ಮನೆ Blog ಪೊಲೀಸ್ ಇಲಾಖೆಯಲ್ಲಿ ಹಣ ಪಡೆಯುವುದನ್ನ ಕಠಿಣವಾಗಿ ನೋಡ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

ಪೊಲೀಸ್ ಇಲಾಖೆಯಲ್ಲಿ ಹಣ ಪಡೆಯುವುದನ್ನ ಕಠಿಣವಾಗಿ ನೋಡ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಪೊಲೀಸ್ ಇಲಾಖೆಯಲ್ಲಿ ಹಣ ಪಡೆಯುವುದನ್ನ ಕಠಿಣವಾಗಿ ನೋಡ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಳ್ಳಂದೂರು ಪಿಎಸ್‌ಐ ಅಮಾನತು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪೊಲೀಸ್ ಇಲಾಖೆಯಲ್ಲಿ ಹಣ ಪಡೆಯುವುದನ್ನ ಕಠಿಣವಾಗಿ ನೋಡ್ತೇವೆ. ಒಂದು ಸಾವಿರ ಆಗಲಿ, ಐದುಸಾವಿರ ಆಗಲಿ, ಐನೂರು ರೂಪಾಯಿ ಆಗಲಿ ಹಣ ಪಡೆಯುವುದನ್ನ ಉತ್ತೇಜಿಸಲ್ಲ. ಹಣ ಪಡೆದದ್ದು ಗೊತ್ತಾದ ಕೂಡಲೇ ಸಸ್ಪೆಂಡ್ ಮಾಡ್ತೇವೆ,‌ಬಳಿಕ ಮುಂದಿನ ಕ್ರಮ ಕೈಗೊಳ್ತೇವೆ. ಅದು ನಿಜ ಅಂತ ಗೊತ್ತಾದ ಮೇಲೆ‌ ಸೇವೆಯಿಂದಲೇ ವಜಾ ಮಾಡ್ತೇವೆ. ಈ ಬಗ್ಗೆ ಕಠಿಣ ಸೂಚನೆಯನ್ನ ಹಿರಿಯ ಅಧಿಕಾರಿಗಳಿಗೆ ನೀಡಿದ್ದೇವೆ. ಸಿಎಂ ಕೂಡ ಹೇಳಿದ್ದಾರೆ, ನಾನು  ಕೂಡ ಹೇಳಿದ್ದೇನೆ. ಡಿಜಿಗೂ ನಾವು ಪ್ರತಿ ಮೀಟಿಂಗ್‌ನಲ್ಲಿ ಹೇಳ್ತಿದ್ದೇವೆ ಎಂದಿದ್ದಾರೆ.

ಒಳ ಮೀಸಲಾತಿ ಆದೇಶ ರದ್ದು ಮಾಡುವ ದುರುದ್ದೇಶ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿದ ಅವರು ಸಂಸದ ಕಾರಜೋಳಗೆ ಡಾ.ಜಿ‌.ಪರಮೇಶ್ವರ ತಿರುಗೇಟು ಕೊಟ್ಟಿದ್ದಾರೆ. ಅವರು ಒಳ ಮೀಸಲಾತಿ ಬಗ್ಗೆ ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅವರ ಕಾಲದಲ್ಲಿ ಗೊಂದಲ ಮಾಡಿದ್ರು, ನಾವು ನಿವಾರಣೆ ಮಾಡಿದ್ದೇವೆ. ABC ಪ್ರಕಾರ ಸುಗ್ರಿವಾಜ್ಞೆ ತರಬೇಕು ಅಂತ ತೀರ್ಮಾನ ಮಾಡಿದ್ವಿ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಬೇಡ ಬಿಲ್ ತರಲು ತೀರ್ಮಾನ ಆಗಿದೆ. ಚಳಿಗಾಲದ ಅಧಿವೇಶನ ಬರ್ತಿದೆ, ಅಲ್ಲಿ ಬಿಲ್ ತರಲು ಚರ್ಚೆ ಮಾಡಿದ್ದೇವೆ. ಕಾಯ್ದೆ ಮೂಲಕ ಕಾನೂನಿನ ಶಕ್ತಿಕೊಡಬೇಕೆಂದು ತೀರ್ಮಾನ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

ನನಗೆ ಯಾವ ಮಿಡ್‌ನೈಟ್ ಮೀಟಿಂಗ್ ಗೊತ್ತಿಲ್ಲ. ನಾನು ಯಾರನ್ನೂ ಮೀಟ್ ಮಾಡಿಲ್ಲ. ನಾನು ಶಾಂಗ್ರಿಲಾ ಹೊಟೇಲ್‌ಗೆ ಹೋಗಿದ್ದು ಫೆಡರೇಶನ್‌ ಆಫ್‌ ಬ್ಯಾಸ್ಕೆಟ್‌‌ಬಾಲ್ ವಿಚಾರವಾಗಿ. ಅದು ಬಿಟ್ರೆ ನನಗೆ ಯಾವ ಮಿಡ್‌ನೈಟ್ ಮೀಟಿಂಗೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.