ಮನೆ Latest News ಶಸ್ತ್ರ ಯುದ್ಧ ಇದ್ದಾಗ ಹಿಡಿಯಬೇಕು ಸುಮ್ಮ ಸುಮ್ಮನೆ ಹಿಡಿಯಬಾರದು: ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ

ಶಸ್ತ್ರ ಯುದ್ಧ ಇದ್ದಾಗ ಹಿಡಿಯಬೇಕು ಸುಮ್ಮ ಸುಮ್ಮನೆ ಹಿಡಿಯಬಾರದು: ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ

0

ಬೆಂಗಳೂರು; ಶಸ್ತ್ರ ಯುದ್ಧ ಇದ್ದಾಗ ಹಿಡಿಯಬೇಕು ಸುಮ್ಮ ಸುಮ್ಮನೆ ಹಿಡಿಯಬಾರದು ಎಂದು ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಾನು ದೆಹಲಿ ಹೋಗಿದ್ದೆ. ವಿಶೇಷವಾಗಿ ರಾಷ್ಟ್ರಪತಿಗಳ ಭೇಟಿಗಾಗಿ ನಾನು ಹೋಗಿದ್ದೆ. ವರಿಷ್ಟರ ಭೇಟಿ ಸಂದರ್ಭದಲ್ಲಿ ನಾವೂ ಕೂಡ ಭೇಟಿ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ಕೂಡ ಪರ್ಸನಲ್ ಆಗಿ ಭೇಟಿ ಮಾಡಿದ್ದಾರೆ. ದೆಹಲಿಗೆ ಹೋದ್ರೆ ಆ್ಯಕ್ಟಿವ್ ಆಗೋದು ಸ್ವಾಭಾವಿಕ. ಐದಾರು ಮಂತ್ರಿಗಳು ಶಾಸಕರು ಭೇಟಿಯಾಗಿ ಹೈಕಮಾಂಡ್ ಜೊತೆಗೆ ಜನರಲ್ ಆಗಿ ಭೇಟಿಯಾಗಿದ್ದೇವೆ. ಬೇರೆ ಯಾವುದೋ ಸ್ಪೆಸಿಫಿಕ್ ಆಗಿ ಮಾತನಾಡಿಲ್ಲ. ಸ್ವಾಭಾವಿಕ ಚರ್ಚೆಗಳಾಗಿವೆ ಹೊರತು ಬೇರೆನಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವೈಯಕ್ತಿಕವಾಗಿ ಶಸ್ತ್ರ ತ್ಯಾಗ ಏನಿಲ್ಲ. ಶಸ್ತ್ರ ಯುದ್ದ ಇದ್ದಾಗ ಹಿಡಿಯಬೇಕು ಸುಮ್ಮ ಸುಮ್ಮನೆ ಹಿಡಿಯಬಾರದು.ಶಾಸಕರ ಅಸಮಾಧಾನ ವಿಚಾರ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ತರಹ ಇದೆ. ಕೇವಲ ಅನುದಾನ, ಕೇವಲ ಟ್ರಾನ್ಸಫರ್ ಅಸಮಾಧಾನ ಅಂತಲ್ಲ. ರಾಜೂ ಕಾಗೆಯವರ ಜೊತೆಗೆ ಸಿಎಂ ಸಿದ್ದರಾಮಯ್ಯ ಮಾತಾಡಿದ್ದಾರೆ. ಹೈಕಮಾಂಡ್ ಕೂಡ ಇದೆಲ್ಲವನ್ನು ಸಿಎಂಗೆ ಹೇಳಿದೆ. ನಮ್ಮೆಲ್ಲರ ಎದುರೇ ಸರಿಪಡಿಸಿ ಅಂತ ಹೈಕಮಾಂಡ್ ನಾಯಕರು ಹೇಳಿದರು. ರಾಜೂ ಕಾಗೆ ನೀರಾವರಿ ಯೋಜನೆಗಳ ವಿಚಾರವಾಗಿ ಬಹಳಷ್ಟು ಬಾರಿ ಹೇಳಿದ್ದಾರೆ. ಸಿಎಂ ಗಮನಕ್ಕೂ ನಾವು ನೀರಾವರಿ ಅನುದಾನ ವಿಚಾರವಾಗಿ ಮಾಹಿತಿ ನೀಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ ಕೆ ಶಿವಕುಮಾರ್  ಬಳಿ ಮಾತನಾಡಬಹುದು ಎಂದಿದ್ದಾರೆ. ನೀರಾವರಿ ಇಲಾಖೆಯಲ್ಲಿ ೨೬ ಸಾವಿರ ಕೋಟಿ ಅನುದಾನವಿದೆ. ಸಿಎಂ ಹಾಗೂ ಡಿಸಿಎಂ ಕುಳಿತು ಶಾಸಕರ ಸಮಸ್ಯೆ ಸರಿಪಡಿಸಬೇಕು ಸರಿಪಡಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

ನವೆಂಬರ್ ನಲ್ಲಿ ಮಹತ್ವದ ಬದಲಾವಣೆ ಆಗುತ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಭಾರೀ ಬದಲಾವಣೆ ಏನೂ ಇಲ್ಲ, ಆ ತರ ಏನೂ ಅನಿಸುತ್ತಿಲ್ಲ. ಭಾರೀ ಬದಲಾವಣೆ ಇಲ್ಲ, ಸ್ವಲ್ಪ ಬದಲಾವಣೆ ಆಗಬಹುದು ಎಂದು ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.