ಬೆಂಗಳೂರು; ಮುಸ್ಲಿಮರು ಮಾತ್ರ ಯಾಕೆ ಕೆರಳ್ತಾರೆ? ಅವರಿಗೆ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಬೆಲೆ ಇಲ್ವಾ ಅಂತಾ ವಿಧಾನಪರಿಷತ್ ಸದಸ್ಯ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಉದಯಗಿರಿ ಸ್ಟೇಷನ್ ಮೇಲೆ ಹಲ್ಲೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಣ್ಣ ಸಣ್ಣ ವಿಷಯಕ್ಕೆ ಯಾಕೆ ಕೆರಳ್ತಾರೆ.ಪ್ರಧಾನಿ ಮೋದಿ ಬಗ್ಗೆಯೂ ಕಾಮೆಂಟ್ ಮಾಡ್ತಾರೆ. ಅನೇಕ ರಾಜಕಾರಣಿ ಬಗ್ಗೆ ಕಾಮೆಂಟ್ ಮಾಡ್ತಾರೆ.ಮುಸ್ಲಿಮರು ಮಾತ್ರ ಯಾಕೆ ಕೆರಳ್ತಾರೆ.ಅಂದ್ರೆ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಇಲ್ವಾ.ಮುಸ್ಲಿಂರನ್ನು ಇವರನ್ನ ಕೆರಳಿಸ್ತುರೋದು ಯಾರು ಎಂದು ಪ್ರಶ್ನಿಸಿದ್ದಾರೆ. ಇದು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ.ಪೊಲೀಸ್ ಇಲಾಖೆ, ಸರ್ಕಾರಕ್ಕೆ ಆಗ್ರಹಿಸ್ತೀನಿ.ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ.ಪುಂಡಾಟ ನಡೆಸಿದವರ ಮೇಲೂ ಕ್ರಮ ಆಗಬೇಕು. ಇಲ್ಲದಿದ್ರೆ ಇದ್ದೂ ಸತ್ತಂತೆ.ಈ ಘಟನೆಯನ್ನ ಖಂಡಿಸ್ತೇನೆ ಎಂದು ಅವರು ಹೇಳಿದ್ದಾರೆ.
ಭದ್ರಾವತಿ ಶಾಸಕರ ಪುತ್ರನ ಅವಾಚ್ಯ ಶಬ್ದ ನಿಂದನೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರ ಹೇಗೆ ನಡೆಯುತ್ತಿದೆ ಅನ್ನೋದಕ್ಕೆ ಇದೊಂದು ಸ್ಯಾಂಪಲ್.ಅತಿ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿರೋದು 2023-24ರಲ್ಲಿ.ಯಾಕೆ ಸಬ್ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ, ಕ್ಲಾಸ್ ಒನ್ ಆಫಿಸರ್‌ಗಳೇ ಆತ್ಮಹತ್ಯೆ ಮಾಡಿಕೊಳ್ತಾರೆ.ಅವರಿಗೆ ಸಹಜವಾಗಿ ಕೆಲಸ ಮಾಡಲು ವಾತಾವರಣ ಇಲ್ಲ. ಪ್ರಚೋದನೆಗೆ ಬಗ್ಗ ಬೇಕಾಗಿದೆ. ಬಗ್ಗದಿದ್ರೆ ಕೆಲಸ ಮಾಡಲು ಆಗಲ್ಲ.ಭದ್ರಾವತಿ ಶಾಸಕರ ಮಗ ತಾನು ಶಾಸಕನ ಮಗ ಅಂತ ನಿಂದನೆ ಮಾಡಿದ್ದಾರೆ. ಅವರು ಬಳಸಿರೋ ಭಾಷೆ ಇದೆಯಲ್ಲ, ಅದು ಸಭ್ಯತೆಯ ಭಾಷೆಯಲ್ಲ.ತಪ್ಪು ಯಾರೇ ಮಾಡಿದ್ರೂ ತಪ್ಪೇ, ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು ಎಂದಿದ್ದಾರೆ.
ದೆಹಲಿ ಸಭೆ, ಯತ್ನಾಳ್‌ಗೆ ನೋಟೀಸ್ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಪಕ್ಷದ ಆಂತರಿಕ ವಿಚಾರ ಚರ್ಚೆ ಮಾಡಲ್ಲ. ಹತ್ತು ಜನ, ನೂರು, ಸಾವಿರ ಜನ ದೇಶದಲ್ಲಿ ಎಂಪಿ, ಎಂಎಲ್‌ಎ ಆಗಿರಬಹುದು. ಲಕ್ಷಾಂತರ ಜನ ನಾವು ಬೆಳೆಯಲು ಗೊಬ್ಬರ ಆಗಿದ್ದಾರೆ.ಕೋಟ್ಯಾಂತರ ಜನ, ವೈಚಾರಿಕ ಕಾರಣಕ್ಕೆ ವಿಶ್ವಾಸ ಇಟ್ಟು ಪಕ್ಷಕ್ಕೆ ಮತ ಹಾಕಿದ್ದಾರೆ.ಅವರಿಗೆ ಅಪಮಾನ, ನೋವು ಆಗಬಾರದು.ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ನಾವ್ಯಾರು ಪಕ್ಷಕ್ಕಿಂತ ದೊಡ್ಡದಲ್ಲ, ಪಕ್ಷ ದೇಶಕ್ಕಿಂತ ದೊಡ್ಡದಲ್ಲ ಎಂದಿದ್ದಾರೆ.