ಮನೆ Latest News ಬೆಳಗಾವಿಯಲ್ಲಿ ಸಿಎಂ ಪೊಲೀಸ್ ಅಧಿಕಾರಿಗೆ ಕೈ ಎತ್ತಿದಾಗ, ಡಿಸಿಗೆ ಅಪಮಾನ ಮಾಡಿದಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್...

ಬೆಳಗಾವಿಯಲ್ಲಿ ಸಿಎಂ ಪೊಲೀಸ್ ಅಧಿಕಾರಿಗೆ ಕೈ ಎತ್ತಿದಾಗ, ಡಿಸಿಗೆ ಅಪಮಾನ ಮಾಡಿದಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು?: ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ. ವಿಜಯೇಂದ್ರ‌ ಪ್ರಶ್ನೆ

0

ಬೆಂಗಳೂರು : ಬೆಳಗಾವಿಯಲ್ಲಿ ಸಿಎಂ ಪೊಲೀಸ್ ಅಧಿಕಾರಿಗೆ ಕೈ ಎತ್ತಿದಾಗ, ಡಿಸಿಗೆ ಅಪಮಾನ ಮಾಡಿದಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ. ವಿಜಯೇಂದ್ರ‌ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಪಕ್ಷದಲ್ಲಿ ಜಿಲ್ಲಾಮಟ್ಟದ ಆಂತರಿಕ ಸಮಸ್ಯೆಗಳ ಬಗ್ಗೆ ಸಭೆ ಮಾಡುತ್ತಿದ್ದಾರೆ. ಜಿಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಅವರಿಗೆ ನಾನು ಮನವಿ ಮಾಡಿದ್ದೆ. ಹಾಗಾಗಿ ಸಭೆಗಳನ್ನು ಮಾಡುತ್ತಿದ್ದಾರೆ. ಎನ್. ರವಿಕುಮಾರ್ ಅವರ ಹೇಳಿಕೆ ಗಮನಿಸಿದ್ದೇನೆ. ರವಿಕುಮಾರ್ ಅದಕ್ಕೆ ಸ್ಪಷ್ಟನೆ ಕೂಡಾ ನೀಡಿದ್ದಾರೆ.ಅನಂತರ ಐಎಎಸ್ ಅಧಿಕಾರಿಗಳ ಸಂಘ ಸಿಎಂ ಭೇಟಿ ಮಾಡಿ ದೂರು ಕೊಟ್ಟಿರುವುದು, ಎಫ್ ಐಆರ್ ದಾಖಲಾಗಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.

ರವಿಕುಮಾರ್ ವಿಚಾರ ಒಂದು ಕಡೆ ಇರಲಿ, ಅದರ ಬಗ್ಗೆ ಮಾತಾಡಲು ಹೋಗಲ್ಲ. ಬೆಳಗಾವಿಯಲ್ಲಿ ಸಿಎಂ ಪೊಲೀಸ್ ಅಧಿಕಾರಿಗೆ ಕೈ ಎತ್ತಿದಾಗ, ಡಿಸಿಗೆ ಅಪಮಾನ ಮಾಡಿದಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು?. ಅವತ್ತು ಯಾಕೆ ಸಿಎಂ ವಿರುದ್ಧ ದೂರು ಕೊಡಲಿಲ್ಲ?ಎಲ್ಲವೂ ಕೂಡಾ ಚರ್ಚೆ ಆಗಲಿ, ಜನ ಗಮನಿಸುತ್ತಿದ್ದಾರೆ‌ ಎಂದು ಹೇಳಿದ್ದಾರೆ.

 ಮೈಸೂರಿನಲ್ಲಿ ಪ್ರಾರ್ಥನೆ ಫಲಿಸುತ್ತದೆ ಎಂಬ ಡಿಸಿಎಂ ಹೇಳಿಕೆ‌ ವಿಚಾರದ ಬಗ್ಗೆ ಮಾತನಾಡಿದ ಅವರು ಬಹಳಷ್ಟು ಜನ ಪ್ರಯತ್ನ, ಪ್ರಾರ್ಥನೆ ಮಾಡುತ್ತಿದ್ದಾರೆ. ಸುರ್ಜೇವಾಲಾ ಕರೆಸಿ ಗುದ್ದಲಿ ಪೂಜೆ ಕೂಡಾ ಮಾಡಿಸಿದ್ದಾರೆ. ಯಾರು ಸಿಎಂ ಆಗುತ್ತಾರೆ ಎನ್ನುವುದು ಮುಖ್ಯ ಅಲ್ಲ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಜನ ಛೀಮಾರಿ ಹಾಕುತ್ತಿದ್ದಾರೆ. ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಆಗುತ್ತಿಲ್ಲ. ದರಿದ್ರ ಸರ್ಕಾರ ಜನಸಾಮಾನ್ಯರ ಪಾಲಿಗೆ ಬದುಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಆರ್ ಎಸ್ ಎಸ್ ನಿಷೇಧ ಕುರಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೂರ್ಖತನದ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಮೋದಿ ಅವರಿಂದ ಆರ್ಥಿಕ ಪ್ರಗತಿ ಆಗುತ್ತಿದೆ, ವರ್ಚಸ್ಸು ಹೆಚ್ಚಾಗುತ್ತಿದೆ. ಪ್ರಿಯಾಂಕ್ ಖರ್ಗೆ ರಾತ್ರಿ ತಿರುಕನ‌ ಕನಸು ಕಂಡಿದ್ದಾರೆ. ಅದಕ್ಕೆ ಇಂತಹ ಹೇಳಿಕೆ ಕೊಡುತ್ತಿದ್ದಾರೆ.

ಸರ್ಕಾರ ಬದಲಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ವಿಚಾರದ ನಮ್ಮ ಪಕ್ಷದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದವರೇ ಸರ್ಕಾರ ಬೀಳುತ್ತದೆ ಅಂತ ಹೇಳುತ್ತಿದ್ದಾರೆ.ರಾಮನಗರ ಶಾಸಕ ಇಕ್ಬಾಲ್  ಕೂಡಾ ಹೇಳುತ್ತಿದ್ದಾರೆ.ನಮ್ಮ ಕ್ಷೇತ್ರದ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಹೇಳುತ್ತಿದ್ದಾರೆ.ಬರುವ ದಿನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಕಾದು ನೋಡಿ. ಅನೇಕ ಬೆಳವಣಿಗೆಗೆ ಸಾಕ್ಷಿ ಆಗಲಿದ್ದೀರಿ ಎಂದಿದ್ದಾರೆ.