ಬೆಂಗಳೂರು; ಜಾತಿ ಗಣತಿ ವಿಚಾರವಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಾತಿ ಗಣತಿ ವಿಚಾರವಾಗಿ ಕ್ಯಾಬಿನೆಟ್‌ನಲ್ಲಿ ಇಂದು ವರದಿ ಮಂಡನೆಯಾಗಿದೆ.ಅದನ್ನ ಎಲ್ಲರೂ ಅಧ್ಯಯನ ಮಾಡಿ ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬರುತ್ತೆ.ಯಾರೂ ವಿರೋಧ ಮಾಡಿಲ್ಲ.ಅದರಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ.7-8 ಸಂಪುಟ ಇದೆ ಅರ್ಧಗಂಟೆಯಲ್ಲಿ ಹೇಗೆ ನೋಡೊಕಾಗುತ್ತೆ.ಒಂದು ವಾರ ಟೈಮ್ ಕೊಟ್ಟು ಎಲ್ಲಾ ಮಂತ್ರಿಗಳಿಗೂ ನೋಡ್ಕೊಂಡು ಬನ್ನಿ ಎಂದಿದ್ದಾರೆ.ಅಧ್ಯಯನಕ್ಕಾಗಿ ಸಂಪೂರ್ಣ ವರದಿಯನ್ನ ಮಂತ್ರಿಗಳಿಗೆ ನೀಡಿ ಎಂದು ಸಿಎಂ ಶಿವರಾಜ್ ತಂಗಡಿಗಿ ಅವರಿಗೆ ಹೇಳಿದ್ದಾರೆ.ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ತೇವೆ ಎಂದಿದ್ದಾರೆ.
ಗುತ್ತಿಗೆದಾರರ ಸಂಘದ ಆರೋಪ ವಿಚಾರದ ವಿಚಾರವಾಗಿ ಮಾತನಾಡಿದ ಅವರು ಏನಾದರೂ ಇದ್ದರೆ ಕೊಡಲಿ.ದಾಖಲೆ ಕೊಟ್ಟರೆ ರಾಜೀನಾಮೆಗೂ ಸಿದ್ದ ಎಂದು ಬೋಸ್ ರಾಜು ಹೇಳಿದ್ದಾರೆ.ಬೇರೆ ಮಂತ್ರಿಗಳು ಕೂಡ ಇದನ್ನೇ ಹೇಳಿದ್ದಾರೆ.ಗುತ್ತಿಗೆದಾರರು ಮಾಡ್ತಿರೊದು ಸರಿಯಿಲ್ಲ ಎನ್ನೋದು ನನ್ನ ಅಭಿಪ್ರಾಯ .ಗುತ್ತಿಗೆದಾರರಿಗೆ ಗೊತ್ತಿದೆ ಹಿಂದಿನ ಸರ್ಕಾರದಲ್ಲಿ ಏನಾಗಿದೆ ಎನ್ನೋದು. ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ಅವರೇ ಕೊಟ್ಟಿರೋ ದಾಖಲೆ.ಅವರು ಕೊಟ್ಟಿರೊದನ್ನ ನಾನು ಒಪ್ಪಿದ್ದೇವಲ್ಲ.ಜಸ್ಟೀಸ್ ನಾಗಮೋಹನ್ ದಾಸ್ ವರದಿ ಬಂದಿದೆ.ನಿಯಮ ಗಾಳಿಗೆ ದೂರಿ ಕಾಂಟ್ಯಾಕ್ಟ್ ಕೊಟ್ಟಿದ್ದಾರೆ ಎಂದಿದೆ.ನೂರು% ಸರ್ಕಾರ ಎನ್ನೋದು ಗೊತ್ತಾಗಿದೆ.