ಬೆಂಗಳೂರು; ತಪ್ಪೇನಿದೆ ಮಂತ್ರಿ ಆಗ್ಬೇಕೆಂದು ಶಾಸಕರು ಆಸೆ ಪಡೋದ್ರಲ್ಲಿ? ಎಂದು ಮಂತ್ರಿ ಆಕಾಂಕ್ಷಿಗಳ ಸಭೆ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಹೇಳಿದ್ದಾರಲ್ಲ ಸಂಪುಟ ಪುನರಚನೆ ಮಾಡ್ತೇನೆ ಎಂದು. ಆ ಹಿನ್ನೆಲೆ ಮಂತ್ರಿ ಆಗ್ಬಹುದು ಎಂದು ಒತ್ತಡ ಮಾಡ್ತಿದ್ದಾರೆ. ಚಾನ್ಸ್ ಇದೆ ಎಂದು ಟ್ರೈ ಮಾಡ್ತಾರೆ ಎಂದ ಅವರು ಪುನರಚನೆಯೋ ನಾಯಕತ್ವ ಬದಲಾವಣೆಯೋ ಎನ್ನುವ ಪ್ರಶ್ನೆಗೆ ಉತ್ತರಿಸಿ ಕಾಲ ತೀರ್ಮಾನ ಮಾಡುತ್ತೆ. ನಾನು ಯಾರ ಬಳಿ ಏನ್ ಮಾತಾಡ್ತೇನೆ ಎಂದು ಎಲ್ಲವನ್ನೂ ಹೇಳಲ್ಲ ಎಂದಿದ್ದಾರೆ.
ವೇಣುಗೋಪಾಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನೋಡಿದ್ದೇನೆ,ಖಾಲಿ ಇಲ್ಲ ಎನ್ನುವ ಜೊತೆಗೆ,ಪಾರ್ಟಿಹಾಗೂ ಶಾಸಕರು ತಿರ್ಮಾನ ಮಾಡ್ತಾರೆ ಎನ್ನೊದನ್ನು ಹೇಳಿದ್ದಾರೆ ಎಂದ ಅವರು ಅನಂತ್ ಕುಮಾರ್ ಪುತ್ರಿ ಟ್ವೀಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಯಾರ್ ಅವರು ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಎರಡು ಹಸು ಇದೆ. ನಮ್ಮ ಮನೆ ಹಸು ನೋಡಿದ್ದಾರ ಅವರು ಎಂದು ಪ್ರಶ್ನಿಸಿದ್ದಾರೆ.
ದೆಹಲಿಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಎರಡೇ ದಿನನಪ್ಪ, ಮೂರು ದಿನವಲ್ಲ.ದೆಹಲಿಯಲ್ಲಿ ರಾಜ್ಯದ ಸಂಸತ್ ಸದಸ್ಯರನ್ನ ಆಹ್ವಾನಿಸಿದ್ದೇವು. 24 ಜನ ಬಂದಿದ್ರು, ಜನತಾ ದಳದವರನ್ನ ಬಿಟ್ಟು ಬಂದಿದ್ರು. ರಾಜ್ಯದ ನೀರಾವರಿ ಯೋಜನೆ ಪ್ರಸ್ತಾಪ ಮಾಡಿದ್ದೆ. ಕಾಗೇರಿ ,ಬೋಮ್ಮಾಯಿ ,ಪಿಸಿ ಮೋಹನ್ ಎಲ್ಲರು ಅಭಿಪ್ರಾಯ ತಿಳಿಸಿದ್ದಾರೆ.
