ಬೆಂಗಳೂರು; ಸ್ಯಾಂಡಲ್ ವುಡ್ ತಾರೆಯರಾದ ಸೋನಲ್ ಮೊಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಲ್ ಹಾಗೂ ತರುಣ್ ಒಂದಾಗೋದಕ್ಕೆ ಪ್ರಮುಖ ಕಾರಣ ದರ್ಶನ್ ತೂಗುದೀಪ ಅವರು ಅಂತಾ ಈಗಾಗಲೇ ಅನೇಕ ಕಡೆಗಳಲ್ಲಿ ತರುಣ್ ಹಾಗೇನೆ ಸೋನಲ್, ನಿರ್ಮಾಪಕ ಉಮಾಪತಿ ಅವರು ಹೇಳಿದ್ದಾರೆ.ಅಲ್ಲದೇ ನಿನ್ನೆ ಮದುವೆ ಸಂದರ್ಭದಲ್ಲೂ ದರ್ಶನ್ ಅವರು ಇರಬೇಕಾಗಿತ್ತು ಅಂತಾ ಅವರನ್ನು ನೆನಪಿಸಿಕೊಂಡು ನಿರ್ದೇಶಕ ತರುಣ್ ಸುಧೀರ್ ಕಣ್ಣೀರು ಹಾಕಿದ್ದರು.
ಇನ್ನು ಮೊನ್ನೆ ವಿವಾಹಕ್ಕೂ ಮುನ್ನ ಸೋನಲ್ ಹಾಗೂ ತರುಣ್ ಪ್ರೆಸ್ ಮೀಟ್ ನಡೆಸಿದ್ರು. ಈ ವೇಳೆ ಮಾತನಾಡುತ್ತಾ ಸೋನಲ್ ಅವರ ಬಳಿ ಮಾಧ್ಯಮದವರು ನೀವ್ಯಾಕೆ ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸೋನಲ್ ದರ್ಶನ್ ಅವರನ್ನು ಅಂತಹ ಜಾಗದಲ್ಲಿ ನೋಡಲು ನನಗೆ ಬೇಸರವಾಗುತ್ತೆ. ಆ ಕಾರಣಕ್ಕೆ ನಾನು ಅವರನ್ನು ಭೇಟಿಯಾಗಿಲ್ಲ ಎಂದಿದ್ದರು. ಇನ್ನು ಮದುವೆಗು ಮುನ್ನ ತರುಣ್ ಅವರು ದರ್ಶನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಅಲ್ಲದೇ ನನಗೋಸ್ಕರ ಮದುವೆ ದಿನಾಂಕ ಬದಲಿಸಬೇಡಿ ಅದೇ ದಿನ ಮದುವೆ ಆಗಿ ಎಂದು ದರ್ಶನ್ ಹೇಳಿದ್ದಾರೆ. ಹಾಗಾಗಿ ಸದ್ಯ ನಿಗದಿಯಾಗಿರೋ ಡೇಟ್ ಗೆ ಮದುವೆಯಾಗುತ್ತಿದ್ದೇವೆ ಎಂದರು.
ಸದ್ಯ ತರುಣ್ ಸೋನಲ್ ಮದುವೆ ಸಮಾರಂಭ ನೆರವೇರಿದೆ. ಹಾಗಾಗಿ ಈಗ ಸೋನಲ್ ಹಾದಗೂ ತರುಣ್ ಸುಧೀರ್ ಮತ್ತೆ ದರ್ಶನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಅವರಿಬ್ಬರು ದರ್ಶನ್ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲಿ ನವಜೋಡಿ ಡಿ ಬಾಸ್ ಅವರನ್ನು ಭೇಟಿ ಮಾಡಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗುತ್ತಿದೆ.
ಬರ್ತಡೇ ದಿನವೇ ತರುಣ್ ರನ್ನು ವರಿಸಿದ ನಟಿ ಸೋನಲ್ ಮೊಂತೆರೋ; ಅದ್ಧೂರಿಯಾಗಿ ನಡೆಯಿತು ಮದುವೆ ಸಮಾರಂಭ
ಮದುವೆ ಯಾವಾಗ, ಮದುವೆ ಯಾವಾಗ ಅಂತಾ ತರುಣ್ ಸುಧೀರ್ ಅವರನ್ನು ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು ನಿರಂತರವಾಗಿ ಕೇಳುತ್ತಿದ್ದ ಪ್ರಶ್ನೆ ಕೊನೆಗೂ ತರುಣ್ ಸುಧೀರ್ ಅವರು ಉತ್ತರ ಕೊಟ್ಟಿದ್ದಾರೆ. ಕೊನೆಗೂ ತರುಣ್ ಸುಧೀರ್ ಅವರು ಅದ್ಧೂರಿಯಾಗಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.
