ಮನೆ Latest News ಯಾರು ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ಹಕ್ಕಿಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಯಾರು ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ಹಕ್ಕಿಲ್ಲ : ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ಯಾರು ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ಹಕ್ಕಿಲ್ಲ  ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಪವರ್ ಶೇರಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರು ಪವರ್ ಶೇರಿಂಗ್ ಬಗ್ಗೆ ಮತಾಡೋಕೆ ಹಕ್ಕಿಲ್ಲ. ರಂಗನಾಥ್ ಸೇರಿದಂತೆ ಯಾರು ಸಹ ಮಾತಾಡ್ಬಾರ್ದು ಪವರ್ ಶೇರಿಂಗ್ ಬಗ್ಗೆ ಎಲ್ಲಿ ಚರ್ಚೆ ಇದೆ..? ಮಾಧ್ಯಮದವರು ಬೇರೆ ರೀತಿಯಲ್ಲಿ ಬರೆಯುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ. ಯಾರು ಚರ್ಚೆ ಮಾಡ್ಬಾರ್ದು. ಇದರ ಬಗ್ಗೆ ಮತಾಡೋರು ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಪರವಾಗಿ ಮಾತಾಡಿದ್ರು ಡ್ಯಾಮೇಜ್. ನನ್ನ ಪರವಾಗಿ ಮಾತಾಡಿದ್ರೂ ಡ್ಯಾಮೇಜ್ ಆಗುತ್ತೆ. ಇದರ ಬಗ್ಗೆ ಚರ್ಚೆ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ ಎಂದಿದ್ದಾರೆ.

ಸಿದ್ದರಾಮಯ್ಯ ಪರವಾಗಿ ಮಾತನಾಡಿದರೂ ಅದು ಡ್ಯಾಮೇಜ್. ನನ್ನ ಪರವಾಗಿ ಮಾತನಾಡಿದರು ಡ್ಯಾಮೇಜ್. ಇದರ ಬಗ್ಗೆ ಚರ್ಚೆ ಮಾಡೋದು ಪಕ್ಷ ವಿರೋಧಿ ಕೆಲಸ ಮಾಡುತ್ತಿರುವರು. ಸಿದ್ದರಾಮಯ್ಯನವರು ಏನು ಹೇಳಿದ್ದಾರೋ ಅಷ್ಟೇ . ಅವರು ಹೇಳಿದ್ದಾರಲ್ಲ ಹೈಕಮಾಂಡ್ ಏನು ಹೇಳ್ತಾರೋ ಅದನ್ನ ಕೇಳ್ತೀವಿ ಅಂತ . ಹೀಗಾಗಿ ನಮಗೆ ಪಕ್ಷ ಇಂಪಾರ್ಟೆಂಟ್ ವ್ಯಕ್ತಿಯಲ್ಲ.ಪಕ್ಷ ಹೇಳಿದಂಗೆ ಕೇಳಿಕೊಂಡು ಹೋಗ್ತಿವಿ ಅಂತ ಹೇಳಿದ್ದಾರೆ. ನೀವು ಹೇಳಿದ್ದು ನಮ್ಮ ಬಾಯಲ್ಲಿ ಹೇಳಿಸೋಕೆ ಹೋಗಬೇಡಿ ನಾನು ಮೂರ್ಖನಲ್ಲ. ಬಿಜೆಪಿ ಪಾರ್ಟಿಯವರು ಅವರ ಪಾರ್ಟಿಯ ಕ್ರಾಂತಿಯ ಬಗ್ಗೆ ಚರ್ಚೆ ಮಾಡಿಕೊಂಡು ಹೋಗಲಿ.ನಾನು ಸೂಜಿದಾರ ಬೇಕಾದರೆ ಕಳಿಸಿಕೊಡ್ತೀನಿ . ಅವರು ಹೊಲೆದುಕೊಂಡು ಅವರ ಪಕ್ಷವನ್ನು ರೆಡಿ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ಗೆ ನೂರು ವರ್ಷ ಹಿನ್ನೆಲೆಯಲ್ಲಿ  ಬಿಜೆಪಿಗರು ಗಣವೇಶ ಹಾಕಿದ ವಿಚಾರದ ಬಗ್ಗೆ  ಮಾತನಾಡಿ ಅವರ ಪಾರ್ಟಿ ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅದು ನಮಗೆ ಯಾಕೆ?. ಮಹಾತ್ಮ ಗಾಂಧೀಜಿಯವರು ಏನು ಹೇಳಿದ್ದಾರೆ.ರಘುಪತಿ ರಾಘವ ರಾಜಾರಾಮ್ ಪತೀತ ತಪಾವನ ಸೀತಾರಾಮ್ ಎಂದು ಡಿಕೆಶಿ ಹಾಡಿದ್ದಾರೆ. ಈಶ್ವರ ಅಲ್ಲಾ ತೇರೋ ನಾಮ್ ಅಂತ ಹೇಳಿದ್ದಾರೆ . ಅವರು ಅಲ್ಲಾ ಬಗ್ಗೆ ಮಾತಾಡ್ತಾರಾ..?. ನಾವು ಈಗಷ್ಟೇ ನಾಡಗೀತೆ ಹಾಡಿದ್ವಿ. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಅಂತ. ಇದು ಶಾಂತಿಯ ತೋಟ ಅವರು (ಬಿಜೆಪಿ)‌ಹೊರಗಡೆ ಏನು ಬೇಕಾದರೂ ಮಾತನಾಡು ತಪ್ಪಿಸಿಕೊಳ್ಳಬಹುದು . ಈ ಹೃದಯ ಇದೆಯಲ್ಲ ಅದರಲ್ಲಿ ನಾವು ಫೌಂಡೇಶನ್ ಹಾಕಿದ್ದೇವೆ .ಅವರು ತಪ್ಪಿಸಿಕೊಳ್ಳಲು ಆಗಲ್ಲ ಕಿತ್ತು ಹಾಕೋಕೂ ಕೂಡ ಆಗಲ್ಲ ಎಂದಿದ್ದಾರೆ.