ಬೆಂಗಳೂರು; ರಾಜೀವ್ ಗೌಡ ವಿರುದ್ಧ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳಲಾಗುತ್ತೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ರಾಜೀವ್ ಗೌಡ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಪೊಲೀಸ್ ಇಲಾಖೆಗೆ ಅವರನ್ನು ಅರೆಸ್ಟ್ ಮಾಡುವುದಕ್ಕೆ ಸೂಚನೆ ನೀಡಿದ್ದೆವು. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳಲಾಗುತ್ತೆ.
ನಾವು ಯಾವುದನ್ನು ಕೂಡ ಪ್ಲಾನ್ ಮಾಡಿಲ್ಲ.ಅವರು ತಪ್ಪಿಸಿಕೊಂಡು ಹೋಗಿದ್ದರು .ನಮ್ಮ ಮೂರರಿಂದ ನಾಲ್ಕು ತಂಡಗಳನ್ನು ಮಾಡಲಾಗಿತ್ತು. ಹುಡುಕುತ್ತಾ ಇದ್ದರು ಮಾಹಿತಿ ಸಿಕ್ಕಿದ ಮೇಲೆ ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ . ಕೋರ್ಟ್ ಅಲ್ಲೂ ಕೂಡ ಅವರ ಬೇಲ್ ಮೊದೇ ರಿಜೆಕ್ಟ್ ಆಗಿದೆ .ಮೂರ್ನಾಲ್ಕು ದಿನ ಆಗೋಗಿದೆ. ಅಶೋಕ್ ಅವರು ಕೂಡ ಗೃಹ ಸಚಿವರಾಗಿದ್ದರು. ಅವರು ಹೀಗೆ ಮಾಡುತ್ತಿದ್ದರಾ?. ಇದು ಹೇಳೋದಕ್ಕೆ ಮಾತ್ರ ಸುಲಭ ಅಲ್ವಾ?. ರಾಜೀವ್ ಗೌಡ ಅಮಾನತು ಮಾಡಲಾಗಿದೆ.ಉಚ್ಚಾಟನೆ ವಿಚಾರ ಅದು ಪಕ್ಷದ ನಿರ್ಧಾರ ಆಗುತ್ತೆ ಎಂದಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ಗೃಹ ಸಚಿವ ಪರಮೇಶ್ವರ್ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸುವುದರ ಜೊತೆಗೆ ಅನೇಕ ಕಾನೂನನ್ನು ಬದಲಾಯಿಸಿದ್ದಾರೆ. ಮನರೇಗಾ ಕಾಯ್ದೆಯನ್ನ 2005ರಲ್ಲಿ ತರಲಾಗಿದ್ದು, ಜನಪರವಾದ ಪ್ರಾವಿಷನ್ಗಳನ್ನ ಮಾಡಿದ್ದೆವು.ಆದರೆ ಇವರು ದೆಹಲಿಯಲ್ಲಿ ಕುಳಿತುಕೊಂಡು ತೀರ್ಮಾನ ಮಾಡಿ ಬದಲಾಯಿಸಿದ್ದಾರೆ.ನಮ್ಮ ಹಳ್ಳಿಯ ಕೆಲಸ ಕಾರ್ಯಗಳನ್ನು ದೆಹಲಿಯಿಂದ ತೀರ್ಮಾನ ಮಾಡುವುದಾದರೆ ಅಧಿಕಾರ ವಿಕೇಂದ್ರೀಕರಣ ಪದಕ್ಕೆ ಧಕ್ಕೆ ಬಂದಂತೆ ಅದಕ್ಕಾಗಿ ಇಡೀ ದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ರಾಜ್ಯಪಾಲರಿಗೆ ಈ ವಿಚಾರವಾಗಿ ಮೆಮೋರಾಡಂ ಕೊಡಲು ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.