ಹೌದು.. ಕರಾವಳಿ ಮೂಲದ ಬೆಡಗಿ, ನಟಿ ಸೋನಲ್ ಮೊಂತೆರೋ ಅವರನ್ನು ರಾಬರ್ಟ್ ನಿರ್ದೇಶಕ ತರುಣ್ ಇಂದು ವಿವಾಹವಾಗಿದ್ದಾರೆ. ನಿನ್ನೆ ಅದ್ಧೂರಿಯಾಗಿ ವಿವಾಹದ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಇಂದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು. ಇನ್ನು ಸೋನಲ್ ಬರ್ತಡೇ ದಿನವೇ ಅವರ ಮದುವೆ ಕೂಡ ನಡೆದಿದ್ದು ವಿಶೇಷ. ಬೆಳಗ್ಗೆ 10:50ರಿಂದ 11:35 ವೇಳೆಹೆ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಇನ್ನು ತರುಣ್ ಸುಧೀರ್ ಸೋನಲ್ ಗೆ ಮಾಂಗಲ್ಯ ಧಾರಣೆ ಮಾಡುತ್ತಿದ್ದಂತೆ ಸೋನಲ್ ಭಾವುಕರಾಗಿ ಕಣ್ಣೀರು ಸುರಿಸಿದ್ರು. ಈ ವೇಳೆ ಸೋನಲ್ ಅವರ ಹಣೆಗೆ ಮುತ್ತಿಟ್ಟು ಸುಧೀರ್ ಸಮಾಧಾನಿಸಿದ್ರು. ಇನ್ನು ಮಗನ ಮದುವೆ ಖುಷಿಯಲ್ಲಿ ಮಾಲತಿ ಸುಧೀರ್ ಸಂಭ್ರಮದಿಂದ ಓಡಾಡುತ್ತಿದ್ದರು.
ಇನ್ನು ಸ್ಯಾಂಡಲ್ ವುಡ್ ತಾರೆಯರಾದ ನಟಿ ಶೃತಿ, ನಟ ಶರಣ್, ಲವ್ಲಿ ಸ್ಟಾರ್ ಪ್ರೇಮ್ ಇವರೆಲ್ಲರೂ ಸ್ನೇಹಿತ ಮದುವೆಯಲ್ಲಿ ತಮ್ಮ ಮನೆ ಮದುವೆ ಸಮಾರಂಭ ಅನ್ನೋ ರೀತಿ ಸಂಭ್ರಮಿಸಿದರು. ಸ್ಯಾಂಡಲ್ ವುಡ್ ಬಹುತೇಕ ಎಲ್ಲಾ ತಾರೆಯರು ತರುಣ್ ಹಾಗೂ ಸೋನಲ್ ಗೆ ಶುಭ ಹಾರೈಸಿದರು. ನಟಿ ಸುಧಾರಾಣಿ, ಮಾಳವಿಕ, ಅವಿನಾಶ್, ಗಿರೀಜಾ ಲೋಕೇಶ್, ಸೃಜನ್ ಲೋಕೇಶ್, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ರಚಿತಾ ರಾಮ್, ನಿರ್ಮಾಪಕ ಉಮಾಪತಿ, ರಾಕ್ ಲೈನ್ ವೆಂಕಟೇಶ್, ಸಾಧುಕೋಕಿಲ, ಗೋಲ್ಡನ್ ಸ್ಟಾರ್ ಗಣೇಶ್, , ವಿನೋದ್ ರಾಜ್, ತಾರಾ ಅನುರಾಧಾ ಮೇಘನಾ ಗಾಂವ್ಕರ್, ಅನುಶ್ರೀ, ಟಾಲಿವುಡ್‌ನ ನಟ ಜಗಪತಿ ಬಾಬು, ಸೇರಿದಂತೆ ರಾಜಕೀಯ ರಂಗದಿಂದಲೂ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ತರುಣ್ ಹಾಗೂ ಸೋನಲ್ ಗೆ ವಿಶ್ ಮಾಡಿದ್ರು.
ಇನ್ನು ಇಂದು ಹಿಂದೂ ಸಂಪ್ರದಾಯದಂತೆ ಸೋನಲ್ ಹಾಗೂ ತರುಣ್ ವಿವಾಹ ಸಮಾರಂಭ ನೆರವೇರಿದ್ರೆ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಸೋನಲ್ ಹಾಗೂ ತರುಣ್ ಸುಧೀರ್ ಮದುವೆ ನಡೆಯಲಿದೆ.