ಮನೆ Latest News ತಪ್ಪು ಏನು ಆಗಿಲ್ಲ,ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇದ್ದಾಗ ಮಾಡಿಸಿಲ್ಲ: ಸಚಿವ ಚೆಲುವರಾಯಸ್ವಾಮಿ ಹೇಳಿಕೆ

ತಪ್ಪು ಏನು ಆಗಿಲ್ಲ,ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇದ್ದಾಗ ಮಾಡಿಸಿಲ್ಲ: ಸಚಿವ ಚೆಲುವರಾಯಸ್ವಾಮಿ ಹೇಳಿಕೆ

0

ಬೆಂಗಳೂರು; ತಪ್ಪು ಏನು  ಆಗಿಲ್ಲ,ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇದ್ದಾಗ ಮಾಡಿಸಿಲ್ಲ ಎಂದು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಇದು ನಮಗೆ ಗೊತ್ತಿರುವ ಸತ್ಯ. ತಪ್ಪು ಏನು  ಆಗಿಲ್ಲ,ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಇದ್ದಾಗ ಮಾಡಿಸಿಲ್ಲ. ಮುಖ್ಯಮಂತ್ರಿಗಳು ಯಾವುದೇ ಪತ್ರ ಹೋಗಿಲ್ಲ. ಅವರು ಏನು ಶಿಫಾರಸು ಮಾಡಿಲ್ಲ. ಹಲವಾರು ಜನಕ್ಕೆ ಕೊಟ್ಟಿದ್ದಾರೆ ಅದರಂತೆ ಇವರಿಗೂ ಕೊಟ್ಟಿದ್ದಾರೆ. ಬೇರೆಯವರಿಗೆ ಕೊಟ್ಟು ಇವರಿಗೆ ಕೊಟ್ಟಿಲ್ಲ ಅಂದ್ರೆ ತಪ್ಪಾಗುತ್ತೆ ಅಂತ ಹೇಳಿ ಇವರಿಗೂ ಕೊಟ್ಟಿದ್ದಾರೆ. ಆ ಕಾರಣಕ್ಕೆ ಸೈಟು ಕೊಟ್ಟಿದ್ದಾರೆ.ಇದು ತಪ್ಪು ಆಗಿರೋದು ಬಿಜೆಪಿ ಸರ್ಕಾರದಲ್ಲಿ. ಬಿಜೆಪಿಯ ನಾಮ ನಿರ್ದೇಶನ ಮಾಡಿರುವ ಅಧ್ಯಕ್ಷರ ಕಾಲದಲ್ಲಿ. ಕ್ರಮ ಅದರೆ ಅವರ ಮೇಲೆ ಕ್ರಮ ಆಗಬೇಕು.ದುರಂತಗಳು ಕೆಲಮೊಮ್ಮೆ ಈ ತರ ಟೀಕೆ ಟಿಪ್ಪಣಿ ಮಾಡಿದ್ರು. ಇಲ್ಲಿಂದ ಪಾದಯಾತ್ರೆ ಮಾಡಿದ್ರು.ಅದರ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು. ಜನತಾದಳ- ಬಿಜೆಪಿ ಅವರು ಜವಾಬ್ದಾರಿ ತೆಗೆದುಕೊಳ್ಳಬೇಕು.ಒಂದು ಕಡೆ ಸಿಬಿಐ ತನಿಖೆಗೆ ಕೋರ್ಟ್ ಗೆ ಹಾಕಿದ್ರು. ಅದನ್ನ ಅವಶ್ಯಕತೆ ಇಲ್ಲ ಅಂತ ಹೇಳಿ, ಹೇಳಿ  ಬೇರೆ ಏಜೆನ್ಸಿ ಮಾಡ್ತಾ ಇದೆ ಅಂತ ವಾಪಸ್ ಹಾಕಿದ್ರು. ಮತ್ತೊಂದು ಕಡೆ ಯಾವುದು ಇವರದ್ದು ಪ್ರಭಾವದಿಂದ ಇಲ್ಲ ಅಂತ ಪೊಲೀಸರು ವರದಿ ಕೊಟ್ಟಿದ್ದಾರೆ ಎಂದಿದ್ದಾರೆ.

ರಾಜಕೀಯ ಷಡ್ಯಂತ್ರ ಎಂಬ ಹೆಚ್ಡಿಕೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕೋರ್ಟ್ ನಲ್ಲಿ ಕೊಟ್ಟಿರೋದು ರಾಜಕೀಯ ಷಡ್ಯಂತ್ರ ಅಂತ ಹೇಳಿದ್ದಾರಾ ಅವ್ರು,ನ್ಯಾಯಾಲಯದ ಮೇಲೆ ಭರವಸೆ ಇಟ್ಟುಕೊಂಡು ಸಂವಿಧಾನದ ಅಡಿ ಕೆಲಸ ಮಾಡ್ತಾ ಇದ್ದೀವಿ.ಸರ್ಕಾರ ಹೋಗಿ ಸರ್ವೇ ಮಾಡ್ತಾ ಇಲ್ಲ.ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿ,ತನಿಖೆ ಆಗಿ ನ್ಯಾಯಾಲಯ ಆದೇಶದಂತೆ ಕೆಲಸ ಮಾಡಿ ವರದಿಯನ್ನ ಕೋರ್ಟ್ ಗೆ ಕೊಡ್ತಾರೆ ಎಂದ್ರು. ಸರ್ಕಾರ ಜಾಗ ಒತ್ತುವರಿ ಮಾಡಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ ಎಂಬ ಹೆಚ್ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ  ಅವರು ಮೊದಲಿಂದಲೂ ಆರೋಪ ಮಾಡ್ತಾ ಇದ್ದಾರೆ ಮಾಡ್ಲಿ ಎಂದಿದ್ದಾರೆ.