ಬೆಂಗಳೂರು; ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.ತನಿಖೆಗೆ ಪೊಲೀಸರು ಬಂಧನ ಮಾಡಿದ್ದಾರೆ.ಯಾರೇ ತಪ್ಪು ಮಾಡಿದರೂ ಕೂಡ ತಪ್ಪೇ.ಮಹಿಳೆಯರಿಗೆ ಅಗೌರವ ನೀಡುವವರನ್ನು ಯಾರೂ ಸಹಿಸಲು ಸಾಧ್ಯವಿಲ್ಲ .ಕೆಲವರಿಂದ ಇದಕ್ಕೆ ರಾಜಕೀಯ ಬಣ್ಣ ಕಟ್ಟುವ ಪ್ರಯತ್ನ ನಡೆಯುತ್ತಿದೆ.ನಾವ್ಯಾರೂ ಅವನನ್ನು ಬೈಯಿರಿ ಅಂತ ಹೇಳಲಿಲ್ಲ .ನಾವ್ಯಾರೂ ಅವನಿಗೆ ಕಮಿಷನ್ ತೆಗೆದುಕೊಳ್ಳಿ ಅಂತ ಹೇಳಿಲ್ಲ ಎಂದಿದ್ದಾರೆ.
ನಿಮ್ಮ ಜಾತಿಯ ಹೆಣ್ಣು ಮಕ್ಕಳನ್ನು ನಿಂದನೆ ಮಾಡಿದಂಥವರನ್ನು ನೀವು ಯಾವ ರೀತಿ ನೋಡ್ತೀರಿ? ಕಾಂಗ್ರೆಸ್ ನವರೇನಾದ್ರೂ ಮಾಡಿದ್ದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ರಾ?ತಪ್ಪು ಮಾಡಿರುವುದು ಒಬ್ಬ ಮಾಜಿ ಮಂತ್ರಿ.ಬಿಜೆಪಿ ಪಕ್ಷ ಇದಕ್ಕೆ ಬೆಂಬಲ ಕೊಡುತ್ತಾರಾ ಎಂದು ಸ್ಪಷ್ಟವಾಗಿ ಹೇಳಲಿ ಎಂದಿದ್ದಾರೆ.
ಇನ್ನು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮುನಿರತ್ನ ಆರೋಪ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ದ್ವೇಷಕ್ಕೂ ರಾಜಕಾರಣಕ್ಕೂ ಸಂಬಂಧವೇ ಇಲ್ಲ.ಚುನಾವಣೆ ಸೋತ ಮೇಲೆ ನಾನು ಯಾವ ವಿಚಾರಕ್ಕೂ ಬಾಯಿ ಹಾಕುತ್ತಿಲ್ಲ.ನಾನು ಸಿನಿಮಾ ಪ್ರೊಡ್ಯೂಸ್ ಮಾಡಲೂ ಹೋಗಲ್ಲ, ಡೈರೆಕ್ಟ್ ಮಾಡಲೂ ಹೋಗೋದಿಲ್ಲ.ಅದೆಲ್ಲವನ್ನೂ ಬಿಜೆಪಿ-ಜೆಡಿಎಸ್ ಇಬ್ಬರಿಗೆ ಬಿಟ್ಟಿದ್ದೇನೆ.ನಮ್ಮನ್ನು ನೆನೆಸಿಕೊಳ್ಳದಿದ್ದರೆ ರಾಜಕಾರಣದಲ್ಲಿ ಅವರಿಗೆ ರಕ್ಷಣೆ ಸಿಗೋದಿಲ್ಲ .ಡಿಕೆ ಬ್ರದರ್ಸ್ ನ ಟಾರ್ಗೆಟ್ ಮಾಡಬೇಕು ಎಂಬ ಹುನ್ನಾರ, ಅಜೆಂಡಾ ಎಲ್ಲರೂ ಇಟ್ಟುಕೊಂಡಿದ್ದಾರೆ ಎಂದು ಡಿ ಕೆ ಸುರೇಶ್ ಹೇಳಿದ್ದಾರೆ.
ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣ; ಕೋಲಾರದಲ್ಲಿ ಶಾಸಕ ಮುನಿರತ್ನ ಅರೆಸ್ಟ್
ಕೋಲಾರ; ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋಲಾರದಲ್ಲಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನರನ್ನು ಅರೆಸ್ಟ್ ಮಾಡಲಾಗಿದೆ.ಕರ್ನಾಟಕ ಆಂದ್ರ ಗಡಿಭಾಗ ನಂಗ್ಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿದ್ದಾರೆ.
