ಬೆಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ನಂತರ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ?ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಪ್ರಶ್ನೆ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ವಿರುದ್ಧ ಬಿಜೆಪಿ ಸರ್ಕಾರ ಇರುವಾಗಲೇ ರೌಡಿ ಶೀಟರ್ ತೆರೆಯಲಾಗಿತ್ತು ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ಪ್ರತಿಕ್ರಿಯಿಸಿದ ಅವರು ಸುಹಾಸ್ ಶೆಟ್ಟಿ ರೌಡಿ ಶೀಟರ್ ಎನ್ನುವುದು ಅವಮಾನವೇ ನಿಮಗೆ?. ಯಾರ್ಯಾರು ರೌಡಿ ಶೀಟರ್ ಗಳನ್ನಿಟ್ಕೊಂಡು ರಾಜಕಾರಣ ಮಾಡುತ್ತಿದ್ದಾರೆ ಹೇಳಬೇಕಾ?.ಸುಹಾಸ್ ಶೆಟ್ಟಿ ಹತ್ಯೆಗೆ ಕಾಂಗ್ರೆಸ್ ಓಲೈಕೆ ರಾಜಕೀಯ ಕಾರಣ, ಕಾಂಗ್ರೆಸ್ ಕಮ್ಯುನಲ್ ಪಾಲಿಟಿಕ್ಸ್ ಕಾರಣ.ಇದು ಕಮ್ಯುನಲ್ ಸರ್ಕಾರ, ಕ್ರಿಮಿನಲ್ ಗಳಿಗೆ ಬೆಂಬಲಿಸುವ ಸರ್ಕಾರ ಎಂದಿದ್ದಾರೆ.
ನಾಳೆ ಯುದ್ಧ ಎದುರಿಸುವ ಮಾಕ್ ಡ್ರಿಲ್ ನಡೆಯಲಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಜನ ಎಚ್ಚರ ವಹಿಸಬೇಕು. ಹೊರಗಿನ ಶತ್ರುಗಳ ಬಗ್ಗೆ ನಮಗೆ ಭಯ ಇಲ್ಲ. 1962 ರ ಯುದ್ಧ ಒಂದು ಹೊರತು ಪಡಿಸಿ ಉಳಿದ ಯುದ್ಧಗಳಲ್ಲೆಲ್ಲಾ ನಮ್ಮ ಸಾಮರ್ಥ್ಯ ಏನು ಅಂತ ತೋರಿಸಿದ್ದೇವೆ. 1962 ರಲ್ಲಿ ಅಂದಿನ ಪ್ರಧಾನಿಯ ಮೂರ್ಖತನದಿಂದ ನಮ್ಮ ಸೈನಿಕರನ್ನು ಬಲಿ ಕೊಡುವ ಸಂದರ್ಭ ಬಂತು. ಆದರೆ ಅಪಾಯ ಇರುವುದು ಒಳಗಿನ ದ್ರೋಹಿಗಳ ಬಗ್ಗೆ . ಒಳಗಿನ ದ್ರೋಹಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಜಮೀರ್ ಅಹಮ್ಮದ್ ಹೋರಾಡಬೇಕಿರುವುದು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ಧ. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದವರನ್ನು ಮಟ್ಟ ಹಾಕಲು ಜಮೀರ್ ಅಹ್ಮದ್ ಬೇಕು. ಪಾಕಿಸ್ತಾನ ಜಿಂದಾಬಾದ್ ಎನ್ನುವ ಕುನ್ನಿಗಳ ವಿರುದ್ಧ ನೀವು ಹೋರಾಟ ಮಾಡಿ. ಭಾರತದ ಒಳಗೆ ಇದ್ದು ನಾಯಿ ತರಹ ಬೊಗಳುವವರ ವಿರುದ್ಧ ಹೋರಾಡಿ. ನಾವು ಅಲ್ಲಾಹು ದೇವರಲ್ಲ ಎಂದು ಹೇಳುವುದಿಲ್ಲ. ನಾವು ಎಲ್ಲಾ ದೇವರನ್ನು ಪೂಜಿಸುವವರು, ಅಲ್ಲಾ ಒಬ್ಬ ಹೆಚ್ಚಲ್ಲ. ಆದರೆ ನೀವು ಅಲ್ಲಾ ಒಬ್ಬನೇ ದೇವರು ಎನ್ನುವುದನ್ನು ಬದಲಿಸಿ. ನೀವು ದೇವನೊಬ್ಬ ನಾಮ ಹಲವು ಎಂದು ಹೇಳಿ ನೋಡೋಣ ಎಂದಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಸಿ.ಟಿ. ರವಿ ಅರ್ಜಿ ವಜಾ ಆದ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಕೇಸ್ ಶಾಸಕಾಂಗ ವರ್ಸಸ್ ಕಾರ್ಯಾಂಗ ಮಧ್ಯೆ. ನನಗೆ ಮಾಡಿದ್ದೇ ಇನ್ನೊಬ್ಬರಿಗೂ ಆಗುತ್ತದೆ. ನಾನೂ ಒಂದು ದೂರು ಕೊಟ್ಟಿದ್ದೀನಲ್ಲಾ, ನನ್ನ ಬಂಧಿಸಿದಂತೆ ಅವರನ್ನೂ ಬಂಧಿಸಿ ಕ್ರಮ ತೆಗೆದುಕೊಳ್ಳಲಿ. ನನ್ನ ವಿಚಾರದಲ್ಲಿ ಸರ್ಕಾರ ಪಾರದರ್ಶಕತೆಯಿಂದ ನಡೆದುಕೊಂಡಿಲ್ಲ .ಇದು ಶಾಸಕಾಂಗದ ಪ್ರಶ್ನೆ, ಸಭಾಪತಿಯವರೇ ತೀರ್ಮಾನ ತೆಗೆದುಕೊಳ್ಳಬೇಕು.ನಾನು ತನಿಖೆಗೆ ಸಿದ್ಧ, ಆದ್ರೆ ಸದನದೊಳಗೆ ನಡೆದ ಘಟನೆ ಯಾರು ತನಿಖೆ ಮಾಡಬೇಕು?. ಸಭಾಪತಿ ತನಿಖೆ ಮಾಡಬೇಕೋ? ಪೊಲೀಸರೋ?. ನಾನು ಕೇಸ್ ಗೆ ಹೆದರಿ ಸಾರ್ವಜನಿಕ ಜೀವನ ತೊರೆಯಲ್ಲ.ಈ ಕೇಸನ್ನು ವ್ಯಕ್ತಿಗತವಾಗಿ ಎದುರಿಸುತ್ತೇನೆ ಎಂದಿದ್ದಾರೆ.
ಕೆಪಿಎಸ್‌ಸಿ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರದ ಯೋಗ್ಯತೆಗೆ ಒಂದು ಪರೀಕ್ಷೆಯನ್ನೂ ನೆಟ್ಟಗೆ ನಡೆಸಲು ಆಗಲ್ಲ.ಮಾತೆತ್ತಿದರೆ ಪಹಲ್ಗಾಮ್ ಭದ್ರತೆ ವೈಫಲ್ಯ, ಅಂತರಾಷ್ಟ್ರೀಯ ವೈಫಲ್ಯ ಅಂತಾರೆ.ಇವರ ಅವಧಿಯಲ್ಲಿ ಬರೀ ಸೋರಿಕೆ, ಸೋರಿಕೆ. ಒಂದು ಪರೀಕ್ಷೆಯನ್ನೂ ಪಾರದರ್ಶಕವಾಗಿ ನಡೆಸಲು ಆಗಲ್ಲ ಇವರಿಗೆ ಎಂದಿದ್ದಾರೆ.