೆ ಆಚರಿಸಿದ ಉದಾಹರಣೆಯೇ ಇಲ್ಲ, ಯಾವತ್ತೂ ಪ್ರವಾಸದಲ್ಲಿರುತ್ತಿದ್ದರು.ಯಡಿಯೂರಪ್ಪ ಸದಾ ಪ್ರವಾಸದಲ್ಲಿರುತ್ತಿದ್ದರೂ ನಮ್ಮ ತಾಯಿ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ.ನನ್ನ ಶಿಕಾರಿಪುರದ ಜನ ಇಂದು ಆಯ್ಕೆ ಮಾಡಿದ್ದಕ್ಕೆ ತಾಯಿಯ ಪ್ರೇರಣೆ ಕಾರಣ. ಯಡಿಯೂರಪ್ಪನವರ ಯಶಸ್ಸಿನ ಹಿಂದಿನ ಶಕ್ತಿ ಮತ್ತು ಪ್ರೇರಣೆ ನಮ್ಮ ತಾಯಿ ಮೈತ್ರಾದೇವಿ.ಬಿ.ಬಿ. ಶಿವಪ್ಪನವರ ಪತ್ನಿ ಸುಶೀಲಾ ಶಿವಪ್ಪನವರನ್ನು ಇಂದು ನಾನು ನೆನಪಿಸಿಕೊಳ್ಳಬೇಕು.ಮಹಿಳಾ ಮೋರ್ಛಾ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿದ್ದಾರೆ.ಮುಂದೆ ರಾಜ್ಯದಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ.