ಮುನಿರತ್ನ ವಿರುದ್ಧ ಎರಡು ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಅವರು ಯಾರಿಗೂ ಸಿಗದೇ ನಾಪತ್ತೆಯಾಗಿದ್ದರು. ಅದರಂತೆ ಬೆಂಗಳೂರಿನಿಂದ ಆಂಧ್ರದ ಚಿತ್ತೂರಿನತ್ತ ಪ್ರಯಾಣ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕರ್ನಾಟಕ ಆಂದ್ರ ಗಡಿಭಾಗ ನಂಗ್ಲಿ ಗ್ರಾಮದ ಬಳಿ ಮುನಿರತ್ನ ಅವರನ್ನು ಅರೆಸ್ಟ್ ಮಾಡಿದ್ದಾರೆ.ಅರೆಸ್ಟ್ ಅವರನ್ನು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ತರೆ ತಂದಿದ್ದಾರೆ.
ಇನ್ನು ಶಾಸಕ ಮುನಿರತ್ನ ಅವರಿಗೆ ಪರಪ್ಪನ ಅಗ್ರಹಾರ ಫಿಕ್ಸ್ ಎನ್ನಲಾಗುತ್ತಿದೆ. ನಾಳೆ ಭಾನುವಾರ ರಜೆ, ಸೋಮವಾರ ಈದ್ ಮೀಲಾದ್ ಹಿನ್ನೆಲೆ ಸರ್ಕಾರಿ ರಜೆ. ಹಾಗಾಗಿ ಕೋರ್ಟ್ ಮುಂದೆ ಹಾಜರು ಪಡಿಸಲು ಅಸಾಧ್ಯ. ಹಾಗಾಗಿ ನ್ಯಾಯಾಂಗ ಬಂಧನಕ್ಕೆ ಕೊಡುವ ಸಾಧ್ಯತೆಯಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಿದ್ರೆ ಅವರಿಗೆ ಪರಪ್ಪನ ಅಗ್ರಹಾರ ಜೈಲೇ ಫಿಕ್ಸ್ ಆಗಲಿದೆ. ಸೋಮವಾರದ ನಂತ್ರ ಅಂದ್ರೆ ಮಂಗಳವಾರ ಕೋರ್ಟ್ ಗೆ ಹಾಜರ್ ಪಡಿಸುವ ಸಾಧ್ಯತೆಯಿದೆ.ಮೊದಲು ಒಂದು ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಗೆ ಪೊಲೀಸರು ಮನವಿ ಮಾಡಿ,ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಿದ್ದಾರೆ.
ಶಾಸಕ ಮುನಿರತ್ನ ಬಂಧನದ ಬಳಿಕ ವಿಚಾರಣೆ ನಡೆಸಲಿದ್ದು, ವಿಚಾರಣೆ ಬಳಿಕ ವಾಯ್ಸ್ ಖಾಕಿ ಪಡೆ ಸ್ಯಾಂಪಲ್ ಪಡೆಯಲಿದೆ.ಈಗಾಗಲೇ ದೂರುದಾರ ಕೊಟ್ಟಿರುವ ವಾಯ್ಸ್ ನನ್ನದು ಅಲ್ಲ.ಯಾರೊ ನನ್ನ ತರ ಮಾತನಾಡಿರುವ ವಾಯ್ಸ್ ಅದು ಮುನಿರತ್ನ ಹೇಳಿದ್ದಾರೆ.ವಾಯ್ಸ್ ಅನ್ನು ಮಾರ್ಪಿಕ್ ಮಾಡಿ ಅಡಿಯೊ ಮಾಡಿರುವ ಸಾಧ್ಯತೆಯಿದೆ.ಹಾಗಾಗಿ ಇದು ನಾನು ಮಾತನಾಡಿರುವ ಅಡಿಯೊ ಅಲ್ಲ,.ಈ ಹಿನ್ನೆಲೆ ಅಡಿಯೋ ಮುನಿರತ್ನ ಅವರ ಅಡಿಯೋನಾ .ಇಲ್ಲ ಮಾರ್ಪಿಂಗ್ ಮಾಡಿರುವ ಅಡಿಯೋನಾ ಎಂದು ಪರಿಶೀಲನೆ ಮಾಡಲು ಎಫ್ ಎಸ್ ಎಲ್ ಗೆ ಪೊಲೀಸರು ಕೊಡಲಿದ್ದಾರೆ. ಎಫ್ ಎಸ್ ಡಲ್ ವರದಿ ಆಧರಿಸಿ ಪ್ರಕರಣದ ತನಿಖೆ ನಡೆಯಲಿದೆ ಎನ್ನಲಾಗಿದೆ.
