ಬೆಂಗಳೂರು: ವಂದೇ ಮಾತರಂ ನಿಂದ ಯಾರಿಗೆ ತೊಂದರೆ ಇದೆ, ವಂದೇ ಮಾತರಂ ಮಾಡಿದ ತಕ್ಷಣ ಏನು ತೊಂದರೆ ನಿಮಗೆ? ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ವಂದೇ ಮಾತರಂ ಗೀತೆಗೆ ಗೌರವಕ್ಕೆ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ದೇಶದಲ್ಲಿ ಈ ರೀತಿಯ ಘಟನೆಯಾದಾಗ ಗೊಂದಲ ಸೃಷ್ಟಿಸಲು ಶಕ್ತಿ ಇದೆ. ವಂದೇ ಮಾತರಂ ನಿಂದ ಯಾರಿಗೆ ತೊಂದರೆ ಇದೆ. ವಂದೇ ಮಾತರಂ ಮಾಡಿದ ತಕ್ಷಣ ಏನು ತೊಂದರೆ ನಿಮಗೆ?. ಇದರಿಂದ ನಿಮಗೆ ಅವಮಾನ ನಾ?. ಇಂತಹ ವಿಷಯಗಳನ್ನ ಹೊರತುಪಡಿಸಿ. ರಾಜ್ಯದಲ್ಲಿ ಲೂಟಿ ಆಗ್ತಿದೆ, ಆ ಲೂಟಿ ಸರಿ ಪಡಿಸೋದು ನೋಡಿಕೊಳ್ಳಬೇಕು. ಥಣಿಸಂದ್ರ, ಕೋಗಿಲು ನಲ್ಲಿ ಏನೋ ನಡೆಯುತ್ತಿತ್ತು. ಅದೇನೋ ಸಾಬರನ್ನ ಹೊರಗೆ ಹಾಕ್ತಿದ್ದಾರೆ ಅಂತ ಅಂದ್ರು. ಮನೆ ಕೊಡ್ತಿವಿ ಅಂದ್ರು.. ಎಷ್ಟು ತಿಂಗಳಾಯಿತು ಮನೆ ಕೊಡ್ತಿನಿ ಎಂದು?.ಯಾರಿಗೆ ಕೊಟ್ಟಿದ್ದಿರಿ ಮನೆ? ಇದಕ್ಕೆ ನೋಡಿಕೊಳ್ಳಿ. ವಂದೇ ಮಾತರಂ ಗೆ ಗೌರವ ಕೊಡುವವರು ಕೊಡ್ತಾರೆ.ವಂದೇ ಮಾತಾರಂ ಗೆ ವಿರೋಧ ಮಾಡುವ ನೀವು ಬೀದಿಯಲ್ಲಿ ಮಲಗಿದ್ದಿರಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಸಾವಿರ ದಿನಗಳ ಸಂಭ್ರಮಾಚರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಇವತ್ತಿನ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸೋದಕ್ಕೆ ಪ್ರಾರಂಭ ಮಾಡಿ ಸಾವಿರ ದಿನಗಳನ್ನ ಪೂರೈಸಿದೆ. ಸಾವಿರ ದಿನಗಳ ಸಂಭ್ರಮವೊ ಒಂದು ಲಕ್ಷ ಹಕ್ಕು ಪತ್ರ , ಪೌತಿ ಖಾತೆನೊ ಮಾಡಿರೋದನ್ನ ನೋಡಿದ್ದಿದ್ದೇನೆ ನಾನು. ಕಳೆದ ಎರಡುವರೆ ವರ್ಷದಲ್ಲಿ ಪೌತಿಖಾತೆ, ಪೋಡಿ ಎಷ್ಟರ ಮಟ್ಟಿಗೆ ಆಗಿದೆ ಅನ್ನೊದು ಗೊತ್ತಿದೆ. ಯಾವ ಹಕ್ಕು ಪತ್ರ ಯಾರಿಗೆ ಕೊಟ್ಟಿದ್ದಾರೆ. ಗುರುತಿಸಿರೋದು ಯಾರು.? ಜನರಿಗೆ ಭೂಮಿ ಕೊಡುದು ಆರನೆ ಗ್ಯಾರಂಟಿ. ಯಾರಿಗೆ ಭೂ ಗ್ಯಾರಂಟಿ, ಸರ್ಕಾರದಲ್ಲಿರುವ ಮಂತ್ರಿಗಳಿಗೆ ಭೂ ಗ್ಯಾರಂಟಿ.ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರೋದಕ್ಕೆ ಗ್ಯಾರಂಟಿ ಇಲ್ಲ.ಭೂ ಗ್ಯಾರಂಟಿ ಆರನೇ ಗ್ಯಾರಂಟಿಯನ್ನಾಗಿ ಪಡೆದಿರೊದು ಹಲವಾರು ಮಂತ್ರಿಗಳು. ಕಂದಾಯ ಸಚಿವರದ್ದು ಏನ್ ಬಂತು.? 21 ಎಕರೆ ಕರಾಬು ಭೂಮಿ ಕೋಲಾರದಲ್ಲಿ ಇಷ್ಯು ಬಂತಲ್ಲಾ. ಚಿಕ್ಕಬಳ್ಳಾಪುರದಲ್ಲಿ ತಹಶಿಲ್ದಾರರ ನಡವಳಿಕೆಯಿಂದ ರೈತನಿಬ್ಬ ವಿಷ ತಗೊಳ್ತಿನಿ ಅಂತಿದ್ದಾನೆ.ಇತರದ್ದು ಸಾವಿರ ಉದಾಹರಣೆ ಕೊಡಬಹುದು.ನಾನು ಕೆಟ್ಟ ಪದ ಬಳಸೊಲ್ಲ. ಇವರಿಗೆ ಬೇಕಾಗಿರೋದು ಪ್ರಚಾರ. ಗ್ಯಾರಂಟಿ ಯೋಜನೆಗಳ ಸರ್ಟಿಫಿಕೇಟ್ ಪಡೆಯೋದು.ಈ ಸರ್ಟಿಫಿಕೇಟ್ ಗೆ ಮುಂದಿನ ಚುನಾವಣೆ ಸಮಯದಲ್ಲಿ ಜನ ಉತ್ತರ ಕೊಡ್ತಾರೆ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಪಥದಲ್ಲಿ ಸರ್ಕಾರ ಹೋಗ್ತಿದೆ ವಿಪಕ್ಷಗಳಿಗೆ ಹೊಟ್ಟೆಕಿಚ್ಚಿದೆ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಅಯ್ಯೊ ರಾಮ ಅಭಿವೃದ್ಧಿ , ಅಭಿವೃದ್ಧಿ ನೊಡ್ತಿಲ್ವಾ ಎಷ್ಟಾಗಿದೆ.ಕಳೆದ ವರ್ಷದಲ್ಲಿ ಎಷ್ಟೆಷ್ಟು ಅಭಿವೃದ್ಧಿ ಆಗಿದೆ.ಕಳೆದ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಎಷ್ಟು. ಖರ್ಚು ಮಾಡಿದ್ದು ಎಷ್ಟು ಇ ವರ್ಷ ಎಷ್ಟು ಖರ್ಚು ಮಾಡ್ತಾರೆ ಹೇಳಬೇಕಲ್ವಾ.?.ಜನಗಳ ಮುಂದೆ ಇಡಿ.ಕ್ಯಾಪಿಟಲ್ ಅಸೆಟ್ ಗೆ ಇವರ ಕೊಡುಗೆ ಏನು ರಾಜ್ಯಕ್ಕೆ.ಕ್ಯಾಪಿಟಲ್ ಅಸೆಟ್ ಇವರು ಕ್ರಿಯೇಟ್ ಮಾಡಬೇಕಿತ್ತು. ರೆವೆನ್ಯು ಡಿಫೆಸಿಟ್ ಗೆ ರಾಜ್ಯದ ಆಯವ್ಯಯ ತೆಗೆದುಕೊಂಡು ಹೋಗಿ ಸಾಲದ ಹೊರೆಯನ್ನ ಹೊರೆಸಿದ್ದಾರೆ. ನಾಡಿನ ಜನರ ಮೇಲೆ ಸಾಲ ಹೊರಿಸಿರೋದೆ ಇವರ ದೊಡ್ಡ ಅಭಿವೃದ್ಧಿ . 33 ಸಚಿವರು ಯಾರು ಸಾಲಗಾರರಾಗಿಲ್ಲ. ಸಂತ್ಭಭರಿತವಾಗಿದ್ದಾರೆ.ಇದೇ ಇವರ ಸಾಧನೆ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.











