ಬೆಂಗಳೂರು; ಬಿಜೆಪಿಯಲ್ಲಿ ಕ್ರಾಂತಿ ಯಾಗುತ್ತೋ ಶಾಂತಿ ಯಾಗುತ್ತೋ, ಅವರ ರಾಜ್ಯಾಧ್ಯಕ್ಷನೇ ನಾಪತ್ತೆಯಾಗಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಕ್ರಾಂತಿ ಯಾಗುತ್ತೋ ಶಾಂತಿ ಯಾಗುತ್ತೋ. ಅವರ ರಾಜ್ಯಾಧ್ಯಕ್ಷನೇ ನಾಪತ್ತೆಯಾಗಿದ್ದಾರೆ. ಪೂಜ್ಯ ತಂದೆಯವರ ಕಿರಿಯ ಮಗ ನಾಪತ್ತೆಯಾಗಿದ್ದಾನೆ. ಪ್ರಿಯಾಂಕ್ ಖರ್ಗೆ ಇಷ್ಟೊಂದು ಮಾತಾಡುವಾಗ ಇವರು ಮಾತಾಡಬೇಕಿತ್ತಲ್ಲ. ವಿಪಕ್ಷ ನಾಯಕರು ಮಾತಾಡಲ್ಲ, ಅಧ್ಯಕ್ಷರು ಮಾತಾಡಲ್ಲ. ಪ್ರಿಯಾಂಕ್ ಖರ್ಗೆ ಇಷ್ಟು ಅಟ್ಯಾಕ್ ಮಾಡ್ತಿದ್ದಾನೆ. ಅಶೋಕ್ ದು ಇದರ ಬಗ್ಗೆ ಏನ್ ಉಗ್ರ ಹೇಳಿಕೆ ಇದೆ. ನಾನೊಬ್ಬ ಕೊಡ್ತೇನೆ ಅಲ್ಲಿ ಪ್ರತಾಪ್ ಸಿಂಹ ಒಂದು ಮಾತಾಡ್ತಾನೆ. ರಾತ್ರಿಯಾದರೆ ಡಿಸಿಎಂ ಮನೆಯಲ್ಲಿ ರಾಗಿ ಮುದ್ದೆ ನಾಟಿ ಕೋಳಿ . ಸಿದ್ದರಾಮಯ್ಯ ಮನೆಯಲ್ಲಿ ತಟ್ಟೆ ಇಡ್ಲಿ ತಿಂತಿದ್ರೆ . ಬಿಜೆಪಿ ಹೇಗೆ ಉದ್ಧಾರ ಆಗುತ್ತೆ . ಮೇಲಿನವರು ಸುಮ್ನೆ ಕೂತಿದ್ದಾರೆ. ಈಗ ತಾನು ಹೋದರೆ ಸಮಸ್ಯೆ ಆಗುತ್ತೆಂದ ರವಿಕುಮಾರ್‌ನ ಕಳುಹಿಸ್ತಿದ್ದಾರೆ. ಅವರು ಸಿಎಂ ಕಾರಲ್ಲೇ ಹೋಗ್ತಾರೇ ಎಂದು ಲೇವಡಿ ಮಾಡಿದ್ದಾರೆ.
ಕೆಎಸ್‌ಟಿಡಿಸಿಯಿಂದ ವಯನಾಡ್ ಪ್ಯಾಕೇಜ್ ವಿಚಾರದ ಬಗ್ಗೆ ಮಾತನಾಡಿದ ಅವರು ಗಾಂಧಿ ಕುಟುಂಬ ಖಷಿ ಪಡಿಸಲು ಹೀಗೆ ಮಾಡ್ತಿದ್ದಾರೆ. ನಮ್ಮಲ್ಲಿಯೇ ಸಾಕಷ್ಟು ಪ್ರದೇಶವಿದೆ. ಕನ್ನಡಿಗರ ಹಣ ಕನ್ನಡಿಗರಿಗೆ ಖರ್ಚು ಮಾಡಬೇಕು.
ಉರ್ದು ಶಾಲೆಗೆ ಹಣ ಕೊಡೊದಾಗಿ ಹೇಳ್ತಾರೆ. ಕನ್ನಡ ಶಾಲೆ ಹಾಳು ಬಿದ್ದು ಹೋಗಿದೆ. ಕೇವಲ ಒಂದು ವರ್ಗವನ್ನ ಖುಷಿ ಪಡಿಸುವ ಕೆಲಸ ಮಾಡ್ತಿದ್ದಾರೆ. ಕನ್ನಡ ಶಾಲೆಗಳಿಗೆ ಇವರು ಅನುಧಾನ ಕೊಡಲ್ಲ. ಆದರೆ ಉರ್ದು ಶಾಲೆಗಳಿಗೆ ಅನುದಾನ ಕೊಡ್ತಾರೆ.ಪೊಲೀಸ್ ತರಬೇತಿಯನ್ನ ಅಲ್ಪಸಂಖ್ಯಾತರಿಗೆ ಮಾತ್ರ ಕೊಡ್ತಿದ್ದಾರೆ.ಈ ರಾಜ್ಯವನ್ನ ಸಿದ್ದರಾಮಯ್ಯ ಮತ್ತು ಜಮೀರ್ ಇಸ್ಲಾಂಮೀಕರಣವಾಗಿಸ್ತಿದ್ದಾರೆ ಎಂದು ಹೇಳಿದ್ದಾರೆ.
ಪಿಡಿಓ ಪ್ರವೀಣ್ ಅಮಾನತಿಗೆ ತಡೆಯಾಜ್ಞೆ ವಿಚಾರದ ಬಗ್ಗೆ ಮಾತನಾಡಿದ ಅವರು ತೇಜಸ್ವಿ ಸೂರ್ಯ ವಾದ ಮಂಡಿಸಿ ಸ್ಟೇ ತಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಿಯಾಂಕ್ ಖರ್ಗೆಯ ಕೈ ಗೊಂಬೆಯಾಗಿದ್ದಾರೆ .ಅವರ ತಂದೆ ಅಧ್ಯಕ್ಷರಿದ್ದಾರೆಂದು ಇವರು ಬರೆದ ಪತ್ರಕ್ಕೆ ಪರಿಶೀಲಿಸಿ ಎನ್ನುತ್ತಾರೆ. ಈಗ ಕೈಗೊಂಬೆ ಸಿದ್ದರಾಮಯ್ಯ ಆಗಿದ್ದಾರೆ. ರಾಹುಲ್ ಗಾಂಧಿ,ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಕೈ ಗೊಂಬೆ ಆಗಿದ್ದಾರೆ. ನಾನು ಸಹ ಇವರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಸವಾಲು ಹಾಕಿದ್ದಾರೆ.











