ಬೆಂಗಳೂರು; ಚಾಲೆಂಜಿಂಗ್ ಸ್ಟಾರ್ ದರ್ಶನ್ ಮರ್ಡರ್ ಕೇಸ್ ನಲ್ಲಿ ಜೈಲು ಸೇರಿ ಬರೋಬ್ಬರಿ ಎರಡು ತಿಂಗಳಾಯ್ತು. ಈ ವೇಳೆ ಕೆಲವೇ ಕೆಲವು ಆಪ್ತ ನಟರು ಅವ್ರನ್ನ ನೋಡೋದಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೋಗಿದ್ರು. ದರ್ಶನ್ ಜೊತೆಯಲ್ಲಿರುವಾಗ ಅಣ್ಣ, ಬಾಸ್, ದೇವ್ರು ಅಂದವ್ರೆಲ್ಲ ಜೈಲಿನ ಕಡೆ ತಲೆ ಹಾಕಿಯು ಮಲಗಲಿಲ್ಲ. ಅಲ್ಲದೆ ದರ್ಶನ್ ಬಗ್ಗೆ ಪಾಸಿಟಿವ್ ಆಗ್ಲಿ, ನೆಗೆಟಿವ್ ಆಗ್ಲಿ ಮಾತನಾಡದೆ ಡಿಸ್ಟೆನ್ಸ್ ಮೆಂಟೇನ್ ಮಾಡಿದ್ರು.
ಆದ್ರೀಗ ದರ್ಶನ್ ನೋಡೋದಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ರಚಿತಾ ರಾಮ್ ಹೋಗಿರೋದು ದರ್ಶನ್ ಅಭಿಮಾನಿಗಳಲ್ಲೇ ಆಕ್ಷೇಪ ವ್ಯಕ್ತವಾಗಿದೆ. ನಿನ್ನೆ ದರ್ಶನ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ದರ್ಶನ್ ಸರ್ ರಾಜ. ನನಗೆ ರಾಜನನ್ನು ರಾಜನ ರೀತಿಯೇ ನೋಡಲು ಇಷ್ಟ. ಆದರೆ ಅವರನ್ನು ಈ ಸ್ಥಿತಿಯಲ್ಲಿ ನೋಡೋದಕ್ಕೆ ನನಗೆ ತುಂಬಾ ಕಷ್ಟ ಆಗ್ತಿದೆ. ನಾನು ಅವರನ್ನು ಈ ಸ್ಥಿತಿಯಲ್ಲಿ ನೋಡಬಾರದು ಅಂತಾನೇ ಅಂದುಕೊಂಡಿದ್ದ. ಹಾಗಾಗಿ ಇಷ್ಟು ದಿನ ಮನಸ್ಸು ಗಟ್ಟಿ ಮಾಡಿಕೊಂಡು ನೋಡೋದಕ್ಕೆ ಬರ್ಲಿಲ್ಲ. ಆದರೆ ಮನಸ್ಸು ತಡಿಯಲಿಲ್ಲ. ಹಾಗಾಗಿ ಅವರನ್ನು ನೋಡೋದಕ್ಕೆ ಬಂದೆ. ಅವರನ್ನು ನೋಡಿ ಈಗ ಮನಸ್ಸು ನಿರಾಳ ಆಯ್ತು ಎಂದಿದ್ದರು. ಅಲ್ಲದೇ ಈಗ ಡಿ ಬಾಸ್ ದರ್ಶನ್ ಸರ್ ಅವರನ್ನು ನೋಡಿದಾಗ ನಾವೆಲ್ಲರೂ ಕೂಡ ಒಂದು ಕ್ಷಣ ಅಲ್ಲಿ ಭಾವುಕರಾದೆವು. ನನಗೆ ಅವರನ್ನು ಈ ರೀತಿ ನೋಡಲು ಇಷ್ಟವಿರಲಿಲ್ಲ. ಇವತ್ತು ನಾನು ಹೀರೋಯಿನ್ ಆಗೋದಕ್ಕೆ ದರ್ಶನ್ ಸರ್ ಅವರೇ ಕಾರಣ. ನನ್ನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ದರ್ಶನ್ ಸರ್. ಅವರ ಬ್ಯಾನರ್ ನಿಂದಾನೆ ನಾನು ಬಿಂದ್ಯಾ ರಾಮ್ ಆಗಿದ್ದ ನಾನು ರಚಿತಾ ರಾಮ್ ಆದೆ. ಅವರು ನನ್ನನ್ನು ಪರಿಚಯಿಸ್ತಾ ಇರ್ಲಿಲ್ಲ ಅಂದ್ರೆ ನಾನು ಇವತ್ತು ಕೂಡ ಬಿಂದ್ಯಾ ರಾಮ್ ಆಗಿಯೇ ಇರುತ್ತಿದ್ದೆ ಎಂದಿದ್ದರು.
