ಮನೆ ಪ್ರಸ್ತುತ ವಿದ್ಯಮಾನ ಹನುಮಂತಗೂ ಮದ್ವೆ ಫಿಕ್ಸ್ ಆಗಿರೋದು ನಿಜಾನಾ? ಹನುಮಂತು ಪ್ರೀತಿಗೆ ಅಡ್ಡಿಯಾಗಿರೋದು ಯಾರು?

ಹನುಮಂತಗೂ ಮದ್ವೆ ಫಿಕ್ಸ್ ಆಗಿರೋದು ನಿಜಾನಾ? ಹನುಮಂತು ಪ್ರೀತಿಗೆ ಅಡ್ಡಿಯಾಗಿರೋದು ಯಾರು?

0

ಹನುಮಂತು ಲಮಾಣಿ ಅವರಿಗೆ ಮದ್ವೆ ಫಿಕ್ಸ್ ಆಗಿದೆ. ಅತೀ ಶೀಘ್ರದಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಡ್ತಾರೆ ಅನ್ನೋ  ಸುದ್ದಿ ಅವರು ಹಿಂದಿನ ರಿಯಾಲಿಟಿ ಶೋದಲ್ಲಿ ಭಾಗವಹಿಸಿದಾಗಿನಿಂದ ಕೇಳಿ ಬರುತ್ತಲೇ ಇದೆ. ಆದರೆ ನಿಜಾಂಶ ಏನೋ ಅನ್ನೋದು ಬಿಗ್ ಬಾಸ್ ಮನೆಗೆ ಹನುಮಂತು ಅವರ ತಾಯಿ ಎಂಟ್ರಿಯಾದಾಗ ಗೊತ್ತಾಗಿದೆ.

ಹನುಮಂತು ಬಿಗ್ ಬಾಸ್ ಮನೆಯಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ರು.ಅದರಲ್ಲೂ ದೋಸ್ತ ಧನ್ ರಾಜ್ ಬಳಿ ಅನೇಕ ಬಾರಿ ಮಾತಾನಾಡಿದ್ರು. ಇನ್ನು ಗಿಫ್ಟ್ ಕೊಡುವ ಸಂದರ್ಭದಲ್ಲಿ ಧನ್ ರಾಜ್ ಆಚಾರ್ ಅವರು ಹನುಮಂತು ಅವರಿಗ ತಮ್ಮ ಚಿನ್ನದ ಸರ ಚಿಕ್ಕದೊಂದು ಭಾಗವನ್ನು ಕೊಟ್ಟು ಇದು ನನ್ನ ದೋಸ್ತನಿಗೆ ಅವನ ಮದುವೆಗೆ ಚಿಕ್ಕದೊಂದು ಉಡುಗೊರೆ ಎಂದಿದ್ದರು. ಹಾಗಾಗಿ ಎಲ್ಲರೂ ಹೋ… ಬಿಗ್ ಬಾಸ್ ಮನೆಯಿಂದ ಹೋದ ಕೂಡಲೇ ಹನುಮಂತು ಅವರು ಮದುವೆ ಆಗೋದು ಫಿಕ್ಸ್ ಅಂದುಕೊಂಡಿದ್ದರು. ಆದರೆ ಇದೀಗ ಹನುಮಂತು ಅರ ತಾಯಿ ನಿಜಾಂಶ ಹೇಳಿದ್ದಾರೆ.

