ಮನೆ Latest News ವೇಣುಗೋಪಾಲ ಸಿಎಂ‌ ಭೇಟಿ ಮಾಡೋದರಲ್ಲಿ ಏನು ತಪ್ಪಿದೆ? : ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ

ವೇಣುಗೋಪಾಲ ಸಿಎಂ‌ ಭೇಟಿ ಮಾಡೋದರಲ್ಲಿ ಏನು ತಪ್ಪಿದೆ? : ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ

0

ಬೆಂಗಳೂರು; ವೇಣುಗೋಪಾಲ ಸಿಎಂ‌ ಭೇಟಿ ಮಾಡೋದರಲ್ಲಿ ಏನು ತಪ್ಪಿದೆ? ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಸಿಎಂ ವೇಣುಗೋಪಾಲ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವೇಣುಗೋಪಾಲ ಸಿಎಂ‌ ಭೇಟಿ ಮಾಡೋದರಲ್ಲಿ ಏನು ತಪ್ಪಿದೆ? . ರಾಹುಲ್ ಗಾಂಧಿ ಭೇಟಿ ಮಾಡೋದ್ರಲ್ಲಿ ತಪ್ಪೇನಿದೆ ಎಂದಿದ್ದಾರೆ.

ಡಿಕೆ ಪರ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅಭಿಮಾನಿಗಳು ಮಾಡ್ತಾರೆ, ಅದರಲ್ಲಿ ತಪ್ಪು ಏನಿದೆ?.ರಾಜಕಾರಣ ದಲ್ಲಿ ಧಿಕ್ಕಾರಗಳು, ಘೋಷಣೆ ಗಳು ಸಹಜ. ಡಿಕೆ ಡಿಕೆ ಘೋಷಣೆ ಕಳೆದ ೧೦ ವರ್ಷ ದಿಂದ ನಡೀತಿದೆ. ಜನ ಮೋದಿ ಮೋದಿ ಅಂತಾರೆ, ಹಾಗೇ ಡಿಕೆ ಡಿಕೆ ಅಂತಾರೆ. ಕೆಲವರು ರಾಹುಲ್ ರಾಹುಲ್ ಅಂತಾರೆ, ಇನ್ನೂ ಕೆಲವರು ಸಿದ್ದು ಸಿದ್ದು ಅಂತಾರೆ.ಇದರಲ್ಲಿ ತಪ್ಪೇನಿದೆ? ಇದನ್ನ ಸ್ವಾಗತ ಮಾಡಬೇಕು ಎಂದಿದ್ದಾರೆ. ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿ ನಾನು ದೆಹಲಿಗೆ ಹೋಗ್ತಿದ್ದೇನೆ. ಖಾಸಗಿ ಮದ್ವೆ ಇದೆ. ಐಎಎಸ್ ಅಧಿಕಾರಿ ಮಗನ ಮದ್ವೆ ಇದೆ. ನಾಳೆ ಕ್ಯಾಬಿನೆಟ್ ಸಭೆ ಇದೆ. ನಾಳೆ ಮರಳಿ ಬರುತ್ತೇನೆ.ಖಾಸಗಿ ಭೇಟಿ ಬಿಟ್ಟರೆ ಬೇರೆ ಏನೂ ಇಲ್ಲ, ರಾಜಕೀಯ ಏನೂ ಇಲ್ಲ ಎಂದು ತಿಳಿಸಿದ್ದಾರೆ.

