ಬೆಂಗಳೂರು; ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಆ ಬಗ್ಗೆ ಆರೋಪ ಮಾಡಿದ್ರು,ಈಗ ಒಂದೊಂದೇ ಸಾಕ್ಷಿಗಳು ಹೊರ ಬರ್ತಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಮತಗಳ್ಳತನ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯಿಂದ ಮತಕಳ್ಳತನದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು. ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಆ ಬಗ್ಗೆ ಆರೋಪ ಮಾಡಿದ್ರು. ಈಗ ಒಂದೊಂದೇ ಸಾಕ್ಷಿಗಳು ಹೊರ ಬರ್ತಿದೆ.ಎಸ್ಐಟಿ ತನಿಖೆಯಿಂದ ಒಂದೊಂದೆ ಸತ್ಯ ಹೊರ ಬರ್ತಿದೆ. ನಾವು ಈಗ ಬಿಜೆಪಿ, ಎಲೆಕ್ಷನ್ ಕಮಿಷನ್ ನ ಪ್ರಶ್ನೆ ಮಾಡ್ತೇವೆ. ಇನ್ನೇನು ಎರಡ್ಮೂರು ವಾರಗಳಲ್ಲಿ ಪೂರ್ಣ ಚಿತ್ರ ಬರುತ್ತೆ. ರಾಹುಲ್ ಗಾಂಧಿ ಪ್ರಶ್ನೆ ಮಾಡುವುದಾಗ ಅಫಿಡವಿಟ್ ಕೊಡಿ ಅಂತಾ ನಮ್ಮನ್ನೇ ಪ್ರಶ್ನಿಸಿದ್ದರು. ಈಗ ಚುನಾವಣಾ ಆಯೋಗದವರು ಏನು ಹೇಳುತ್ತಾರೆ ? . ಚುನಾವಣೆಗಳು ಮುಕ್ತ, ನ್ಯಾಯಸಮ್ಮತವಾಗಿ ನಡೆಯಬೇಕು ಅನ್ನೋದು ನಮ್ಮ ಕಳಕಳಿ ಎಂದಿದ್ದಾರೆ.
ಎಲೆಕ್ಷನ್ ಕಮಿಷನ್ ಒಂದು ಪಕ್ಷದ ಕಪಿ ಮುಷ್ಠಿಯಲ್ಲಿ ಇದೆ ಅನ್ನೋದು ಗೊತ್ತಾಗ್ತಿದೆ.ಮಹದೇವಪುರ, ಆಳಂದ , ಬಿಹಾರ ಇವೆಲ್ಲವನ್ನ ನೋಡ್ತಿದ್ರೆ ಹಾಗೆ ಅನ್ಸುತ್ತೆ .ಇವರೇನು ಹಣ ಕೊಟ್ಟು ಪ್ರಜಾಪ್ರಭುತ್ವ ವನ್ನ ಖರೀದಿ ಮಾಡ್ತಾರಾ ? . ಚಿಲುಮೆ ಪ್ರಕರಣ ಸೇರಿದಂತೆ ಎಲ್ಲವನ್ನೂ ಲಾಜಿಕಲ್ ಎಂಡ್ ಗೆ ತಲುಪಿಸುತ್ತೇವೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಪಥ ಸಂಚಲನ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ಕೋರ್ಟ್ ಮುಂದಿರುವ ವಿಚಾರ. ಕೋರ್ಟ್ ಏನು ಹೇಳುತ್ತೋ ಅದನ್ನ ನಾವು ಪಾಲನೆ ಮಾಡ್ತೇವೆ. ನಾವೆಲ್ಲರೂ ಕಾಂಗ್ರೆಸ್ಸಿಗರು, ನಮ್ಮ ಪಾರ್ಟಿ ಹಾಗೂ ಪಕ್ಷ ನನ್ನ ಜೊತೆಗಿದೆ. ರಾಹುಲ್ ಗಾಂಧಿ, ಖರ್ಗೆ, ಸಿಎಂ ಸಿದ್ದರಾಮಯ್ಯ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಎಲ್ಲರೂ ಜೊತೆಗಿದ್ದಾರೆ. ಐಡಿಯಾಲಾಜಿಕಲ್ ಆಗಿ ನಾವು ವಿಚಾರವನ್ನ ಎದುರಿಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ನುಡಿದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಯತೀಂದ್ರ ಅವರು ಸ್ಟೇಜ್ ಮೇಲೆ ಭಾಷಣ ಮಾಡಿದ್ದಾರೆ. ಐಡಿಯಾಲಜಿಕಲ್ ಆಗಿ ಹೇಳಿದ್ದಾರೆ, ಅದರಲ್ಲಿ ತಪ್ಪೇನು ?. Who ever decide.. Whatever decide.. Is ಎಂದು ಹೇಳಿ ಪ್ರಿಯಾಂಕ ಖರ್ಗೆ ತೆರಳಿದ್ದಾರೆ.











