ಬೆಂಗಳೂರು: ಒಳ ಮೀಸಲಾತಿ ಸಂಬಂಧ ಬಿಜೆಪಿಯ ನಾಯಕರು ಇಷ್ಟೆಲ್ಲ ಮಾತನಾಡುತ್ತಿದ್ದಾರಲ್ಲ . ಒಂದಾದರೂ ಬಿಜೆಪಿ ರಾಜ್ಯಗಳಲ್ಲಿ ಇದನ್ನು ಜಾರಿಗೆ ತಂದಿದ್ದಾರಾ? ಎಂದು ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಇವರು ಕೊಂಡಾಡ್ತಾರಲ್ಲ ಇಡೀ ಭಾರತದಲ್ಲಿ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಂತ ಹೇಳ್ತಾರಲ್ಲ. ಮಿಕ್ಕಿದ್ದೆಲ್ಲ ಬಿಜೆಪಿ ರಾಜ್ಯಗಳಿದ್ದಾವೆ ಅಂತಾರಲ್ಲ.ಅಲ್ಲಿ ಯಾವುದಾದರೂ ಒಂದು ರಾಜ್ಯದಲ್ಲಾದರೂ ಒಳ ಮೀಸಲಾತಿ ತಂದಿದ್ದಾರಾ? . ಜನಸಂಖ್ಯೆಗೆ ಅನುಗುಣವಾಗಿ ಯಾವುದಾದರು ಒಂದು ರಾಜ್ಯದಲ್ಲಿ ಒಳ ಮೀಸಲಾತಿ ತಂದಿದ್ದಾರಾ?. ಬಿಜೆಪಿ ರಾಜ್ಯದಲ್ಲಿ ಯಾಕೆ ಒಳ ಮೀಸಲಾತಿ ಜಾರಿಗೆ ಆಗುತ್ತಿಲ್ಲ?. ದಲಿತ ನಾಯಕತ್ವ ವಿಚಾರಕ್ಕೂ ಒಳ ಮೀಸಲಾತಿ ವಿಚಾರಕ್ಕೂ ಯಾವುದೇ ಸಮಸ್ಯೆ ಇಲ್ಲ ಯಾವ ಹಿನ್ನಡೆಯೂ ಇಲ್ಲ . ನಮ್ಮ ಲೀಡರ್ ಪರಮೇಶ್ವರ್ ರವರು ಇದ್ದಾರೆ ಮುನಿಯಪ್ಪನವರು ಇದ್ದಾರೆ ಮಹದೇವಪ್ಪ ಅವರು ಇದ್ದಾರೆ.ನೀವು ನನ್ನನ್ನು ನಾಯಕ ಎಂದು ಒಪ್ಪಿಕೊಳ್ಳುವುದಾದರೆ ನಾನು ರೆಡಿ ಇದ್ದೇನೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆಯ
ಒಳ ಮೀಸಲಾತಿ ಜಾರಿ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲರೂ ಸೇರಿ ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಚಿತ್ರದುರ್ಗದಲ್ಲಿ ಸಮಾವೇಶದಲ್ಲೂ ಒಳ ಮೀಸಲಾತಿ ಜಾರಿ ಘೋಷಣೆ ಮಾಡಿದ್ದೆವು.
