ಮನೆ Latest News ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಅನಿವಾರ್ಯತೆ ಏನಿತ್ತು?; ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಅನಿವಾರ್ಯತೆ ಏನಿತ್ತು?; ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ

0

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಅನಿವಾರ್ಯತೆ ಏನಿತ್ತು?; ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಜನಿವಾರದಲ್ಲಿ ಯಾವ ಡಿವೈಸ್ ಇಟ್ಟುಕೊಳ್ಳಲು ಸಾಧ್ಯ?. ಇದು ಕೇವಲ ಬ್ರಾಹ್ಮಣ ಸಮುದಾಯದ ಮೇಲೆ ಪ್ರಹಾರ ಅಲ್ಲ. ಇಡೀ ಹಿಂದೂಗಳ ಶ್ರದ್ದೆ ಮೇಲೆ ಆಗುತ್ತಿರುವ ಹಲ್ಲೆ. ಜನಿವಾರ ಶ್ರದ್ದೆಯ ಪ್ರತೀಕವೇ ಹೊರತು, ಅವರ ಜ್ಞಾನ ಅವರ ಮೆದುಳಿನಲ್ಲಿದೆ. ಶ್ರದ್ದೆಯನ್ನು ತಂದಿರುವುದೇ ಬ್ರಾಹ್ಮಣರು.ಜನಿವಾರ ತೆಗೆಸಿರುವುದು ಬ್ರಾಹ್ಮಣರಿಗೆ ಮಾಡಿರುವ ಅಪಮಾನ ಅಲ್ಲ. ಹಿಂದೂ ಶ್ರದ್ದಾ ಭಕ್ತಿಯ ಮೇಲೆ ಮಾಡಿರುವ ಅಪಮಾನ ಎಂದರು.

ಸಿದ್ದರಾಮಯ್ಯ ಅವರೇ ಮನೆಯಲ್ಲಿ ಮದುವೆ ಆಗಬೇಕು ಅಂದರೆ, ಸತ್ತರೆ ಶ್ರಾದ್ಧ ಮಾಡಲೂ ಬ್ರಾಹ್ಮಣರು ಬೇಕು. ಎಲ್ಲದಕ್ಕೂ ಬ್ರಾಹ್ಮಣರು ಬೇಕು. ಅವರ ಮೇಲೆ ಯಾಕೆ ನಿಮಗೆ ಕೋಪ?. ಸಿದ್ದರಾಮಯ್ಯಈ ಬಗ್ಗೆ ಮಾತಾಡದೇ ಮೌನವಾಗಿದ್ದಾರೆ ಅಂದರೆ ನೀವು ಹಿಂದೂಗಳ ಶ್ರದ್ದೆ ಒಡೆಯಲು ಮಾಡಿರುವ ಪ್ರಹಾರ. ಹಿಂದೂಗಳು ಎಲ್ಲರೂ ಒಟ್ಟಾಗಿ ಇದನ್ನು ವಿರೋಧ ಮಾಡಬೇಕು. ರೋಹಿತ್ ವೇಮುಲ ಕಾಯ್ದೆ ಜಾರಿಗೆ ಸಿಎಂಗೆ ರಾಹುಲ್ ಗಾಂಧಿ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ ರಾಹುಲ್ ಗಾಂಧಿ ಬಗ್ಗೆ ಹೆಚ್ಚು ಮಾತಾಡಲ್ಲ. ಮೊದಲು ರೋಹಿತ್ ವೇಮುಲ ದಲಿತ ಸಮುದಾಯ ಅಂದರು. ಬಳಿಕ ಯಾವ ಸಮುದಾಯ ಅಂತ‌ ಹೇಳಿದರು?. ರಾಹುಲ್ ಗಾಂಧಿ ಅವರ ಹೇಳಿಕೆಗೆಲ್ಲಾ ನಾನು ಕಾಮೆಂಟ್ ಮಾಡಲ್ಲ ಎಂದರು.

ಇನ್ನು ನೂರಾರು ಸೈಟು ಪಡೆದ ಮೈಸೂರಿನ ಶಾಸಕರ ಮೇಲೆ ತನಿಖೆ ಯಾಕಿಲ್ಲ ಎಂಬ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಸ್.ಟಿ. ಸೋಮಶೇಖರ್ ನಮ್ಮ ಪಕ್ಷದ ಚಿಹ್ನೆಯಲ್ಲೇ ಗೆದ್ದವರು. ಅವರು ಚನ್ನಪಟ್ಟಣದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ವೇದಿಕೆಗೆ ಹೋಗಿದ್ದರು. ರಾಜ್ಯಸಭೆ, ಎಂಎಲ್‌ಸಿ ಎಲೆಕ್ಷನ್ ನಡೆದರೆ ಕಾಂಗ್ರೆಸ್ ಕಡೆ ಕೈ ಎತ್ತುತ್ತಾರೆ. ಈ ರೀತಿ ಸೋಮಶೇಖರ್ ನೈತಿಕ ಅಧ:ಪತನದತ್ತ ಹೋಗಿದ್ದಾರೆ. ಅವರ ಬಗ್ಗೆ ನಾನು ಮಾತಾಡಲ್ಲ. ಮುಡಾದಲ್ಲಿ 14 ಸೈಟು ಸಿದ್ದರಾಮಯ್ಯ ಪಡೆದಾಗ ಮೈಸೂರು ಉಸ್ತುವಾರಿ ಸಚಿವರು ಇದೇ ಸೋಮಶೇಖರ್ ಆಗಿದ್ದರು. ಮುಡಾದಲ್ಲಿ ಎಂಎಲ್‌ಎ, ಎಂಎಲ್‌ಸಿ ಗಳು ನೂರಾರು ಸೈಟುಗಳನ್ನು ತೆಗೆದುಕೊಂಡಿದ್ದಾರೆ ಅಂದರೆ ಅವರು ಯಾರು ಯಾರು ಅಂತ ಅವರಿಗೇ ಗೊತ್ತಿರಬೇಕಲ್ಲಾ. ಸೋಮಶೇಖರ್ ಯಾರು ಯಾರಿಗೆ ಕೊಡಿಸಿದರು ಅಂತ ಅವರಿಗೇ ಗೊತ್ತಿರುತ್ತದೆ. ಸೋಮಶೇಖರ್ ಇರುವಾಗಲೇ ಸಿದ್ದರಾಮಯ್ಯಗೆ 14 ಸೈಟು ಕೊಟ್ರಲ್ಲಾ ಹಾಗಾದರೆ ಪ್ರಕರಣದಲ್ಲಿ ಸೋಮಶೇಖರ್ ಸಹ ಭಾಗಿಯಾಗಿದ್ದರು ಅಂತ ಹೇಳಲು ಆಗುತ್ತಾ?. ಸೋಮಶೇಖರ್ ಅವರಿಗೆ ವಿಚಾರ ಗೊತ್ತಿದ್ದರೆ ಇಂತಿಂಥ ಶಾಸಕರು, ಪರಿಷತ್ ಸದಸ್ಯರು ಮುಡಾ ಸೈಟುಗಳನ್ನು ಪಡೆದಿದ್ದಾರೆ ಅಂತ ಹೆಸರು ಹೇಳಲಿ. ಸೋಮಶೇಖರ್ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದರು.