ಬೆಂಗಳೂರು; ನಮ್ಮಿಂದ ಮೈತ್ರಿಯಲ್ಲಿ ಯಾವುದೇ ಗೊಂದಲ ಆಗೋದಕ್ಕೆ ಅವಕಾಶ ಕೊಡಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮುಂಬೈ ಫಲಿತಾಂಶ ಜಿಬಿಎ ಚುನಾವಣೆಯಲ್ಲಿ ಪ್ರಭಾವ ಬೀರುತ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಪಕ್ಷವು ಸಿದ್ದತೆ ಮಾಡಬೇಕು. ಜಿಬಿಎ ಜಿಲ್ಲಾ , ತಾಲ್ಲೂಕು ಪಂಚಾಯತ ಚುನಾವಣೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮಲ್ಲಿ ಮೈತ್ರಿಯನ್ನ ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ನಮ್ಮಿಂದ ಮೈತ್ರಿಯಲ್ಲಿ ಯಾವುದೇ ಗೊಂದಲ ಆಗೊದಕ್ಕೆ ಅವಕಾಶ ಕೊಡೊಲ್ಲ.ಮುಂದಿನ ದಿನಗಳಲ್ಲಿ ಯಾವ ತರ ರಾಜಕೀಯ ಬೆಳವಣಿಗೆ, ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಸ್ಥಳೀಯ ಮಟ್ಟದ ನಾಯಕರ ತೀರ್ಮಾನ ಏನಿದೆ. ಎಲ್ಲವನ್ನ ನೋಡಿಕೊಂಡು ತೀರ್ಮಾನ ಮಾಡಬೇಕು. ಇಲ್ಲಿ ನಮ್ಮ ಪಕ್ಷದ ಉದ್ದೇಶ , ಕಾಂಗ್ರೆಸ್ ದುರಾಢಳಿವನ್ನ ಹೋಗಿಸಬೇಕು. ಅದಕ್ಕೆ ನಾವು ತಯಾರಿದ್ದೇವೆ , ಹಾಗಾಗಿ ಎಲ್ಲಾ ರೀತಿಯಲ್ಲಿ ಮುಕ್ತವಾಗಿದ್ದೇವೆ. ಯಾವಾಗ ಏನ್ ತಿರ್ಮಾನ ಆಗಬೇಕು. ರಾಜ್ಯದಲ್ಲಿ ಏನ್ ತೀರ್ಮಾನ ಆಗಬೇಕು. ಅದ್ರಲ್ಲು ಬೆಂಗಳೂರಿನ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ.ಅಭಿವೃದ್ಧಿ ಹೆಸರಲ್ಲಿ ಬರಿ ಲೂಟಿ ಆಗ್ತಿದೆ. ಕಸವಿಲೇವಾರಿಯಿಂದ, ಗುಂಡಿ ಮುಚ್ಚೋದು ಯಾವ ಯಾವ ತರ ಯಾವ ಪಕ್ಷಗಳು ಏನೇನು ಕೊಡುಗೆ ಕೊಟ್ಟಿದೆ. ಆ ವಿಷಯಗಳನ್ನ ಇಟ್ಟುಕೊಂಡು ಚುನಾವಣೆಗೆ ಹೋಗ್ತೀವಿ.ನೊಡೊಣಾ ಏನ್ ಏನ್ ಆಗುತ್ತೆ ಎಂದು ಅವರು ಹೇಳಿದ್ದಾರೆ,.











