ಮನೆ Latest News ಮುಡಾ ಪ್ರಕರಣದ ದಾಖಲೆಗೆ ವೈಟ್ನರ್‌ ಹಚ್ಚಿದ ಪ್ರಕರಣ; ಬಿಜೆಪಿ, ಜೆಡಿಎಸ್‌ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಮುಡಾ ಪ್ರಕರಣದ ದಾಖಲೆಗೆ ವೈಟ್ನರ್‌ ಹಚ್ಚಿದ ಪ್ರಕರಣ; ಬಿಜೆಪಿ, ಜೆಡಿಎಸ್‌ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

0

ಬೆಂಗಳೂರು; ಮುಡಾ ಪ್ರಕರಣದ ದಾಖಲೆಗೆ ವೈಟ್ನರ್‌ ಹಚ್ಚಿದ ಪ್ರಕರಣಕ್ಕೆ ಬಿಜೆಪಿ, ಜೆಡಿಎಸ್‌ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ.ವೈಟ್ನರ್‌ ಹಿಂದೆ ಏನಿದೆ ಎಂದು ವೀಡಿಯೋ ದಾಖಲೆ ಬಿಡುಗಡೆ ಮಾಡಿ ತೋರಿಸಿದ್ದಾರೆ ಸಿಎಂ ಸಿದ್ದರಾಮಯ್ಯ.

ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಕಣ್ಣುಬಿಟ್ಟು ನೋಡಿ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಕೌಂಟರ್‌ ಕೊಟ್ಟಿದ್ದಾರೆ. ಮುಡಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್‌ ಹೆಚ್ಚಿದನ್ನೇ ಮಹಾನ್‌ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್‌ ನಾಯಕರೇ, ವೈಟ್ನರ್‌ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ ಎಂದಿದ್ದಾರೆ.

ನನ್ನ ಪತ್ನಿ ಬದಲೀ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ “ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ” ಎಂಬ ನಾಲ್ಕೈದು ಪದಗಳಿಗೆ ವೈಟ್ನರ್‌ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ.

 

“ವೈಟ್ನರ್‌ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್‌ ಹಚ್ಚಿ ಬಂದಿದ್ದಾರೆಂದು” ಬೊಬ್ಬೆ ಹಾಕುತ್ತಿದ್ದ ಸ್ವಯಂ ಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ? ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ  ಕತೆ.

ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ – ಜೆಡಿಎಸ್‌ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ.ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಸಿಎಂ‌ ಪತ್ನಿ ಸಹಿ ಇರೋ ದಾಖಲೆ ಪತ್ರವನ್ನು ಬೈರತಿ ಸುರೇಶ್ ತಿದ್ದಿದ್ದಾರೆ ಎಂಬ ಆರೋಪ; ನಾನು ಅದನ್ನ ನೋಡಿಲ್ಲನೋಡಿದ ಮೇಲೆ ಹೇಳುತ್ತೇನೆ ಎಂದ ಗೃಹ ಸಚಿವ ಡಾ.ಜಿ, ಪರಮೇಶ್ವರ್

ಬೆಂಗಳೂರು; ಸಿಎಂ‌ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಸಹಿ ಇರೋ ದಾಖಲೆ ಪತ್ರವನ್ನು ಬೈರತಿ ಸುರೇಶ್ ಅವರು ಹೆಲಿಕಾಫ್ಟರ್ ನಲ್ಲಿ ವೈಟ್ನರ್ ಹಾಕಿ ತಿದ್ದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ನಾನು ಅದನ್ನ ನೋಡಿಲ್ಲ,  ನೋಡಿದ ಮೇಲೆ ಹೇಳುತ್ತೇನೆ ಎಂದಿದ್ದಾರೆ. ಒಂದು ವೇಳೆ ಆ ರೀತಿ ಆಗಿದ್ರೇ ಈಗಾಗಲೇ ಎಸ್ಐಟಿ ತನಿಖೆ ಮಾಡ್ತಿದೆ.ಅದನ್ನ ಅವ್ರು ನೋಡ್ತಾರೆ ಎಂದಿದ್ದಾರೆ.

ಇನ್ನು ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ರಿಯ್ಯಾಕ್ಟ್ ಮಾಡಿದ ಅವರು ಈ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಕಾನೂನಿನಲ್ಲಿ ಆರೆಸ್ಟ್ ಮಾಡೋದಕ್ಕೆ ಅವಕಾಶ ಇದ್ರೇ ಮಾಡ್ತಾರೆ.ಇದಕ್ಕೆ ನೂರು ಜನರ ಅವಶ್ಯಕತೆ ಇಲ್ಲ.ಕಾನೂನಿದೆ.. ಕಾನೂನಿನ ಅಡಿಯಲ್ಲಿ ತನಿಖೆ ನಡೆಯಲಿದೆ ಎಂದಿದ್ದಾರೆ.

