ಮನೆ Latest News ಸಿಎಂ ಅವರೇ ಖಜಾನೆ ತುಂಬಿ ತುಳುಕುತ್ತಿದ್ದರೆ ಸಾರಿಗೆ ನೌಕರರ ಹಿಂಬಾಕಿ ಪಾವತಿಸಿ; ಬೆಂಗಳೂರಿನಲ್ಲಿ ವಿಧಾನ ಪರಿಷತ್...

ಸಿಎಂ ಅವರೇ ಖಜಾನೆ ತುಂಬಿ ತುಳುಕುತ್ತಿದ್ದರೆ ಸಾರಿಗೆ ನೌಕರರ ಹಿಂಬಾಕಿ ಪಾವತಿಸಿ; ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

0

ಬೆಂಗಳೂರು: ಸಿಎಂ ಅವರೇ ಖಜಾನೆ ತುಂಬಿ ತುಳುಕುತ್ತಿದ್ದರೆ ಸಾರಿಗೆ ನೌಕರರ ಹಿಂಬಾಕಿ ಪಾವತಿಸಿ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ಕೆಎಸ್ ಆರ್ ಟಿಸಿ ನೌಕರರ ಮುಷ್ಕರದಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ತೊಂದೆರೆಯಾಗಿದೆ. ರಾಜ್ಯ ಸರ್ಕಾರ ಸ್ಪಂದಿಸದೇ ಇರುವ ಪರಿಣಾಮ ಇದು. ಕಾಂಗ್ರೆಸ್ ನದ್ದು ಅಧಿಕಾರ ಇಲ್ಲದಿದ್ದಾಗ ವೀರಾವೇಶದ ಮಾತು, ಈಗ ದುರಂಹಕಾರದ ಮಾತು. ಕಾಂಗ್ರೆಸ್ ‌ನವರು ಅಧಿಕಾರಕ್ಕೆ ಬಂದು ಎರಡು ವರ್ಷ ಆಯಿತು. ಬಿಜೆಪಿ ಮೇಲೆ ಆರೋಪ ಹೊರಿಸುವ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. 38 ತಿಂಗಳ ವೇತನ ಬಾಕಿ ಅಂದರೆ 26 ತಿಂಗಳಿನಿಂದ ನೀವೇ ಅಧಿಕಾರದಲ್ಲಿದ್ದೀರಿ. ಹಾಗಾದರೆ ನಿಮ್ಮ ಬದ್ಧತೆ ಏನು?. ಸಿಎಂ ಅವರೇ ಖಜಾನೆ ತುಂಬಿ ತುಳುಕುತ್ತಿದ್ದರೆ ಸಾರಿಗೆ ನೌಕರರ ಹಿಂಬಾಕಿ ಪಾವತಿಸಿ. ಇವರನ್ನೂ ಇತರ ಸಾರಿಗೆ ನೌಕರರಂತೆ ಪರಿಗಣಿಸಿ ವೇತನ ಪರಿಷ್ಕರಿಸಿ ಎಂದಿದ್ದಾರೆ.

ಬೆಂಕಿ ಹಚ್ಚಿದವರು, ಡಿಜೆ ಹಳ್ಳಿಯಲ್ಲಿ ಊರು ಸುಟ್ಟವರ ಕೇಸ್, ಹುಬ್ಬಳ್ಳಿ ಕೇಸ್ ಎಲ್ಲಾ ವಾಪಸ್ ಪಡೆಯುತ್ತೀರಿ.ಈ ನೌಕರರ ಕೇಸ್ ಯಾಕೆ ವಾಪಸ್ ಪಡೆಯಲ್ಲ?. ತಕ್ಷಣ ಕೇಸ್ ವಾಪಸ್ ಪಡೆಯಿರಿ. ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕು. ನೌಕರರ ಬೇಡಿಕೆಗೆ ಬಿಜೆಪಿ ಸ್ಪಂದಿಸಿತ್ತು. ಅಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ರಲ್ಲಾ.ಅದೇ ಸಹಾನುಭೂತಿಯಿಂದ ಈಗಲೂ ವರ್ತಿಸಿ. ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟ ಇತ್ತು. ಆದಾಗ್ಯೂ ಬಿಜೆಪಿ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಿತ್ತು. ಈಗ ಕಾಂಗ್ರೆಸ್ ಗೆ ಏನು ಕಷ್ಟ? . ನಾಲ್ಕು ನಿಗಮಗಳ ನಷ್ಟಕ್ಕೆ ಕಂಡಕ್ಟರ್, ಡ್ರೈವರ್ ಕಾರಣವೇ?. ಲೂಟಿ ಹೊಡೆಯುವವರು ಯಾರು?. ಸಚಿವರು, ಎಂಡಿ, ಡಿಸಿ ಮಟ್ಟದ ಅಧಿಕಾರಿಗಳು ಹೊಣೆ ಹೊರಬೇಕು. ಸಾರಿಗೆ ನೌಕರರು ಜೀತದಾಳುಗಳಾ?. ಇನ್ನೂ ಬಿಜೆಪಿ ಮೇಲೆ ಬೊಟ್ಟು ಮಾಡಿದರೆ ನಿಮಗೆ ಯೋಗ್ಯತೆ ಇಲ್ಲ ಅಂತ ಜನ ಹೇಳುತ್ತಾರೆ. ಇಲ್ಲವೇ ರಾಜೀನಾಮೆ ಕೊಡಿ, ಬಿಜೆಪಿ ಸರ್ಕಾರ ಸಮಸ್ಯೆ ಬಗೆ ಹರಿಸುತ್ತದೆ ಎಂದು ಹೇಳಿದ್ದಾರೆ.

ಸಿಎಂ ಮನೆಗೆ ದಿನಕ್ಕೆ 11 ಲಕ್ಷ ಕಾಫಿ, ಟೀ ಗೆ ಖರ್ಚಾಗುತ್ತಂತೆ. ಹೆಲಿಕಾಫ್ಟರ್ ಓಡಾಟ ಕಡಿಮೆ ಆಗಿಲ್ಲ. ಸಾಧನಾ ಸಮಾವೇಶ ಮಾಡಿ ಹಣ ಕೊಟ್ಟು ಜನರನ್ನು ಕರೆಸಿದ್ರಿ. ಸಾರಿಗೆ ನೌಕರ ಬಡಪಾಯಿ. ಅವರಿಗೆ ನೀತಿ ಪಾಠ ಏನು ಹೇಳುತ್ತೀರಾ?. ನ್ಯಾಯವಾಗಿ ಕೊಡುವುದನ್ನು ಕೊಡಿ, ನೀತಿ ಪಾಠ ಬೇಡ.ಐನೂರು ಕೋಟಿ ಟಿಕೆಟ್ ಕೊಟ್ಟರಲ್ಲಾ, ಈಗ ಸಮಸ್ಯೆ ಬಗೆ ಹರಿಸಿ. ಮಾನ, ಮರ್ಯಾದೆ ಬಿಟ್ಟು ಕಲ್ಲು ಹೊಡೆದವರ ಕೇಸ್ ವಾಪಸ್ ತೆಗೆದುಕೊಳ್ಳುತ್ತೀರಿ. ಈಗ ಇವರ ಕೇಸನ್ನು ವಾಪಸ್ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.