ಬೆಂಗಳೂರು: ಸಿಎಂ ನಮ್ಮ ಮನೆಗೆ ಊಟಕ್ಕೆ ಕರೆದರು ಬರ್ತಾರೆ ಅದರಲ್ಲಿ ತಪ್ಪೇನಿದೆ? ಎಂದು ಸಿಎಂ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಎಸ್‌ಸಿ.ಎಸ್ ಎಸ್ಟಿ ಶಾಸಕರು, ಸಚಿವರು ಊಟಕ್ಕೆ ಕರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೋಗಿದ್ದಾರೆ.ಸಹಜವಾಗಿ ಅವರ ಸಮಸ್ಯೆ ಹೇಳಿಕೊಂಡಿದ್ದಾರೆ. ಸಿಎಂ ನಮ್ಮ ಮನೆಗೆ ಊಟಕ್ಕೆ ಕರೆದರು ಬರ್ತಾರೆ ಅದರಲ್ಲಿ ತಪ್ಪೇನಿದೆ?. ಊಟಕ್ಕೆ ಹೋದರೆ ತಪ್ಪೇನಿದೆ…? ಎಂದು ಪ್ರಶ್ನೆ ಮಾಡಿದ್ದಾರೆ.
ಪಕ್ಷದಲ್ಲಿ ಹೈಕಮಾಂಡ್ ಇದೆ, ವರಿಷ್ಠರಿದ್ದಾರೆ. ಎಲ್ಲವನ್ನೂ ಅವರು ನೋಡಿಕೊಳ್ಳುತ್ತಾರೆ. ಅಶ್ವತ್ಥ್ ನಾರಾಯಣ್ ಬೊಮ್ಮಾಯಿ ನಮ್ಮನೆಗೆ ಊಟಕ್ಕೆ ಬಂದಿದ್ರು. ಅದು ದೊಡ್ಡ ಸುದ್ದಿ ಆಗಿತ್ತು, ಊಟಕ್ಕೆ ಹೋಗುವುದೆಲ್ಲ ದೊಡ್ಡದಲ್ಲ. ಸಿಎಂ ಡಿಸಿಎಂ ಇಬ್ಬರನ್ನು ನಮ್ಮ ಮನೆಗೂ ಊಟಕ್ಕೆ ಕರೆಯೋಣ ಬರ್ತಾರೆ. ಅದರಲ್ಲಿ ವಿಶೇಷ ಏನೂ ಇಲ್ಲ.ಡಿಸಿಎಂ ವಿದೇಶದಲ್ಲಿ ಇದ್ದಾಗ ಬೇಕಂತಲೇ ಊಟಕ್ಕೆ ಸೇರಿದ್ದಾರೆ ಎಂಬುದು ಮಾಧ್ಯಮ ಗಳ ಸೃಷ್ಟಿ ಅಷ್ಟೇ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಗೆ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಏನು ತಪ್ಪಿದೆ?. ಕಾಂಟ್ಯಾಕ್ಟರ್ ಅಲ್ಲ ಅನ್ನೋದು ಇದೆ, ಅವರೇನು ಬರೆದೇನೋ ಇಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಫುಲ್ ಆಕ್ಟಿವ್ ಆಗಿದ್ದಾರೆ. ಸ್ವಾಭಾವಿಕವಾಗಿ ಅವರ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ, ತನಿಖೆಯಿಂದ ವರದಿ ಬರಲಿ ಎಂದ ಅವರು ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರದು ಏನು ತಪ್ಪಿದೆ..?. ಕಾಂಟ್ಯಾಕ್ಟರ್ ಅಲ್ಲ ಅನ್ನೋದು ಇದೆ, ಅವರೇನು ಬರೆದು ಇಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಫುಲ್ ಆಕ್ಟಿವ್ ಆಗಿದ್ದಾರೆ. ಸ್ವಾಭಾವಿಕವಾಗಿ ಅವರ ಮೇಲೆ ವಿಪಕ್ಷಗಳು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.
ಪ್ರಕರಣದ ತನಿಖೆ ನಡೆಯುತ್ತಿದೆ, ತನಿಖೆಯಿಂದ ವರದಿ ಬರಲಿ. ಪ್ರಿಯಾಂಕ್ ಖರ್ಗೆ ಅವರದ್ದು ಆ ಪ್ರಕರಣದಲ್ಲಿ ಏನು ತಪ್ಪಿದೆ. ಪ್ರಿಯಾಂಕ್ ಖರ್ಗೆ ಸ್ವಲ್ಪ ಆಕ್ಟಿವ್ ಇದಾರೆ. ಹಾಗಾಗಿ ಟಾರ್ಗೆಟ್ ಮಾಡಲಾಗ್ತಿದೆ ಅಷ್ಟೇ. ಅವರನ್ನ ನೇರವಾಗಿ ಅಟ್ಯಾಕ್ ಮಾಡ್ತಿದಾರೆ, ಅದಕ್ಕೆ ಅವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಹೇಳಿದ್ರು. ಬಿಜೆಪಿಯವರ ಸರ್ಕಾರ ಚೆನ್ನಾಗಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಹೇಳಿಕೆ ಯಾವಾಗ ಬದಲಾಗುತ್ತೋ ಕಾದು ನೋಡಿ. ಉಪಚುನಾವಣೆ ಆದಮೇಲೆ ಪರಿಸ್ಥಿತಿ ಬದಲಾಗಿದೆ. ಸದ್ಯದಲ್ಲೇ ಅವರ ಹೇಳಿಕೆ ಬದಲಾಗಬಹುದು ಎಂದಿದ್ದಾರೆ.