ಹಾಗೇ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಅವ್ರಿಗೆ ಪ್ರತಿಭಟನೆ ಮಾಡೋ ಹಕ್ಕಿದೆ ಅದಕ್ಕಾಗಿ ಮಾಡ್ತಾರೆ.ಅದಕ್ಕೆಲ್ಲಾ ನಾವೂ ಯಾರು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ.ಅವ್ರು ಪ್ರತಿಭಟನೆ ಮಾಡಲಿ ಎಂದಿದ್ದಾರೆ. ಇನ್ನು ಐವಾನ್ ಡಿ ಸೋಜ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅ ರೀತಿಯ ಅರ್ಥದಲ್ಲಿ ಹೇಳಿಲ್ಲ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಿದ್ದಾರೆ.ಆ ಬಗ್ಗೆ ಹೆಚ್ಚು ಚರ್ಚೆ ಮಾಡೋ‌ ಅಗತ್ಯವಿಲ್ಲ ಎಂದಿದ್ದಾರೆ.

ಇನ್ನು ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರ್ ನೀಡಿರುವ ಬಗ್ಗೆ ಮಾತನಾಡಿದ ಅವರು ಅವ್ರಿಗೆ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ.ಅದಕ್ಕೆ ರಕ್ಷಣೆ ನೀಡಿದ್ದಾರೆ.ಯಾವ ಭಯವಿದೆ ಅನ್ನೋದು ರಾಜ್ಯಪಾಲರಿಗೆ ಕೇಳ ಬೇಕು.ಅವ್ರಿಗೆ ಈ ರೀತಿ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ.ಇದಕ್ಕೆ ಬಿಜೆಪಿಯವರು ಇತ್ತೀಚಿನ ಬೆಳವಣಿಗೆಗಳೇ ಕಾರಣ.ಪದೇ ಪದೇ ಅನೇಕ ವಿಚಾರಗಳನ್ನ ಮಾಧ್ಯಮಗಳ ಮೂಲಕ ತರ್ತಿದ್ದಾರೆ.ದೇಸಾಯಿ ಕಮಿಷನ್ ಈಗಾಗಲೇ ತನಿಖೆ ಮಾಡ್ತಿದ್ದಾರೆ.ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡೋ ಬದಲು ಕಮಿಟಿ ಮುಂದೆ ತಿಳಿಸಲಿ, ಅದಕ್ಕೆ ಕಮಿಟಿ ವಿಚಾರಣೆ ಮಾಡಲಿದೆ ಎಂದಿದ್ದಾರೆ.

ಕುಮಾರಸ್ವಾಮಿ ಕಾನೂನು ಹೋರಾಟ ಮಾಡೋ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು ಮಾಡೋದಕ್ಕೆ ಯಾವುದೇ ತಡೆ ಇಲ್ಲ.ಅಲಿಗೇಷನ್ಸ್ ನ ಸರ್ಕಾರಿ ತನಿಖಾ ಸಂಸ್ಥೆಗಳು ತನಿಖೆ ಮಾಡಿ ಈ ರೀತಿ ಇದೆ ಅಂತ ಹೇಳಬಹುದು.ಡಾಕ್ಯುಮೆಂಟ್ ನ ಆಧಾರದ ಮೇಲೆ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು.ಲೋಕಾಯುಕ್ತದವರು ಯಾಕೆ ಪ್ರಾಸಿಕ್ಯೂಷನ್ ಗೆ ಕೇಳಿದ್ದಾರೆ.ಅವರು ತನಿಖೆ ಮಾಡುವಾಗ ಕಾನೂನು ವಿರುದ್ದವಾಗಿರುವ ತೀರ್ಮಾನ ಅಂತ ಪ್ರಾಸಿಕ್ಯೂಷನ್‌ಗೆ ಕೇಳಿದ್ದಾರೆ.ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ತಾರೆ ನೋಡಬೇಕು.ಕುಮಾರಸ್ವಾಮಿ ಹಾಗೂ ನಾಲ್ಕೈದು ಜನರ ಬಗ್ಗೆ ಕೇಳಿದೆ.ಅದನ್ನ ಕಾನೂನು ಬಾಹಿರ ಅಂದ್ರೆ ಹೇಗೆ?ಯಾವುದಕ್ಕೆ ಸಿಎಂ ನ ಸೇಫ್ ಮಾಡಬೇಕು..?ಸಿಎಂ ವೆರಿ ಸೇಫ್ , ನಾವು ಮೀಟಿಂಗ್ ಮಾಡಿದ್ರೆ ಸಿಎಂ ಸೇಫ್ ಮಾಡೋಕೆ ಹೊರಟಿದ್ದಾರೆ ಅಂತಾರೆ.ಅದರಲ್ಲಿ ಏನು ತಪ್ಪಿದೆ, ನಾವು ಅವರ ಜೊತೆ ಇದ್ದೇವೆ ಎಂದಿದ್ದಾರೆ. ಅಲ್ಲದೇ  ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಹೋಗ್ತಿದ್ದಾರೆ. ಆದರೆ ನನ್ನನ್ನು ಹೈಕಮಾಂಡ್ ನನ್ನ ದೆಹಲಿಗೆ ಬರುವಂತೆ ಕರೆದಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ಬನ್ನಿ ನನ್ನ ಜೊತೆ ಅಂತಾ ಕರೆದರೆ ನಾನು ಹೋಗ್ತೇನೆ ಎಂದಿದ್ದಾರೆ.