ಸೋಮಣ್ಣ, ಪ್ರಹ್ಲಾದ್ ಜೋಷಿ ಕರೆ ಮಾಡಿ ಮಾತಾಡಿದ್ರು. ಆಲ್ ಪಾರ್ಟಿ ಡೆಲಿಗೇಷನ್ ಹೋಗೋಣ ಎಂದು ಹೇಳಿದ್ದಾರೆ. ಒಮ್ಮತ ಮೂಡಿದೆ,ನಾನು ಎಲ್ಲಾ ಮಾಹಿತಿಯನ್ನ ಕೊಟ್ಟಿದ್ದೇನೆ. ತಕರಾರು ಆಗಿದೆ ಕೃಷ್ಣಾ ಡ್ಯಾಮ್ ಎತ್ತರಿಸುವ ವಿಚಾರದಲ್ಲಿ ನಮ್ಮ ವಕೀಲರು ಹೇಳಿದ್ದಾರೆ. ನೋಟಿಫಿಕೇಷನ್ ಮಾಡಲು,ಎತ್ತರ ಹೆಚ್ಚಿಸಲು ಯಾವುದೇ ತೊಡಕಿಲ್ಲ ಎಂದಿದ್ದಾರೆ. ನಮ್ಮದೆ ಆದಂತಹ ತೀರ್ಮಾನ ಮಾಡ್ತೇವೆ. ಇಲ್ಲಿಯೂ ಆಲ್ ಪಾರ್ಟಿ ಮೀಟಿಂಗ್ ಕರೆಯಬೇಕಾಗ್ಬಹುದು. ಉಪಚುನಾವಣೆ ಆದ ಮೇಲೆ ಒಂದು ಸಭೆ ಮಾಡ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಎಂ ಬಿ ಪಾಟೀಲ್ ಅವರು ಪ್ರೊಪೋಷಲ್ ಕೊಟ್ಟಿದ್ದಾರೆ. ಅದಕ್ಕೆ ಅವರು ಒಪ್ಪಿದ್ದಾರೆ. ನಾವು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ಬೇಕು. ಲ್ಯಾಂಡ್,ಹಣಕಾಸು ಎಲ್ಲಾ ನಾವು ನೋಡ್ಬೇಕಾಗುತ್ತೆ. ಒಂದು ತಿರ್ಮಾನ ಮಾಡ್ತೇವೆ ಎಂದಿದ್ದಾರೆ.
ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಲ್ಲಾ ಸರ್ವೆ ರಿಪೋರ್ಟ್ ತಂದಿದ್ದೇವೆ. ಲೀಡರ್ಸ್‌ಗಳು ಅಭಿಪ್ರಾಯ ತಿಳಿಸಿದ್ದಾರೆ. ಎಐಸಿಸಿ ಜನರಲ್ ಸೆಕ್ರೆಟರಿ ಬರ್ತಾ ಇದ್ದಾರೆ. ನಾನು ಮತ್ತು ಸಿಎಂ ಸಹ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ನೋಡ್ಬೇಕು.ಪಕ್ಷ ಗೆಲ್ಲಬೇಕು,ಗೆಲ್ಲಲು ಏನ್ ಮಾಡಬೇಕು ಅದನ್ನ ಮಾಡ್ತೇವೆ. ಹೈಕಮಾಂಡ್ ಏನ್ ತಿರ್ಮಾನ ಮಾಡುತ್ತೆ ಆಪ್ರಕಾರ ಬಿ ಫಾರ್ಮ್ ಕೊಡ್ತೇವೆ. ನಾನು ಕೆಲವರ ಬಳಿ ಮಾತಾಡ್ತೇನೆ. ಮಾಜಿ ಮಂತ್ರಿಗಳ ಸೀಟ್ ಅದು. ವೀರಶೈವಮಹಾ ಸಭಾ ಅಧ್ಯಕ್ಷ ರ ಸೀಟ್ ಅದು. ಮೈನಾರಿಟಿಗಳು ನಮಗೆ ಇಂಪಾರ್ಟೆಂಟ್. ಆಸೆ ಪಡೋದ್ರಲ್ಲಿ ತಪ್ಪೇನಿಲ್ಲ. ಎಲ್ಲರನ್ನೂ ಕೂರಿಸಿಕೊಂಡು ಮಾತಾಡ್ತೇವೆ.ಈ ಹಿಂದೆ ಯಾರು ಆಕಾಂಕ್ಷಿಗಳಿದ್ರು,ಟಿಕೆಟ್ ಕೊಟ್ಟಿರಲಿಲ್ಲ. 70%ಆಕಾಂಕ್ಷಿ ಗಳಿಗೆ ಮಾತು ಕೊಟ್ಟಂತೆ ಈ ಹಿಂದೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದಾರೆ.