ನಮ್ಮ ಪ್ರಣಾಳಿಕೆಯಲ್ಲೂ ಇದನ್ನ ಉಲ್ಲೇಖ ಮಾಡಿದ್ದೆವು.ನಮ್ಮ ಸರ್ಕಾರ ಬಂದ ಮೇಲೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದೇವೆ. ಎಂಪೇರಿಕಲ್ ಡೇಟಾ ಇದ್ದರೆ ಒಳ ಮೀಸಲಾತಿ ಜಾರಿ ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಸುಪ್ರೀಂಕೋರ್ಟ್ ಕೂಡ ಆದೇಶ ನೀಡಿತು.ನಮ್ಮ ಬಳಿ ಎಂಪೆರಿಕಲ್ ಡೇಟಾ ಇರಲಿಲ್ಲ. ಸಮೀಕ್ಷೆ ಮೂಲಕ ಎಂಪೆರಿಕಲ್ ಡೇಟಾ ಸಂಗ್ರಹ ಮಾಡಿದ್ದೇವೆ . ಎಂಪಿರೆಕಲ್ ಡೇಟಾ ಸಿಕ್ಕಿದ ಮೇಲೆ ಸ್ವಲ್ಪ ಗೊಂದಲಗಳಿತ್ತು. ಆ ಗೊಂದಲಗಳನ್ನು ಕೂಡ ಎಲ್ಲರೂ ಒಗ್ಗಟ್ಟಾಗಿ ಕೂತು ಸರಿಪಡಿಸುವ ಕೆಲಸ ಮಾಡಿದ್ದೇವೆ.೬:೬:೫ ಮೀಸಲಾತಿ ಹಂಚಿಕೆಯನ್ನು ಕೂಡ ಮಾಡಿದ್ದೇವೆ. ಅಷ್ಟರಲ್ಲಿ 50 ಪರ್ಸೆಂಟ್ ಮೀಸಲಾತಿ 56 ಪರ್ಸೆಂಟ್ ಗೆ ಹೋಗಬೇಕು ಎಂಬುದು ಕೂಡ ಇತ್ತು. ಇದರ ವಿರುದ್ಧವೂ ಕೂಡ ಕೋರ್ಟಿಗೆ ಹೋಗಿದ್ದಾರೆ ಎಂದಿದ್ದಾರೆ.
ಒಟ್ಟು ಆರು ಪ್ರಕರಣಗಳು ಒಳಮೀಸಲಾತಿ ವಿರುದ್ಧ ಕೋರ್ಟ್ ನಲ್ಲಿ ಇವೆ. ನೇಮಕಾತಿಯನ್ನು ಕೂಡ ನಿಲ್ಲಿಸಬೇಕು ಎಂದು ಕೆಲವರು ಹೇಳಿದ ಬಳಿಕ ನೇಮಕಾತಿಯನ್ನು ನಿಲ್ಲಿಸಿದ್ದೆವು. ಇದರ ಮಧ್ಯೆ ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಮೇಲ್ಮನೆ ಕೆಳಮನೆಯಲ್ಲಿ ಕೂಡ ವಿಧೇಯಕವನ್ನು ತಂದು ರಾಜ್ಯಪಾಲರ ಅಂಕಿತವನ್ನು ಪಡೆದುಕೊಂಡಿದ್ದೇವೆ. ಎಲ್ಲಾ ಸಮುದಾಯದ ಸಚಿವರು ಮನವಿ ಮಾಡಿದ ಮೇಲೆ ರಾಜ್ಯಪಾಲರು ಕೂಡ ಅಂಕಿತ ಹಾಕಿದ್ದಾರೆ. ಸರ್ಕಾರದಿಂದ ಈ ಎಲ್ಲಾ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯುತ್ತಿದೆ. ನಮ್ಮ ಸರ್ಕಾರಕ್ಕೆ ಬದ್ಧತೆ ಇಲ್ವಾ?. ಯಾರೋ ಕೋರ್ಟಿಗೆ ಹೋದರೆ ಅದರಲ್ಲಿ ನಮ್ಮದೇನು ತಪ್ಪಿದೆ. ಈಗ ಎಲ್ಲರಿಗೂ ಕೋರ್ಟ್ ಗೆ ಹೋಗಬೇಡಿ ಎಂದು ತಡೆಯುವ ಶಕ್ತಿ ಸರ್ಕಾರಕ್ಕೆ ಇದೆಯಾ?. ಹಾಗೆ ತಡೆಯುವುದಕ್ಕೆ ಆಗುತ್ತದೆಯಾ?.ಇದನ್ನು ಅರ್ಥ ಮಾಡಿಕೊಂಡು ಸರ್ಕಾರದ ನಿಲುವೇನಿದೆ ಸರ್ಕಾರದ ಪ್ರಯತ್ನಗಳೇನು ಎಂಬುದನ್ನು ತಿಳಿದುಕೊಂಡರೆ ನಿಜವಾಗಿಯೂ ಎಲ್ಲರಿಗೂ ಒಳ್ಳೆದಾಗುತ್ತದೆ. ಸಾವಿರಾರು ಲಕ್ಷಾಂತರ ಮಕ್ಕಳು ಇವತ್ತು ಬೀದಿಗೆ ಇಳಿಯುತ್ತಿದ್ದಾರೆ. ಏನೇ ಇದ್ದರೂ ಕಾನೂನು ಪ್ರಕಾರವೇ ಮಾಡಬೇಕು ಎಂದು ತಿಳಿಸಿದ್ದಾರೆ.
