ಮನೆ Latest News ಮಗು ಅತ್ರೆ ಯಾರು ಸಮಾಧಾನ ಮಾಡಬೇಕು? ಹೈಕಮಾಂಡ್ ಸಮಾಧಾನ ಮಾಡಬೇಕು; ಡಿ ಕೆ ಶಿವಕುಮಾರ್ ಮಾಜಿ...

ಮಗು ಅತ್ರೆ ಯಾರು ಸಮಾಧಾನ ಮಾಡಬೇಕು? ಹೈಕಮಾಂಡ್ ಸಮಾಧಾನ ಮಾಡಬೇಕು; ಡಿ ಕೆ ಶಿವಕುಮಾರ್ ಮಾಜಿ ಸಚಿವ ರಾಜಣ್ಣ ಭೇಟಿ ವಿಚಾರ ಮಾಜಿ ಸಂಸದ ಡಿ ಕೆ ಸುರೇಶ್ ಪ್ರತಿಕ್ರಿಯೆ

0

ಬೆಂಗಳೂರು; ಮಗು ಅತ್ರೆ ಯಾರು ಸಮಾಧಾನ ಮಾಡಬೇಕು? ಹೈಕಮಾಂಡ್ ಸಮಾಧಾನ ಮಾಡಬೇಕು ಎಂದು ಡಿ ಕೆ ಶಿವಕುಮಾರ್ ಮಾಜಿ ಸಚಿವ ರಾಜಣ್ಣ ಭೇಟಿ ವಿಚಾರ ಮಾಜಿ ಸಂಸದ ಡಿ ಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಪಕ್ಷದ ವರಿಷ್ಠರ ಭೇಟಿ ಅವರ ಹಕ್ಕು.ಮಗು ಅತ್ರೆ ಯಾರು ಸಮಾಧಾನ ಮಾಡಬೇಕು? ಹೈಕಮಾಂಡ್ ಸಮಾಧಾನ ಮಾಡಬೇಕು. ದ್ವೇಷ ಭಾಷಣ ನಿಷೇಧ ಕಾಯ್ದೆ  ರಾಜಕೀಯ ಮಾಡಲು ತಂದಿಲ್ಲ . ಕರ್ನಾಟಕ ಶಾಂತಿಗೆ ಹೆಸರಾದ ರಾಜ್ಯ, ನಾವೆಲ್ಲ ಒಂದು ಎಂಬ ಸಂದೇಶ ನೀಡಬೇಕು. ಇದರಲ್ಲಿ ರಾಜಕೀಯ ವಿಚಾರ ಅಲ್ಲ ಎಂದಿದ್ದಾರೆ.

ಶಿವಕುಮಾರ್ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ರೆಗ್ಯೂಲರ್ ಆಗಿ ದೆಹಲಿಗೆ ಹೋಗ್ತಾರೆ. ಜಲಶಕ್ತಿ ಸಚಿವರನ್ನ ಭೇಟಿಯಾಗ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಅದರಲ್ಲಿ ಶಿವಕುಮಾರ್ ಭಾಗಿಯಾಗ್ತಾರೆ ಎಂದ ಅವರು . ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಹೈಕಮಾಂಡ್ ಹೇಳಿದಂತೆ ನಡೆಯುತ್ತೆ.ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಬಗ್ಗೆ ಗೊತ್ತಿಲ್ಲ.ಹೈಕಮಾಂಡ್ ತೀರ್ಮಾನವೇ ಅಂತಿಮ.ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿಯವರು ಹೇಳಿದಂತೆ ಕೇಳ್ತೇವೆ. ಕರ್ನಾಟಕ ಶಾಂತವಾಗಿದೆ. ಎಲ್ಲರಿಗೂ ಉತ್ತಮ ವಾತಾವರಣವಿರುವ ರಾಜ್ಯ. ಕುಮಾರಸ್ವಾಮಿ ಕೇಂದ್ರದ ಮಂತ್ರಿಗಳು. ಇಲ್ಲಿ ಅಡ್ವೈಸ್ ಮಾಡುವ ಬದಲು ಮೋದಿಗೆ ಅಡ್ವೈಸ್ ಮಾಡಿ,   ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಲಿ. ಕೇಂದ್ರ ಸರ್ಕಾರ ಓಟ್ ತೆಗೆದಿದ್ದಾರೆ, ನೋಟೂ ತೆಗಿತಾರೆ ಎಂದು ಹೇಳಿದ್ದಾರೆ.

ಮೋದಿಯವರು ನಿರುದ್ಯೋಗದ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ. 56 ರೂಪಾಯಿ ಇದ್ದ ಡಾಲರ್  91ರೂಪಾಯಿ ಆಗಿದೆ. ಈ ರಾಷ್ಟದ ಜನರಿಗೆ ಇದರ ಪರಿಣಾಮದ ಬಗ್ಗೆ ಬಿಚ್ಚಿ ಹೇಳಬೇಕು. ಕಾಂಗ್ರೆಸ್ ನವರ ಹುಳುಕು ಹೇಳಿ ಕಾಲ ಕಳೆಯಬೇಡಿ. ಮೋದಿಯವರು ಗಾಂಧಿ, ನೆಹರು, ಹೆಸರು ಎಲ್ಲಿದೆ ಎಂದು ಹುಡುಕ್ತಾರೆ. ಇವರ ಕಾಲದಲ್ಲಿ ಯಾವ ಹೆಸರು ಬೇಕು ಇಡ್ತಾರೆ. ದೇಶದ ಜನರಿಗೆ ಆರ್ಥವಾಗುವ ದಿನ ಹತ್ತಿರ ಬರುತ್ತದೆ. ನ್ಯಾಷನಲ್ ಹೆರಾಲ್ಡ್ ಬಗ್ಗೆ ಮುಂದಿನ ವಾರ ಹೋಗ್ತೇವೆ. ನಮ್ಮ ಲಾಯರ್ಸ್  ರಜೆಯಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ರಾಜಣ್ಣ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ಪತ್ರದ ಬಗ್ಗೆ ಅವರನ್ನೆ ಕೇಳಬೇಕು. ಪಕ್ಷದ ವರಿಷ್ಠರನ್ನ ಭೇಟಿ ಮಾಡೋದು ಅವರವರ ಹಕ್ಕು .ಅದರ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.