ಮನೆ Latest News ಸಚಿವ ತಿಮ್ಮಾಪೂರ್ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಸಚಿವ ತಿಮ್ಮಾಪೂರ್ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

0

ಬೆಂಗಳೂರು; ಸಚಿವ ತಿಮ್ಮಾಪೂರ್ ವಿರುದ್ಧ ಭ್ರಷ್ಟಾಚಾರ ಆರೋಪ ವಿಚಾರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಬಿಜೆಪಿ ಅವರು ಪ್ರಸ್ತಾಪ ಮಾಡಿದ್ರು, ದಾಖಲೆ ಕೊಟ್ಟಿಲ್ಲ. ಈಗ ಅಧಿಕಾರಿ ಸಿಕ್ಕಿಕೊಂಡಿದ್ದಾರೆ, ತನಿಖೆ ನಡೆಯುತ್ತಿದೆ. ಸಾಬೀತಾದ್ರೆ ಮಂತ್ರಿ ಸ್ಥಾನದಲ್ಲಿ ತಿಮ್ಮಾಪೂರ್ ಇರಲ್ಲ. ಅಧಿವೇಶನ ಬರುತ್ತಿದೆ ಅಲ್ಲಿ ದಾಖಲೇ ಬಿಜೆಪಿ ನೀಡಲಿ. ಚರ್ಚೆ ಗೆ ಬರಲಿ. ಸುಮ್ಮನೆ ಸಾವಿರಾರು ಕೋಟಿ ಹಗರಣ ಆಗಿದೆ ಅಂತಾರೆ. ಈ ಹಿಂದೆ ಆರೋಪ ‌ಮಾಡಿದ್ದು ಸಾಬೀತು ಮಾಡಲು ಆಗಲ್ಲ.ಬಿಜೆಪಿಯವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಸುಳ್ಳು ಹೇಳುವುದೆ ಬಿಜೆಪಿಗೆ ಪವೃತ್ತಿಯಾಗಿದೆ ಎಂದಿದ್ದಾರೆ.

ಡಿ ಕೆ ಶಿವಕುಮಾರ್ ರಾಹುಲ್ ಗಾಂಧಿ ಭೇಟಿಗೆ ಸಿಕ್ಕಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಮನೆಯಲ್ಲಿ ರಾಹುಲ್ ಗಾಂಧಿಯವರನ್ನ ಭೇಟಿ ಮಾಡಿದ್ದಾರೆ. ಭೇಟಿ ಆಗಿಲ್ಲ ಅಂದರೆ ಹೇಗೆ? ಎರಡು ಗಂಟೆ ಚರ್ಚೆ ಮಾಡಿದ್ದಾರೆ. ಏನೆಲ್ಲ ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕೆಂಬ ಸಚಿವ ಮುನಿಯಪ್ಪ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನೋವು ಹಲವಾರು ಜನರಿಗೆ ಇರಬಹುದು.ಎಲ್ಲಾ ಸಮುದಾಯಕ್ಕೂ ನಾಯಕತ್ವ ಬೆಳೆಸಬೇಕೆಂಬುದು ಇರುತ್ತೆ.ಹಿಂದುಳಿದ, ಅಲ್ಪಸಂಖ್ಯಾತ, ದಲಿತ, ಮೇಲ್ವರ್ಗ ಎಲ್ಲರಿಗೂ ನಾಯಕತ್ವದ ಆಸೆ ಇರುತ್ತೆ.ಎಲ್ಲವನ್ನೂ ಗುರುತಿಸಿಯೇ ಖರ್ಗೆಯವರನ್ನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿಲ್ಲವಾ ?. ಹೈಕಮಾಂಡ್ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ರಾಮುಲು ಮೇಲೆ ಪೋಕ್ಸೋ ಕೇಸ್ ವಿಚಾರದ ಬಗ್ಗೆ ಮಾತನಾಡಿ ಅದರ ಬಗ್ಗೆ ಗೊತ್ತಿಲ್ಲ. ಇನ್ನೊಬ್ಬರು ಇದ್ದಾರೆ ಅಲ್ವಾ ಅವರ ಬಗ್ಗೆ ಯಾಕೆ ಮಾತನಾಡಲ್ಲ. ಕೋರ್ಟ್ಗಗೆ ಹೋಗಿ ಸ್ಟೇ ತಗೊಂಡು ಬಂದ್ರು ಅಲ್ವಾ. ಈಗ ಅವರನ್ನೆ ಮುಂದಿಟ್ಟು ಪ್ರಚಾರ ಮಾಡ್ತಿದ್ದಾರೆ. ಮಹಿಳಾ ಅಧಿಕಾರಿಯ ಮೇಲೆ ರಾಜೀವ್ ಗೌಡ ಧಮ್ಕಿ ಪ್ರಕರಣದ ಬಗ್ಗೆ ಮಾತನಾಡಿ ಅವರಿಗೆ ನೋಟಿಸ್ ಕೂಡ ಕೊಡಲಾಗಿದೆ. ಹೋಂ ಮಿನಿಸ್ಟರ್ ಕೂಡ ಇದನ್ನೇ ಹೇಳಿದ್ದಾರೆ. ಇಟ್ ಈಸ್ ವೈರಿ ರಾಂಗ್ . ಬಿಜೆಪಿ ಅವರಿಗೆ ನೈತಿಕತೆ ಇದ್ಯಾ?.ಸಿ.ಟಿ ರವಿ ಅವರು ಏನು ಮಾತನಾಡಿದ್ರು?. ಅಶೋಕ್ ಅವರು ನಾಯಿ ಅಂತಾ ಕರೆದ್ರು. ಹೆಚ್ಡಿಕೆ, ದೇವೇಗೌಡ್ರು ಏನು ಮಗ ಅಂತಾ ಅಂದ್ರು. ಅದೆಲ್ಲ ಪಬ್ಲಿಕ್ ಡೊಮೈನ್ ನಲ್ಲಿ ಇದೆ ಅಲ್ವಾ?. ಅವರಿಗೆ ನೋಟಿಸ್ ಕೊಡೋ ಕೆಲಸ ಆಗಿಲ್ಲ. ಆದ್ರೆ  ರಾಜೀವ್ ಗೌಡ ಮಾಡಿರೋದು ತಪ್ಪು. ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ ಎಂದಿದ್ದಾರೆ.