ಕಾನೂನು ಬಿಟ್ಟು ಏನು ಮಾಡಲು ಸಾಧ್ಯವಿಲ್ಲ. ಕಾನೂನು ಬಿಟ್ಟು ಏನಾದರೂ ಮಾಡಲಿಕ್ಕೆ ಆಗುತ್ತಾ? .ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಾಲ್ಕು ತಾಸು ಚರ್ಚೆ ಆಯಿತು. ಅದೇ ಸಂಜೆ ನಾಲ್ಕು ತಾಸು ಕ್ಯಾಬಿನೆಟ್ ನಲ್ಲಿ ಚರ್ಚೆ ಆಯಿತು. ಕದ್ದು ಮುಚ್ಚಿ ಏನಾದ್ರು ಮಾಡುತ್ತಿದ್ದೇವಾ? .ಸರ್ಕಾರ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತಿದ್ದೇವೆ. 56,000 ನೇಮಕಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡೋಣ. ಆದರೆ ಅದಕ್ಕೆ ವಿಧಾನ ಏನು?. ಇದರ ವಿರುದ್ಧವೇ ಆರು ಪ್ರಕರಣಗಳು ಇವೆ ಏನು ಮಾಡೋಣ?.56% ಮೀಸಲಾತಿಯನ್ನು ಬ್ಯಾಕ್ ಲಾಕ್ ಮಾಡಲು ನಾವು ಸಿದ್ಧವಿದ್ದೇವೆ.ಹೇಗೆ ಅಳವಡಿಸಿಕೊಳ್ಳಬೇಕು ಎಂಬುದೇ ಈಗ ಪ್ರಶ್ನೆ. ಕೆಲವರು ಸುಮ್ನೆ ಅಪಪ್ರಚಾರ ಮಾಡಿಕೊಂಡು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಒಳ ಮೀಸಲಾತಿ ವಿರುದ್ಧ ಇದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವು ಹೇಗಿದ್ದೇವೆ ಬಿಜೆಪಿ ಸರ್ಕಾರ ಇದನ್ನು ಜಾರಿಗೆ ತಂದಿತ್ತಾ?.ಬಿಜೆಪಿ ಸರ್ಕಾರ ಸದಾಶಿವ ಆಯೋಗ ತಿರಸ್ಕಾರ ಮಾಡಿದಾಗ ಎಲ್ಲರೂ ಬಾಯಿ ಮುಚ್ಕೊಂಡು ಕೂತಿದ್ದರು .
ಮಾಧುಸ್ವಾಮಿ ವರದಿ ಬಂದಾಗ ಗೊಂದಲಗಳಾಗಿತ್ತು ಆಗ ಸುಮ್ಮನೆ ಇದ್ದರು . ಹೆಚ್ಚಿಗೆ ಕಾನೂನಾತ್ಮಕವಾಗಿ ಆಡಳಿತಾತ್ಮಕವಾಗಿ ಏನು ಮಾಡಬಹುದು ಎಂಬುದನ್ನು ನಾವು ನೋಡುತ್ತೇವೆ ಎಂದಿದ್ದಾರೆ.











