ಹಾಸನ; ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೋ, ಆಗಬೇಕೋ, ಏನು ಆಗಬೇಕು, ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು ಅನ್ನೋದನ್ನು ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಮಾಜಿಶಾಸಕ ಪ್ರೀತಂಗೌಡ ವಿರೋಧ ಹಾಗೂ 2028 ಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬ ಜೆಡಿಎಸ್ ನಾಯಕರ ಹೇಳಿಕೆ ಕುರಿತು ಪ್ರೀತಂಗೌಡ ಟಾಂಗ್ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಕೆಲಗಳಲೆ ಗ್ರಾಮದಲ್ಲಿ ಮಾತನಾಡಿದ ಅವರು ಜನತಾದಳ ಪಕ್ಷದ ನಾಯಕತ್ವದ ಹಿಡಿದಿರುವುದು ಸನ್ಮಾನ್ಯ ಕುಮಾರಣ್ಣ ಅವರು. ದೇವೇಗೌಡರು ಸಾಹೇಬರ ಮಾರ್ಗದರ್ಶನ, ರೇವಣ್ಣ ಸಾಹೇಬರ ಅವರ ರಾಜಕೀಯ ಶಕ್ತಿ ಬಹಳ ಪ್ರಬಲವಾಗಿದೆ. ಇವತ್ತಿಗೂ ಕುಮಾರಣ್ಣ ಅವರು ಕೊಟ್ಟಂತಹ ಆಡಳಿತವನ್ನು ಜನ ಇಂದಿಗೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.
ನಾನು ಜನರೊಂದಿಗೆ ಜನತಾದಳ ಮಾಡಿದಾಗ 52 ಕ್ಷೇತ್ರದಲ್ಲಿ 9 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ್ದೆ. ಮೊದಲನೇ ಹಂತದಲ್ಲಿ ಓಡಾಡಿಕೊಂಡು ಬಂದಿದ್ದೇನೆ. ಎಲ್ಲೇ ಹೋದರು ಇವತ್ತಿನ ಈ ಸರ್ಕಾರದ ದುರಾಡಳಿತ, ಸರ್ಕಾರದ ಕೆಲವೊಂದು ನಡವಳಿಕೆ ನೋಡಿ ಜನರು ಬೇಸತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲೇ ಹೋದರು ಜನ ಕುಮಾರಣ್ಣನಂತಹ ನಾಯಕ ಈ ರಾಜ್ಯದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಪ್ರಸ್ತಾಪಗಳು ಬಹಳ ಗಟ್ಟಿಯಾಗಿ ನಡೆಯುತ್ತಿದೆ. ಅದಕ್ಕೆ ನಾನು ಸಾಕ್ಷಿ ಇದ್ದೇನೆ. 2028 ಜನತಾದಳ ಪಕ್ಷ ಎಂದರೆ ಕುಮಾರಣ್ಣನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ. ಇದು ಕಾರ್ಯಕರ್ತರ ಅಪೇಕ್ಷೆ ಅಲ್ಲಾ, ಜನರ ಭಾವನೆ ಕೂಡ ಅದೇ ಆಗಿದೆ. ಅದನ್ನು ನಾನು ಹೊರಗಡೆ ಹಾಕಿದ್ದೀನಿ. ನಮ್ಮದು ಪ್ರಾದೇಶಿಕ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಅವರು ಜೊತೆ ಒಂದಾಗಿದ್ದೇವೆ.ರಾಜ್ಯದ ಹಿತ ದೃಷ್ಟಿಯಿಂದ ಒಂದಾಗಿದ್ದೇವೆ. ರಾಜ್ಯದ ಜನತೆಯೂ ಅದಕ್ಕೆ ಪೂರಕವಾಗಿ ಸಹಿ ಹಾಕಿದ್ದಾರೆ.ಲೋಕಸಭೆಗೆ 19 ಜನ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕುಮಾರಣ್ಣ ಅವರು ಮುಂದೆ ಮುಖ್ಯಮಂತ್ರಿ ಆಗ್ತಾರೋ, ಆಗಬೇಕೋ, ಏನು ಆಗಬೇಕು, ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು ಇವೆಲ್ಲವನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಕಾಲ ಬಂದಂತಹ ಸಂದರ್ಭದಲ್ಲಿ ಕುಳಿತು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಶಿಸ್ತು ಪಾಲನೆ ಕಮಿಟಿ ಇರುತ್ತೆ, ನಮ್ಮಲ್ಲೂ ಇದೆ. ಶಿಸ್ತು ಪಾಲನೆ ಕಮಿಟಿ ಯಾರ್ಯಾರು ಪಕ್ಷದ ಅಶಿಸ್ತಿನ ನಡವಳಿಕೆಗೆ ಕಾರಣರಾಗುತ್ತಾರೆ. ಆಯಾ ಪಕ್ಷದ ಕಮಿಟಿಯಲ್ಲಿ ಇವೆಲ್ಲವೂ ತೀರ್ಮಾನ ಮಾಡ್ತಾರೆ.ಬೀದಿಯಲ್ಲಿ ನಿತ್ಕಂಡು, ಬೀದಿ ರಂಪಾಟ ಮಾಡಿಕೊಂಡು ಎರಡು ಪಕ್ಷದ ಕಾರ್ಯಕರ್ತರು, ನಾಯಕರು ಗೌರವ ಕಳೆದುಕೊಂಡು ಮಾತನಾಡಬೇಡಿ ಎಂದು ಅವರ ಪಕ್ಷದಲ್ಲಿ ತಿದ್ದಿ ಬುದ್ದಿ ಹೇಳ್ತಾರೆ ಅಂಥ ನಂಬಿದ್ದೀನಿ, ಕಾದು ನೋಡೋಣ ಎಂದು ಅವರು ಹೇಳಿದ್ದಾರೆ.