14  ರಂದು ವೋಟ್ ಚೇರಿ ಸಭೆ ಇದೆ. ಪ್ರತಿಯೊಂದು ಜಿಲ್ಲೆ ಯಿಂದ 3೦೦ ಜನರನ್ನು ಕರೆದೊಯ್ಯಲು ಸೂಚಿಸಿದ್ದೇನೆ.ಎಲ್ಲಾ ಸಚಿವರಿಗೆ, ಶಾಸಕರಿಗೆ ಹೇಳಿದ್ದೇನೆ. ನಮ್ಮಿಂದಲೇ ವೋಟ್ ಚೋರಿ ಆರಂಭವಾಗಿದೆ, ಆಂದೋಲನ ನಡೀತಿದೆ. ಹೆಚ್ಚು ಸಂಖ್ಯೆ ಯಲ್ಲಿ ಭಾಗಿಯಾಗಬೇಕು.ಬೆಂಗಳೂರಿಂದಲೇ ಹೆಚ್ಚು ಜನರನ್ನ ಕರೆದುಕೊಂಡು ಹೋಗ್ಬೇಕು. ರೈಲಲ್ಲಿ ಕರೆದೊಯ್ಯಬೇಕು. ಎಲ್ಲಾ ಬ್ಲಾಕ್ ನವರಿಗೆ ಹೇಳಿದ್ದೇನೆ, ಶಾಸಕರಿಗೆ ಮಂತ್ರಿ ಗಳಿಗೆ ಹೇಳಿದ್ದೇನೆ.ನಿಮ್ಮ ಜವಾಬ್ದಾರಿ ಇದೆ, ನೀವೇ ಮಾಡಬೇಕು ಎಂದಿದ್ದೇನೆ ಅಂದಿದ್ದಾರೆ.

8 ನೇ ತಾರೀಖದ್ದು ಮುಂದೂಡಿಕೆಯಾಗಬಹುದು. ವಿರೋಧ ಪಕ್ಷ ದವರನ್ನ ಕರೆದುಕೊಂಡು ಹೋಗ್ಬೇಕು. ಅವರು ರಾಗ ಎಳೆಯುತ್ತಿದ್ದಾರೆ ಎಂದ ಅವರು ದೊಡ್ಡ ಮೊತ್ತದ ವಾಚ್ ಬಗ್ಗೆ ಬಿಜೆಪಿ ಟೀಕೆ ವಿಚಾರದ ಬಗ್ಗೆ ಮಾತನಾಡಿ ಇದು ನನ್ನ ಗಡಿಯಾರ ಇದು ನಾನೇ ಖರೀದಿ ಮಾಡಿದ್ದು ೨೪ ಲಕ್ಷ ಕೊಟ್ಟು. ನನ್ನದೇ ಕ್ರೆಡಿಟ್ ಕಾರ್ಡ್ ಕೊಟ್ಟು ಖರೀದಿಸಿದ್ದೇನೆ. ನೀವು ಚೆಕ್ ಮಾಡಬಹುದು, ಅದನ್ನ ಎಲೆಕ್ಷನ್ ಅಫಿಡಬಿಟ್ ನಲ್ಲೂ ತೋರಿಸಿದ್ದೇನೆ ಎಂದರು. ಸಿದ್ದರಾಮಯ್ಯರನ್ನು ಬಿಜೆಪಿ ಗುರಿಯಾಗಿಸಿರುವ ವಿಚಾರದ ಬಗ್ಗೆ ಮಾತನಾಡಿ ನನಗೆ ಅದರ ಬಗ್ಗೆ ಗೊತ್ತಿಲ್ಲ. ಅವರಿಗೆ ವಾಚ್ ಹಾಕಿಕೊಳ್ಳೋ ಅಧಿಕಾರ ಇದೆ. ಅವರಿಗೆ ವಾಚ್ ಖರೀದಿ ಮಾಡೋ ತಾಖತ್ತು ಇದೆ. ನನ್ನ ತಂದೆ 7 ಗಡಿಯಾರ ಬಿಟ್ಟು ಹೋಗಿದ್ದಾರೆ. ಅದು ಯಾರು ಹಾಕಿಕೊಳ್ಳುತ್ತಾರೆ.ನಾನು ಇಲ್ಲವೇ ನನ್ನ ಸಹೋದರ ವಾಚ್ ಹಾಕಿಕೊಳ್ಳಬೇಕು ಅಲ್ಲವೇ ಎಂದ ಅವರು  ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ  ನಾನು ನಮ್ಮ ಲೀಡರ್ ಹೇಳಿಕೆಗೆ ಮಾತಾಡೋದಿಲ್ಲ. ನಾನು ಪಕ್ಷಕ್ಕೆ ಮತ್ತು ನನಗೆ ಮಾತ್ರ ಸ್ಪೋಕ್ಸ್‌ಪರ್ಸನ್ ಎಂದಿದ್ದಾರೆ.