ಆದರೆ ಇದೀಗ ರಚಿತಾ ರಾಮ್ ದರ್ಶನ್ ಅವರನ್ನು ಭೇಟಿಯಾದ ಬಳಿಕ ಒಂದಿಷ್ಟು ಜನ ನೀನ್ಯಾಕಮ್ಮಿ ಅಲ್ಲಿಗೆ ಹೋಗಿದ್ದೆ ಅಂತೆಲ್ಲ ರಿಯಾಕ್ಟ್ ಮಾಡುತ್ತಿದ್ದಾರೆ. ರಚಿತಾ ರಾಮ್ ದರ್ಶನ್ ಮೀಟ್ ಮಾಡಿದ್ದಕ್ಕೆ ಕಾರಣ ಇನ್ನೇನೋ ಇದೆ ಅಂತ ಜನ ಕಮೆಂಟ್ ಮಾಡ್ತಿದ್ದಾರೆ.
ಒಂದು ವಾರದ ಹಿಂದೆ ಸಂಜು ವೆಡ್ಸ್ ಗೀತಾ 2 ಸಿನಿಮಾದ ಪ್ರೆಸ್ ಮೀಟ್ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ರಚಿತಾ ದರ್ಶನ್ ಮೀಟ್ ಮಾಡಿರೋದು ಅವ್ರ ಅಭಿಮಾನಿಗಳು ಹಲವು ರೀತಿ ಯೋಚನೆ ಮಾಡೋದಕ್ಕೆ ಕಾರಣವಾಗಿದೆ. ಸಂಜು ವೆಡ್ಸ್ ಗೀತಾ ಸಿನಿಮಾ ರಿಲೀಸ್ ಡೇಟ್ ಹತ್ತಿರ ಇರೋದ್ರಿಂದ ದರ್ಶನ್ ಫ್ಯಾನ್ಸ್ ನ ಥಿಯೇಟರ್ ಕಡೆಗೆ ಸೆಳೆಯೋದಕ್ಕೆ ರಚಿತಾ ರಾಮ್ ದರ್ಶನ್ ನ ಮೀಟ್ ಮಾಡಿದ್ದಾರೆ ಅನ್ನೋ ಅಭಿಪ್ರಾಯ ಮೂಡಿದೆ. ಇದಕ್ಕೆ ದರ್ಶನ್ ಫ್ಯಾನ್ಸ್ ಕೂಡಾ ರಿಯಾಕ್ಟ್ ಮಾಡಿದ್ದಾರೆ.
ಸಿನಿಮಾ ರಿಲೀಸ್ ಆಗ್ತಿದೆ ಅನ್ನೋ ಕಾರಣಕ್ಕೆ ಮೀಟ್ ಮಾಡಿದ್ರ, ಅಥವಾ ಆರಂಭದ ದಿನಗಳಲ್ಲಿ ತನಗೆ ಸಹಾಯ ಮಾಡಿದ ಕೃತಜ್ಞತೆಗೆ ಭೇಟಿಯಾದ್ರ ಅನ್ನೋದನ್ನ ಅವ್ರೆ ಕ್ಲಿಯರ್ ಮಾಡ್ಬೇಕು. ಆದ್ರೆ ಎರಡು ತಿಂಗಳಿನಿಂದ ನೋಡೋದಕ್ಕೆ ಹೋಗದ ರಚಿತಾ ರಾಮ್ ಈಗ ಸಪ್ರೈಸ್ ವಿಸಿಟ್ ಮಾಡಿರೋದು ಸಿನಿ ಪ್ರಿಯರ ಮನದಲ್ಲಿ ನೂರೆಂಟು ಪ್ರಶ್ನೆ ಹುಟ್ಟುಹಾಕಿದೆ.