ಹೌದು… ಬಿಗ್ ಬಾಸ್ ಮನೆಗೆ ಹನುಮಂತು ಅವರ ತಾಯಿ ಶೀಲವ್ವ ಬಂದಾಗ ರಾತ್ರಿ ಎಲ್ಲಾ ಮಲಗಿರುವಾಗ ಧನ್ ರಾಜ್ ಅವರು ಹನುಮಂತು ಅವರ ತಾಯಿ ಬಳಿ ಹನುಮಂತು ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆ ಹುಡುಗಿ ಯಾರು ಎಂದಿದ್ದಾರೆ. ಆಗ ಹನುಮಂತು ತಾಯಿ ನನಗೆ ಫೋಟೋ ತೋರಿಸಿದ್ದಾನೆ. ನಮ್ಮ ಮನೆಯ ಶೋಕೇಸ್ ನಲ್ಲಿ ಆಕೆಯ ಫೋಟೋವನ್ನು ಬಚ್ಚಿಟ್ಟಿದ್ದ. ಆದರೆ ಈ ವಿಷ್ಯ ಅವನ ಅಪ್ಪನಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಗೊತ್ತಾದ್ರೆ ಆತನಿಗೆ ಏಟು ಬೀಳೋದು ಗ್ಯಾರಂಟಿ ಎಂದಿದ್ದಾರೆ. ಅದಕ್ಕೆ ಧನ್ ರಾಜ್  ಸ್ವಲ್ಪ ನೈಸ್ ಮಾಡಿ ನಿಮ್ಮ ಗಂಡನಿಗೆ ಹೇಳಿ ಪಾಪ ದೋಸ್ತ ಎಂದು ತನ್ನ ಗೆಳಯ ಪರವಾಗಿ ಧನ್ ರಾಜ್ ಬ್ಯಾಟ್ ಬೀಸಿದ್ದಾರೆ. ಅದಕ್ಕೆ ಪಾಪ ಗೀಪ ಏನು ಇಲ್ಲ ಎಂದು ಹನುಮಂತು ತಾಯಿ ಕೂಡ ಈ ಮದುವೆಗೆ ನಮ್ಮ ಸಮ್ಮತಿ ಇಲ್ಲ ಎಂಬುವುದನ್ನು ನಗುತ್ತಲೇ ಹೇಳಿದ್ದಾರೆ.

ಇನ್ನು ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದಾಗ ಬಿಗ್ ಬಾಸ್ ಮನೆಯ ಸ್ಪರ್ಧಿಗಳೆಲ್ಲಾ ಮಾತನಾಡುತ್ತಿರುವಾಗ ರಜತ್ ಅವರು ಹನುಮಂತು ಅವರ ತಾಯಿ ಬಳಿ ಹನುಮಂತು ಮದುವೆ ಆಗೋ ಹುಡುಗಿನೂ ನಿಮ್ಮ ರೀತಿಯೇ ಬಟ್ಟೆ ಧರಿಸಬೇಕಾ ಎಂದು ಕೇಳಿದ್ದಾರೆ ಅದಕ್ಕೆ ಹನುಮಂತು ತಾಯಿ ಹೌದು.. ಇಲ್ಲಂದ್ರೆ ಆಗಲ್ಲ. ಮದುವೆ ಆಗೋ ಹುಡುಗಿಗೆ ಅಂತಾನೇ ನಾನು ಈಗಾಗಲೇ ನಾಲ್ಕು ಜೋಡಿ ಇದೇ ರೀತಿ ಬಟ್ಟೆ ರೆಡಿ ಮಾಡಿ ಇಟ್ಟಿದ್ದೇನೆ ಎಂದಿದ್ದಾರೆ. ಅಷ್ಟರಲ್ ಹನುಮಂತು ಹಾಕದೇ ಇದ್ದರೂ ನಡೆಯುತ್ತೆ ಎಂದಿದ್ದಾರೆ. ಅದಕ್ಕೆ ಅವರ ತಾಯಿ ನಡಿಯುತ್ತೆ, ಪಡಿಯುತ್ತೆ ನಡೆಯಲ್ಲ. ನಮ್ಮ ಮನೆಯಲ್ಲಿ ಹೆಣ್ಣು ದೇವರಿದ್ದಾರೆ. ಹಾಗಾಗಿ ಈ ರೀತಿಯ ಬಟ್ಟೆಯೇ ಧರಿಸಬೇಕು. ಪ್ಯಾಂಟ್ ಗೀಂಟ್ ಹಾಕೋ ಹಾಕಿಲ್ಲ ಎಂದು ಮದುವೆಯಾಗೋ ಹುಡ್ಗಿ ಈಗಲೇ ಖಡಕ್ ವಾರ್ನ್ ಮಾಡಿದ್ದಾರೆ. ಆ ಮೂಲಕ ಏನಿದ್ದರೂ ಮದುವೆ ಹುಡುಗಿಯ ಆಯ್ಕೆ ವಿಚಾರದಲ್ಲಿ ನಮ್ಮದೇ ಫೈನಲ್ ಡಿಸಿಶನ್ ಅನ್ನೋದನ್ನು ತಮಾಷೆಯಾಗಿಯೇ ಹನುಮಂತು ಅವರಿಗೆ ಅವರ ತಾಯಿ ತಿಳಿಸಿದ್ದಾರೆ.

