ಬೆಂಗಳೂರು; ಜೆಡಿಎಸ್ ರಾಜ್ಯ ಮಹಿಳಾ ಘಟಕದಿಂದ ಸುಮ್ಮನಹಳ್ಳಿಯ ಡಾ.ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಎಂಎಲ್ಸಿ ಟಿ.ಎ. ಸರವಣ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ 369 ವಾರ್ಡ್ ವಿಂಗಡಣೆ ಮಾಡಿದ್ದಾರೆ. ನಮ್ಮ ಪಕ್ಷ ಎಷ್ಟು ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡುವ ಮಾಡುವ ಶಕ್ತಿ ಹೊಂದಿದೆ ಅನ್ನೋದು ಮುಖ್ಯ. ಜಿಲ್ಲಾ, ಗ್ರಾಮ, ನಗರ ಪಾಲಿಕೆ ಚುನಾವಣೆಗೆ ಮಾತ್ರವಲ್ಲ. ಸರ್ಕಾರ ಎಲ್ಲಾ ಹುದ್ದೆಗಳಲ್ಲೂ, ಎಲ್ಲಾ ಇಲಾಖೆಗಳಲ್ಲೂ 33% ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಟ್ಟಿದ್ದೇ ಕರ್ನಾಟಕ ರಾಜ್ಯ.ಬಿಹಾರದ ನಿತೀಶ್ ಕುಮಾರ್ 1978ರಲ್ಲಿ ಮೀಸಲಾತಿ ತಂದಿದ್ದು ನಾನೇ ಅಂದ್ರು. ಅವರಿಗೆ ಕರ್ನಾಟಕ ಬಹಳ ದೂರು. ಅಂದರೆ ನಮ್ಮಲ್ಲಿ ಪ್ರಚಾರ ಇಲ್ಲ ಅಂತಾಯ್ತು ಅಲ್ವಾ? ನಾನೇ ಟೈಪ್ ಮಾಡಿಸಿದ ಮನವಿ ಪತ್ರ .ಎಲ್ಲಾ ರಾಜಕೀಯ ಪಕ್ಷಗಳಿಗೆ ಆಫೀಸ್ ಲೀಲಾವತಿ ಅವರು ಪತ್ರ ತಲುಪಿಸಿದೆ. ಅದನ್ನ ಮ್ಯಾನಿಫ್ಯಾಸ್ಟೋದಲ್ಲಿ ಹಾಕಿಸಿದ್ರು. 1974ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. 1995ರಲ್ಲಿ ಈ ಮೀಸಲಾತಿ ತರಲಾಯ್ತು. 1996ರಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ತರಲು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದೆ. ಎರಡೂ ಕಡೆ ಮೆಜಾರಿಟಿ ಬಂತು, ಪಾಸ್ ಆಯ್ತು. ಎಲ್ಲ ಕಡೆ ಇದರ ಬಗ್ಗೆ ತೀರ್ಮಾನ ಆಗಿದೆ ಎಂದಿದ್ದಾರೆ.
ಮುಂದಿನ ವಿಧಾನಸಭೆ, ಲೋಕಸಭೆ, ಡಿಲಿಟೇಷನ್ ಸುಗಮವಾಗಿ ನಡೆದರೆ 33% ಮೀಸಲಾತಿ ಹಿಂದೂಸ್ತಾನದಲ್ಲಿ ಬರಬಹುದು ರಶ್ಮಿ ಅವರೇ ನೀವು ನಿಲ್ಲುವ ಸಮಯ ಬರಬಹುದು. 80% ಮಹಿಳೆಯರು ವಿಧಾನಸಭೆಗೆ ನಿಲ್ಲಬೇಕು, ಬಹಳ ಕಷ್ಟ ಆಗಬಹುದು.ನಾನು ಮಾಡಿದ್ದಕ್ಕೆ ಅಂತಿಮ ಸ್ವರೂಪ ಮೋದಿಯವರೇ ಕೊಟ್ಟರು. 140 ಕೋಟಿ ಜನರ ಪರವಾಗಿ ಮೋದಿಯವರಿಗೆ ಅಭಿನಂಧನೆ ಸಲ್ಲಿಸುತ್ತೇನೆ ಹೇಳಿದ್ದಾರೆ.
ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ನನಗೆ ಸ್ವಲ್ಪ ಮನಸ್ಸಿನಲ್ಲಿ ಗೊಂದಲ. 1911 ರಲ್ಲಿ ಯರೋಪ ದೇಶಗಳಲ್ಲಿ ಮೊದಲ ಬಾರಿಗೆ ವಿಶ್ವ ಮಹಿಳಾ ದಿನಾಚರಣೆ ಘೋಷಣೆ ಮಾಡಲಾಯ್ತು. ಇಂಡಿಯಾದಲ್ಲಿ 1975ರಲ್ಲಿ ವಿ ಮಹಿಳಾ ದಿನಾಚರಣೆ ಘೋಷಣೆ ಮಾಡಲಾಯ್ತು. ಮಹಿಳಾ ಘಟಕದ ಒಳ್ಳೆಯ ಕಾರ್ಯಕ್ರಮ ಮಾಡು ಅಂತ ಹೇಳಿದ್ದೆ. ಇಂದು ಬಹಳ ಚನ್ನಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅನಿತಾ ಕುಮಾರಸ್ವಾಮಿ ಈಗಷ್ಟೇ ಮಾತಾಡಿದ್ರು. ಹೆಣ್ಣು ಮಕ್ಕಳಿಗೆ ರಿಜರ್ವೆಷನ್ ಕೊಡಬೇಕು ಅಂತ ಮೊದಲು ತೀರ್ಮಾನ ಮಾಡಿದ್ದು ಕರ್ನಾಟಕದಲ್ಲಿ 33% ಮಹಿಳಾ ಮೀಸಲಾತಿ ಕೊಡಬೇಕು ಅಂತ ತೀರ್ಮಾನ ಮಾಡಿದ್ದೆ. ನಮ್ಮಲ್ಲಿ ಹೋರಾಟ ಕಡಿಮೆ. ಮಹಿಳೆಯರಿಗೆ ಚುನಾವಣೆ ಅವಕಾಶ ಕೊಡಬೇಕು. Mlc ಶರವಣ ಕೇಳಿದ್ರೆ, ನನ್ನ ಮಗಳನ್ನು ಚುನಾವಣೆ ನಿಲಸ್ತೀನಿ ಅಂತಾರೆ. 369 ವಾರ್ಡ್ ನಲ್ಲಿ ಜೆಡಿಎಸ್ ಗೆ ಎಷ್ಟು ವಾರ್ಡ್ ಗೆಲ್ಲುವ ಶಕ್ತಿ ಇದೆ ಅಂತ ಯೋಚನೆ ಮಾಡಬೇಕು. ಎಲ್ಲಾ ಇಲಾಖೆಯಲ್ಲಿ 33% ಮೀಸಲಾತಿ ಮಹಿಳೆಯರಿಗೆ ಕೊಟ್ಟಿದ್ದು ನಮ್ಮ ರಾಜ್ಯದಲ್ಲಿ ನಿತೀಶ್ ಕುಮಾರ್, ಬಿಹಾರದಲ್ಲಿ ಮೊದಲು ಮಹಿಳಾ ಮೀಸಲಾತಿ ಕೊಟ್ಟಿದ್ದಾರೆ ಅಂತ ಹೇಳ್ತಾರೆ. ಆದರೆ ನಮ್ಮಲ್ಲಿ ಪ್ರಚಾರ ಕಡಿಮೆ ಆಯ್ತು. ನಮಗೂ ಬಿಹಾರ ತುಂಬಾ ಆಯ್ತು ಎಂದು ಅವರು ತಿಳಿಸಿದ್ದಾರೆ.
1995ರಲ್ಲಿ ಮೀಸಲಾತಿ ತಂದಿದ್ವಿ, ನಂತರ ಸರ್ಕಾರ ಬಿದ್ದು ಹೋಯ್ತು. ಈಗ ಸುಗಮವಾಗಿ ಕಾಯ್ದೆ ಜಾರಿಗೆಯಾದರೆ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಗಲಿದೆ. ಕ್ಷೇತ್ರ ವಿಂಗಡನೆ ಆದರೆ 80 ಕ್ಷೇತ್ರದಲ್ಲಿ ಮಹಿಳೆಯರು ಅಸೆಂಬ್ಲಿ ಚುನಾವಣೆಯಲ್ಲಿ ನಿಲ್ಲಬೇಕು ಎಂದಿದ್ದಾರೆ.










