ಬೆಂಗಳೂರು: ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೆ ಚಾಚೂ ತಪ್ಪದೇ ಎಲ್ಲ ಬೆಂಬಲ ಇದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಣಕು ಕಾರ್ಯಾಚರಣೆಗೆ ಸೂಚನೆ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೆ ಚಾಚೂ ತಪ್ಪದೇ ಎಲ್ಲ ಬೆಂಬಲ ಇದೆ.೧೪೦ ಕೋಟಿ ಜನರ ಬೆಂಬಲ ಇದೆ. ನಮ್ಮ ಜನರ ರಕ್ಷಣೆ ದೇಶದ ರಕ್ಷಣೆ ಗೆ ಎಲ್ಲರ ಬೆಂಬಲ ಇದೆ. ದೇಶ ಪ್ರಥಮ, ಪಕ್ಷ ನಂತರ . ಯಾವುದೇ ಕ್ರಮಗಳನ್ನು ನಿರ್ಣಯ ಸರ್ಕಾರ ತೆಗೆದುಕೊಂಡರೂ ಅದಕ್ಕೆ ಬೆಂಬಲವಿದೆ. ಇದನ್ನು ಎಐಸಿಸಿ ಅಧ್ಯಕ್ಷರು ರಾಹುಲ್ ಗಾಂಧಿ ನಮ್ಮ ಸಿಎಂ ಸಚಿವರು ಎಲ್ಲರೂ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ಮಾರ್ಗಸೂಚಿ ಡೈರೆಕ್ಷನ್ ಕೂಡ ಫಾಲೋ ಮಾಡುತ್ತೇವೆ. ನಮ್ಮ ಜನರ ಸುರಕ್ಷತೆ ಮುಖ್ಯ ಎಂದಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕತೆಗೆ ಬೆಂಬಲ ನೀಡುತ್ತಿರುವುದು ಜಗಜ್ಜಾಹೀರಾಗಿದೆ. ಹಿಂದೆ ಇಂದಿರಾಗಾಂಧಿ ಇವರಿಗೆ ಹೇಗೆ ಪಾಠ ಕಲಿಸಿದೆಯೋ ಹಾಗೆಯೇ ಪಾಠ ಕಲಿಸುವ ಕೆಲಸ ಆಗಬೇಕು. ಆವಾಗಿನ ಕಾಲಕ್ಕೆ ಈಗಿನ ಕಾಲಕ್ಕೆ ಬಹಳ ವ್ಯತ್ಯಾಸ ಇದೆ. ನಿಶ್ಚಿತವಾಗಿ ನಮ್ಮ ಸೆಕ್ಯುರಿಟಿ ಸ್ಟ್ರಾಂಗ್ ಆಗಿದೆ. ಇಡೀ ದೇಶ ಒಂದಾಗಬೇಕು, ಚುನಾವಣೆ ಪಕ್ಷ ಅವೆಲ್ಲ ಬೇರೆ.ದೇಶದ ರಕ್ಷಣೆ ಭದ್ರತೆಗೆ ಎಲ್ಲ ರೀತಿ ತ್ಯಾಗ ಮಾಡಬೇಕು. ಯಾವುದೇ ತಗಾದೆ ತಗೆಯದೇ ನಾವು ಬೆಂಬಲ ನೀಡುತ್ತೇವೆ ಎಂದಿದ್ದಾರೆ.
ಸುಹಾಶ್ ಶೆಟ್ಟಿಯನ್ನ ಬಿಜೆಪಿಗರು ವಿಜೃಂಭಿಸುತ್ತಿರುವ ವಿಚಾರದ ಬಗ್ಗೆ ಮಾತನಾಡಿ ಅವರು ಎಲ್ಲವನ್ನ ಒಯ್ದು ಹಿಂದುತ್ವದ ಜಾತಿಗೆ ಹಚ್ಚುವ ಕೆಲಸ ಆಗಬಾರದು. ಕೆಲವು ಸಾರಿ ಕ್ರಿಮಿನಲ್ ಗಳಿರುತ್ತಾರೆ. ರೌಡಿ ಶೀಟರ್ಸ್ ಇರುತ್ತಾರೆ. ನಮ್ಮ ಜಿಲ್ಲೆಯಲ್ಲಿ ಭೀಮಾ ತೀರದಲ್ಲಿ ಬೇಕಾದಷ್ಟು ಮರ್ಡರ್ ಗಳಾಗುತ್ತವೆ. ಅವೆಲ್ಲವನ್ನೂ ನಾವು ಒಯ್ದು ಒಂದು ಪಕ್ಷಕ್ಕೆ ಸೇರಿಸಲು ಆಗುತ್ತದಾ?. ಸುಹಾಸ್ ಶೆಟ್ಟಿ ಮೇಲೆ ಕೇಸ್ ಗಳಿತ್ತು. ತಾವು ತಾವು ಬಡಿದಾಡಿಕೊಂಡರೆ ಅವರು ಮುಸಲ್ಮಾನರೇ ಇರಬಹುದು, ಹಿಂದೂಗಳೇ ಇರಬಹುದು. ಮೊನ್ನೆ ಬಿಜಾಪುರದಲ್ಲಿ ಶೂಟ್ ಔಟ್ ಆಗಲಿಲ್ವಾ? ಅದನ್ನು ಒಯ್ದು ಹಿಂದೂ ಮುಸ್ಲಿಂ ಅಂತ ಹಚ್ಚೋದು ಸರಿಯಲ್ಲ ಎಂದಿದ್ದಾರೆ. Criminals are Criminals. ಅವರು ಯಾವುದೇ ಜಾತಿ ಇರಲಿ, ಯಾವುದೇ ಧರ್ಮ ಇರಲಿ, ಯಾವುದೇ ಪಕ್ಷಕ್ಕೆ ಅಂಟಿಕೊಂಡಿರಲಿ. ಅವರು ಕ್ರಿಮಿನಲ್ಸ್, ಕ್ರಿಮಿನಲ್ ಅನ್ನೋದೇ ಒಂದು ಜಾತಿ ಅದು ಹಿಂದೂನೂ ಅಲ್ಲ, ಮುಸ್ಲೀಮೂ ಅಲ್ಲ, ಬೌದ್ದರೂ ಅಲ್ಲ ಸಿಖ್ಖರೂ ಅಲ್ಲ. ಕ್ರಿಮಿನಲ್ ಎನ್ನೋದೇ ಒಂದು ಬೇರೆ ಜಾತಿ ಅದು. ರೌಡಿ ಶೀಟರ್ ನಾ ವಿಜೃಂಭಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಮಂಗಳೂರು ಭಾಗದ ಜನರಿಗೆ ಗೊತ್ತಿಲ್ವಾ ಇದೆಲ್ಲಾ? ಗೊತ್ತಿದೆ. ಇವನು ರೌಡಿ ಶೀಟರ್, ಕ್ರಿಮಿನಲ್ ಹಿನ್ನೆಲೆ ಇದೆ ಎಂಬುದು ಮಂಗಳೂರು ಭಾಗದ ಜನರಿಗೆ ಗೊತ್ತಿದೆ ಎಂದಿದ್ದಾರೆ.