ವಿಜಯಪುರ: ಮುಳುಗಡೆ ಜಮೀನಿಗೆ ದರ ನಿಗದಿ ಮಾಡುತ್ತೇವೆ, ರೈತರು ಕೋರ್ಟ್ ಗೆ ಹೋಗ್ಬೇಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ಇಂದು ಜಲಸಂಪನ್ಮೂಲ ಇಲಾಖೆ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷ್ಣೆಯ ಒಡಲಿಗೆ ಗಂಗಾಪೂಜೆ ನೆರವೇರಿಸಿ, ಬಳಿಕ ಬಾಗಿನ ಅರ್ಪಿಸಿ ಮಾತನಾಡಿದ ಅವರು ಜಲಾಶಯ ಭರ್ತಿಯಾಗಿದೆ. ಕಳೆದ ಬಾರಿ ಇಲ್ಲಿ ಬಂದು ಬಾಗೀನ ಅರ್ಪಿಸಿದ್ದೇವೆ. ರಾಜ್ಯದಲ್ಲಿ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಕಾರಣ ಜಲಾಶಯ ಭರ್ತಿಯಾಗಿದೆ. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದೆ. ಕಬಿನಿ ಕಾವೇರಿ ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದಕ್ಕೆ ರೈತರು ಖುಷಿಯಾಗಿದ್ದೇವೆ. ರೈತರು ಖುಷಿಯಾಗಿದ್ದರೆ ನಾವೂ ಖುಷಿಯಾಗಿರುತ್ತೇವೆ ಎಂದರು.
ಯುಕೆಪಿ ಯೋಜನೆ ಕುರಿತು ಡಿಕೆಶಿ ಎಲ್ಲ ವಿಚಾರ ಹೇಳಿದ್ದಾರೆ. ನಮ್ಮ ರೈತರ ಹೋರಾಟಗಾರರ ಸಭೆ ಬೆಳಗಾವಿಯಲ್ಲಿ ಸಭೆ ಮಾಡಿದ್ದೇವೆ. ಕನ್ಸೆಂಟ್ ಅವಾರ್ಡ್ ಮಾಡಬೇಕೆಂದು ರೈತರು ಮನವಿ ಮಾಡಿದ್ದಾರೆ. ಅದಕ್ಕೆ ನಾವೂ ಒಪ್ಪಿದ್ದೇವೆ.ಡಿಕೆಶಿ ಈ ಭಾಗದ ಸಚಿವರು ಶಾಸಕರ ಸಭೆ ಮಾಡಿದ್ದಾರೆ. ಎಲ್ಲ ಒಂದು ಹಂತಕ್ಕೆ ಬಂದಿದೆ. ಮುಂದಿನ ವಾರದಲ್ಲಿ ನಾವೆಲ್ಲ ಸಭೆ ಮಾಡಿ ಸೂಕ್ತ ದರ ನಿಗದಿ ಮಾಡುತ್ತೇವೆ. ಮುಳುಗಡೆ ಜಮೀನಿಗೆ ದರ ನಿಗದಿ ಮಾಡುತ್ತೇವೆ. ರೈತರು ಯಾರೂ ಕೋರ್ಟ್ ಗೆ ಹೋಗಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ.
ಕೋರ್ಟ್ ಗೆ ಹೋಗುವ ಕಾರಣ ವಿಳಂಬವಾಗುತ್ತದೆ. ಕನ್ಸಂಟ್ ಅವಾರ್ಡ್ ದಿಂದ ಎಲ್ಲರೂ ಒಪ್ಪಿಕೊಂಡು ಮಾಡಲಾಗುತ್ತದೆ. ಮುಂದಿನ ವಾರದಲ್ಲಿ ದರ ನಿಗದಿ ಮಾಡುತ್ತೇವೆ. ಯುಕೆಪಿ ಮೂರನೇ ಹಂತ 524 ಮೀಟರ್ ಎತ್ತರ ಮಾಡುವ ಕಾರಣ 130 ಟಿಎಂಸಿ ನೀರು ಬಳಕೆಗೆ ಸಿಗುತ್ತದೆ. ಯುಕೆಪಿ ಮೂರನೇ ಹಂತರ ಯೋಜನೆ ಗೆಜೆಟ್ ನೊಟೀಫೀಕೇಷನ್ ಆಗಿಲ್ಲ.ಆದರೆ ಎಲ್ಲ ಕೆಲಸ ಕಾಮಗಾರಿಗಳಿಗೆ ಅನಕೂಲವಾಗುತ್ತದೆ. ಒಮ್ಮೆ ಪಿಎಂ ಹಾಗೂ ಎರಡು ಬಾರಿ ಕೇಂದ್ರಜಲ ಸಂಪನ್ಮೂಲ ಸಚಿವರು ಭೇಟಿಯಾಗಿದ್ದೇನೆ ಎಂದರು.