ಇಷ್ಟು ದಿನ ಹನುಮಂತು ಅವರಿಗೆ ಮದುವೆ ಫಿಕ್ಸ್ ಆಗಿದೆ. ಶೀಘ್ರದಲ್ಲೇ ಅರು ಮದುವೆ ಆಗ್ತಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಆದರೆ ಇದೀಗ ಮನೆಮಂದಿಯಿಂದಲೇ ಈ ಬಗ್ಗೆ ಒಂದು ಕ್ಲಾರಿಟಿ ಸಿಕ್ಕಿದೆ. ಹನುಮಂತು ಅರ ಲವ್ ಸ್ಟೋರಿಗೆ ಅವರ ತಂದೆಯೇ ವಿಲನ್ ಆಗಿದ್ದಾರೆ ಅನ್ನೋದು ಗೊತ್ತಾಗಿದೆ. ಅಲ್ಲದೇ ಪ್ರೀತಿ ಬಗ್ಗೆ ತಂದೆಯ ಮುಂದೆ ನಿಂತು ಮಾತನಾಡೋದಕ್ಕೆ ಹನುಮಂತು ಭಯ ಪಡ್ತಿದ್ದಾರೆ. ಒಂದು ವೇಳೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಬೇಕಾದರೆ ಅದಕ್ಕೆ ತಂದೆಯ ಒಪ್ಪಿಗೆ ಬೇಕು. ಅದಕ್ಕಿಂತ ಮುಖ್ಯವಾಗಿ ಆ ಹುಡ್ಗಿ ಯಾರಿರಬಹುದು ಅಂತಾ ಸದ್ಯ ಹನುಮಂತು ಅಭಿಮಾನಿಗಳು ತಲೆಗೆ ಹುಳು ಬಿಡ್ಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಹನುಮಂತು ತಂದೆಯನ್ನು ಒಪ್ಪಿಸುವ ಪ್ರಯತ್ನ ಮಾಡ್ತಾರಾ ಅಥವಾ ದೋಸ್ತ ಏನಾದ್ರೂ ಈ ವಿಚಾರದಲ್ಲಿ ಗೆಳೆಯನಿಗೆ ಸಹಾಯ ಮಾಡ್ತಾರಾ ಕಾದು ನೋಡ್ಬೇಕು. ಸದ್ಯಕ್ಕೆ ಹನುಮಂತು ಅವರ ಮದುವೆಗೆ ಬಗ್ಗೆ ಕೇಳಿ ಬರುತ್ತಿದ್ದ ಕಲರ್ ಕಲರ್ ಕಥೆಗಳಿಗೆ ಅವರ ತಾಯಿಯಿಂದಲೇ ಬ್ರೇಕ್ ಬಿದ್ದಿದೆ. ಇದೆಲ್ಲಾ ಅಂತೆ ಕಂತೆ ಸುದ್ದಿ ಅನ್ನೋದಕ್ಕೆ ಕ್ಲಾರಿಟಿ ಸಿಕ್ಕಿದೆ.