ಇನ್ನು ಇಂದು ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು.15ವರ್ಷದಿಂದ ನನ್ನ ಮೇಲೆ ಯಾವೊಬ್ಬ ಗುತ್ತಿಗೆದಾರರು ಆರೋಪಿಸಿದ್ದಿರಲಿಲ್ಲ, ಲೋಕಸಭಾ ಚುನಾವಣೆ ಮುಗಿದ ನಂತರ ನನ್ನ ಮೇಲೆ ಬಹಳಷ್ಟು ಸಂಚು ರೂಪಿಸಿದ್ದಾರೆ.ದೂರು ಕೊಟ್ಟ ವ್ಯಕ್ತಿ 7-8 ವರ್ಷದಿಂದ ನಮ್ಮಲ್ಲಿ ಕೆಲಸ ಮಾಡ್ತಿದ್ದ.ಯಾವತ್ತೂ ದೂರು ಕೊಡದವ ಇವತ್ತು ನನ್ನ ಮೇಲೆ ದೂರು ಕೊಟ್ಟಿದ್ದಾರೆ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಕ್ರಮಕ್ಕೆ ಸಂಬಂದಿಸಿದಂತೆ ನಾನು ಪತ್ರ ಬರೆದಿದ್ದೆ.ಪ್ರತಿ ತಿಂಗಳು 15ಲಕ್ಷ ಅವ್ಯವಹಾರ ಆಗ್ತಿರೋದು ಕಂಡು ಬಂದಿದ್ದು ತನಿಖೆ ಮಾಡಿ ಎಂದು ಪತ್ರ ಬರೆದಿದ್ದೆ.ಯಾವಾಗ್ ಪತ್ರ ಬರೆದೆನೋ ಅಗಿಂದ ನನ್ನ ಮೇಲೆ ಷಡ್ಯಂತ್ರ ಆರಂಭವಾಯ್ತು ಎಂದಿದ್ದಾರೆ.
ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಮಿ ಸಂಸದ ಡಿ ಕೆ ಸುರೇಶ್ ,ಸಾರ್ವಜನಿಕ ಜವಾಬ್ದಾರಿ ಸ್ಥಾನದಲ್ಲಿ ಇರುವ ಮಾಜಿ ಮಂತ್ರಿ ಆರ್ ಆರ್ ನಗರ ಕ್ಷೇತ್ರದ ಶಾಸಕ ಬಹಳ ಕೀಳು ದರ್ಜೆಯ ಪದಗಳನ್ನು ಬಳಸಿದ್ದಾರೆ.ಇದಕ್ಕಿಂತ ಕೀಳಾದ ಪದಗಳನ್ನು ಯಾರೂ ಉಪಯೋಗಿಸಲು ಸಾಧ್ಯವಿಲ್ಲ.ಕೀಳರಿಮೆ ಮನಸ್ಥಿತಿ ಇರುವವರೂ ಯಾರೂ ಕೂಡ ಇಂತಹ ಪದ ಬಳಸಲ್ಲ.ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ.ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಜಪ. ತಾಯಂದಿರನ್ನು ಮಂಚಕ್ಕೆ ಕರೆಯುವ ಮಾಜಿ ಮಂತ್ರಿ.ಆರ್ ಎಸ್ಎಸ್ ಜೊತೆಗೆ ಒಡನಾಟ ಇಟ್ಟುಕೊಂಡವರು ಇವರು.ಮೋದಿ ಜಪ, ರಾಮನ ಜಪ ಮಾಡುವವರು ಇವರು.ಇಂಥವರು ಬೇರೆಯವರ ಹೆಂಡತಿಯನ್ನು ಮಂಚಕ್ಕೆ ಕಳಿಸು ಎನ್ನುವ ಮಾತು ಹೇಳ್ತಾರೆ.ಇದು ಬಿಜೆಪಿ ನಾಯಕರ ಕಿವಿಗೆ ಎನ್‌ಡಿಎ ನಾಯಕರ ಕಿವಿಗೆ ಕೇಳ್ತಿಲ್ವಾ?ಎರಡು ಜಾತಿಗಳ ಮಧ್ಯೆ ಸಂಘರ್ಷ ತರುವ ಪ್ರಯತ್ನ ಆಗುತ್ತಿದೆ.ಹಿಂದೆಯೂ ಕೂಡ ಒಕ್ಕಲಿಗ ಸಮುದಾಯವನ್ನು ಬಹಳ ಕೀಳಾಗಿ ನೋಡಿದ್ರು.ಬಿಜೆಪಿ ನಾಯಕರು ಇದನ್ನು ಯಾವ ರೀತಿ ಅರಗಿಸಿಕೊಳ್ತಿದ್ದಾರೆ?ನೈತಿಕತೆ ಇದ್ದಿದ್ದರೆ ಇಷ್ಟೊತ್ತಿಗೆ ವಜಾ ಮಾಡಬೇಕಿತ್ತು ಎಂದಿದ್ದಾರೆ.