ಇದಕ್ಕೆ ಬಿಜೆಪಿ ಏನ್ ಹೇಳುತ್ತೆ.ಆಡಳಿತ ಸರಿಯಾಗಿ ಕೊಟ್ಟಿಲ್ಲದಿದ್ದಕ್ಕೆ ಅವರು ವಿರೋಧ ಪಕ್ಷದಲ್ಲಿರೊದು. ನಾವೇನಾದರೂ ಹಾಗೆ ಮಾಡಿದ್ರೆ ನಾವು ಅನುಭವಿಸ್ತೇವೆ.ಉಪ್ಪು ತಿಂದ ಮೇಲೆ ನೀರು ಕೂಡಿಯಲೇ ಬೇಕು. ಇವರ ಭ್ರಷ್ಟಾಚಾರ ಕೋವಿಡ್ ವೇಳೆ ಗೊತ್ತಾಗಿದೆ. ಯಡಿಯೂರಪ್ಪ ಮೇಲೆ ಕೇಸ್ ಹಾಕಬೇಕು.ಶ್ರೀರಾಮುಲು ಮೇಲೆ ಎಫ್ಐಆರ್ ಹಾಕಬೇಕೆಂದು ವರದಿ ಬಂದಿಲ್ವಾ.ನಿಯಮ ಉಲ್ಲಂಘನೆ ಆಗಿದೆ ಎಂದೇ ವರದಿ ಬಂದಿದೆ ಎಂದಿದ್ದಾರೆ.
೪೦% ಕಮಿಷನ್ ಆರೋಪ ಪರಿಶೀಲನೆಗೆ ಎಸ್ಐಟಿ ರಚನೆಗೆ ನಿರ್ಧಾರ; ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆ
ಬೆಂಗಳೂರು: ೪೦% ಕಮಿಷನ್ ಆರೋಪ ಪರಿಶೀಲನೆಗೆ ಎಸ್ಐಟಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
೪೦% ಕಮಿಷನ್ ಆರೋಪ ಪರಿಶೀಲನೆಗೆ ಎಸ್ಐಟಿ ರಚನೆಗೆ ನಿರ್ಧಾರ ಮಾಡಿದ ಬಗ್ಗೆ ಮಾತನಾಡಿದ ಅವರು ೨೧ ವಿಷಯಗಳ ಮೇಲೆ ನಿರ್ಣಯ ಕೈಗೊಂಡಿದ್ದೇವೆ. ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ಎಚ್ ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ಮಾಡಿತ್ತು. ವಿಚಾರಣಾ ವರದಿಯನ್ನು ಸಲ್ಲಿಸಿದ್ದಾರೆ. ವರದಿಯನ್ನು ಸಂಪುಟಕ್ಕೆ ಮಂಡಿಸಲಾಯಿತು. ಕೆಲವು ವಿವರಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಯಿತು.ಇನ್ನಷ್ಟು ವಿವರ ಚರ್ಚೆಯ ಅಗತ್ಯವಿದೆ. ವಿಶೇಷ ಶಿಫಾರಸುಗಳನ್ನು ನೀಡಿದೆ. ದೂರುಗಳ ಮಾಹಿತಿ ಕಲೆ ಹಾಕಿ ವರದಿಯನ್ನು ನೀಡಲಾಗಿದೆ. ೩ ಲಕ್ಷ ಕಾಮಗಾರಿಗಳಲ್ಲಿ ೧೭೨೯ ಕಾಮಗಾರಿಗಳ ಬಗ್ಗೆ ವಿವರವಾದ ಆಪಾದನೆಗಳಿವೆ ಎಂದರು.
