ಮನೆ Latest News ರಾಜಣ್ಣ ಹೇಳಿರುವುದು ಕರೆಕ್ಟ್ ಇದೆ, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಏನಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್...

ರಾಜಣ್ಣ ಹೇಳಿರುವುದು ಕರೆಕ್ಟ್ ಇದೆ, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಏನಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಹೇಳಿಕೆ

0

ಬೆಂಗಳೂರು; ರಾಜಣ್ಣ ಹೇಳಿರುವುದು ಕರೆಕ್ಟ್ ಇದೆ, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಏನಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬು ಏನಿಲ್ಲ.ರಾಜಣ್ಣ ಅವರ ಮಾತನ್ನ ಸಂಪೂರ್ಣವಾಗಿ ಒಪ್ಪಿಕೊಳ್ತೇನೆ, ಗೌರವಿಸ್ತೇನೆ. ರಾಜಣ್ಣ ಪಕ್ಷದ ಹಿರಿಯ ನಾಯಕರು. ಕಾರ್ಯಾಧ್ಯಕ್ಷನಾಗಿ ನಾನು ಪ್ರತಿಕ್ರಿಯೆ ಬೆಳೆಸಿಕೊಂಡು ಹೋಗೋದಿಲ್ಲ.ನಾನು ಯಾರನ್ನೂ ಉದ್ದೇಶಿಸಿ ಮಾತನ್ನಾಡಿಲ್ಲ. ನಾನೊಬ್ಬ ಕಾರ್ಯಕರ್ತ ರಾಜಣ್ಣ ಅವರು ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ರಾಜಣ್ಣ ನಮ್ಮ ಪಕ್ಷದ ಹಿರಿಯ ನಾಯಕರು.ನಾನೊಬ್ಬ ಕಾರ್ಯಧ್ಯಕ್ಷನಾಗಿ ಇದನ್ನು ಬೆಳೆಸಿಕೊಂಡು ಹೋಗೋದು ಸರಿ ಹೋಗಲ್ಲ ಎಂದರು.

ಕ್ರಿಯೆಗೆ ಪ್ರತಿಕ್ರಿಯೆ ಕೊಡೋದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಅವರ ಹಿರಿತನಕ್ಕೆ ನಾನು ಬೆಲೆ ಕೊಡುತ್ತೇನೆ.ಅವರು ಏನು ಹೇಳಿದರು ನನ್ನ ಒಳ್ಳೆಯದಕ್ಕೆ ಹೇಳಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ.ನಾನು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಲ್ಲ.ರಾಜಣ್ಣ ಹೇಳಿಕೆಗೆ ನಾನು ಮುಂದುವರಿಸಲು ಹೋಗಲ್ಲ.ಈ ಸ್ಥಾನಕ್ಕೆ ಘನತೆ ತರಬೇಕು ಅನ್ನುವ ಕಾರಣಕ್ಕೆ ಏನು ಮಾತನಾಡಲ್ಲ.ರಾಜಣ್ಣ ಅವರ ಸ್ಟೇಟ್ಮೆಂಟನ್ನು ನಾನು ಗೌರವಿಸುತ್ತೇನೆ.ದೊಡ್ಡವರು ಒಂದು ಮಾತು ಹೇಳ್ತಾರೆ ಅದನ್ನು ನೋಡಿಕೊಂಡು ಅನುಸರಿಸಿಕೊಂಡು ಹೋಗಬೇಕು.ನನ್ನಿಂದ ಪಕ್ಷಕ್ಕಾಗಲೀ, ನಾಯಕರಿಗಾಗಲೀ ಪಕ್ಷದ ಕಾರ್ಯಕರ್ತರಿಗಾಗಲೀ ಚಂದ್ರಶೇಖರ್ ಇದನ್ಮ ಮಾಡಬಾರದಿತ್ತು ಅನ್ನುವ ಭಾವನೆ ಬರಬಾರದು.ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಇದನ್ನು ಗೌರವಿಸುತ್ತೇನೆ.ನನ್ನನ್ನ ರಾಜ್ಯಸಭಾ ಸದಸ್ಯರಾಗಿ ಮಾಡಿರೋದು ಕಾಂಗ್ರೆಸ್ ಪಕ್ಷ. ಯಾರ್ಯಾರಿಗೆ ಟಿಕೆಟ್ ಕೊಟ್ಟಿದೆ ಯಾರ್ಯಾರಿಗೆ ಮಂತ್ರಿ ಮಾಡಿದೆ ಅದು ಕೂಡ ಕಾಂಗ್ರೆಸ್ ಪಕ್ಷ. ಇದು ಸರಿ ಅಂದಮೇಲೆ ಅದೂ ಸರಿ ಅಲ್ಲವೇ,ನಮ್ಮನ್ನ ಎಲ್ಲಿ ಗುರುತಿಸಬೇಕು ಅಲ್ಲಿ ಗುರುತಿಸಿರುತ್ತಾರೆ.ಸರಿ ಇಲ್ಲ ಅಂತ ಅನಿಸಿದರೆ ನೀವು ಆ ರೀತಿ ಅಂದುಕೊಳ್ಳಬಹುದು.ನನ್ನ ಸಾಮರ್ಥ್ಯ ಏನು ಅಂತ ನಿಮಗೆ ಗೊತ್ತಿದೆ.ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ ಏನ್ ನಿರ್ವಹಣೆ ಮಾಡಿದ್ದನ್ನು ನೀವು ಬರೆಯಬಹುದು.ಅವರ ಹೇಳಿಕೆಯಿಂದ ನನ್ನ ಮಾನದಂಡ ಫಿಕ್ಸ್ ಆಗಲ್ಲ.ಅವರ ಮಾತನ್ನು ನಾನು ಸಂಪೂರ್ಣ ಗೌರವಿಸುತ್ತೇನೆ.ನನ್ನಲ್ಲಿ ಏನೋ ಕೊರತೆ ಇರಬೇಕು ಅಂದುಕೊಳ್ತೇನೆ.ನನಗೆ 25 ವರ್ಷ ಇದ್ದಾಗ ನಾನು ಕಾರ್ಪೊರೇಷನ್ ಚುನಾವಣೆಗೆ ನಿಂತಿದ್ದೆ.25 ವರ್ಷಗಳ ನಂತರ ನನ್ನ ಬೆಳವಣಿಗೆಗಳು ಸಾಕಷ್ಟು ಇದೆ.ರಾಜಣ್ಣ ಅವರ ಹೇಳಿಕೆಗೆ ಕೌಂಟರ್ ಆಗಿ ನಾನು ಮಾತನಾಡಲ್ಲ ಎಂದಿದ್ದಾರೆ.