ಯೋಜನೆ, ಹಣ ಬಿಡುಗಡೆ, ಎಲ್ಓಸಿ ಬಿಡುಗಡೆ ಸರಿಯಾದ ರೀತಿಯಲ್ಲಿ ಇಲ್ಲ ಎಂಬುದು ವರದಿಯಲ್ಲಿ ಇದೆ. ಸಚಿವ ಸಂಪುಟ ಗಂಭೀರವಾಗಿ ಪರಿಗಣಿಸಿ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಚರ್ಚಿಸಿದೆ. ಅನುದಾನಕ್ಕಿಂತ ಹೆಚ್ಚು ಬಿಲ್ ಆಗಿದೆ, ಕಾಮಗಾರಿ ಗಳ ಬಗ್ಗೆಯೇ ಕೆಲವುಕಡೆ ಸಂಶಯಗಳಿವೆ. ಕೆಲವು ಕಡೆ ಟೆಂಡರ್ ಹಂಚಿಕೆ ವೇಳೆಯೇ ಮಧ್ಯವರ್ತಿಗಳ ಕೆಲಸ ಆಗಿದೆ. ಗಂಭೀರವಾದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಎಸ್ಐಟಿ ಯನ್ನು ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ.ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಎಸ್ಐಟಿಗೆ ಸೂಚನೆ ನೀಡಲಾಗಿದೆ ಎಂದರು.
ಬಿಜೆಪಿಯ ಅವಧಿಯ 40% ಕಮಿಷನ್ ವಿಚಾರದ ಬಗ್ಗೆ ಸಂಪುಟ ಸಭೆ ನಾಗಮೋಹನ್ ದಾಸ್ ವರದಿ ಅಂಗೀಕರಿಸಿದೆ. ನಾಗಮೋಹನ್ ದಾಸ್ ಸಮಿತಿ ವರದಿ ಆಧರಿಸಿ ಎಸ್ ಐ ಟಿ ರಚನೆಗೆ ನಿರ್ಧಾರ ಮಾಡಲಾಗಿದೆ. ಗುತ್ತಿಗೆದಾರರ ಸಂಘದ ಆರೋಪ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸಂಪುಟ ನಿರ್ಧಾರ ಮಾಡಲಾಗಿದೆ. NICE ಬಗ್ಗೆ ಇವತ್ತು ಕ್ಯಾಬಿನೆಟ್ ನಲ್ಲಿ ವಿಷಯ ಪ್ರಸ್ತಾಪ ಆಯಿತು. ನೈಸ್ ರಸ್ತೆ ವಿಚಾರಕ್ಕೆ ಸುಪ್ರೀಂ ಕೋರ್ಟ್ ಹೈಕೋರ್ಟ್ ನಲ್ಲಿ ವಿಚಾರಣೆ ಆಗಿದೆ. ರಸ್ತೆ ನಿರ್ಮಾಣ ಮುಂದೆ ಆಗಬೇಕಾ ಬೇಡ್ವಾ ಎಂಬ ಬಗ್ಗೆ ಸಂಪೂರ್ಣ ಚರ್ಚೆ ಒಂದು ಸಭೆಯಲ್ಲಿ ಸಾಧ್ಯವಿಲ್ಲ. ಕಾನೂನಾತ್ಮಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಿ ಮುಂದಿನ ತೀರ್ಮಾನ ಮಾಡ್ತೇವೆ ಎಂದರು.
೧೬೯೯ ಎಕರೆ ಯನ್ನು ನೈಸ್ ಸಂಸ್ಥೆಯವರು ಬೇರೆಯವರಿಗೆ ಶುದ್ದ ಕ್ರಯ ಮಾಡಿಕೊಡಲು ಮುಂದಾಗಿದ್ದಾರೆ. ಇದನ್ನೂ ಕೂಡ ಕ್ಯಾಬಿನೆಟ್ ಸಬ್ ಕಮಿಟಿ ನಿರ್ಧಾರ ಮಾಡಲಿದೆ. ಕ್ಯಾಬಿನೆಟ್ ಸಬ್ ಕಮಿಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ. ಜಾತಿಗಣತಿ ವರದಿ ಮಂಡನೆ ಆಗಿದೆ.ಹಲವು ಸಚಿವರು ಏನೇನು ಶಿಫಾರಸು ಇದೆ ಅಂತ ನೋಡಬೇಕು ಅಂತ ಹೇಳಿದ್ದಾರೆ.