ಬೆಂಗಳೂರು: ನಾಳೆ ರಾಜ್ಯಾದ್ಯಂತ ನಾವು ಹೋರಾಟ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ, ಸಿಎಂ ಸಿದ್ದರಾಮಯ್ಯಗೆ ನಾಡಿನ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ಬಗ್ಗೆ ತಾತ್ಸಾರ, ಸಿದ್ದರಾಮಯ್ಯ ಸಿಎಂ ಆದಾಗಿನಿಂದ ರೈತರ ಒಳತಿಗೆ ಆಗುವ ಯೋಜನೆ, ನಿರ್ಧಾರ ತೆಗೆದುಕೊಂಡಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾಪು ದಾಸ್ತಾನು 1000 ಕೋಟಿ ಅನುದಾನ ನೀಡ್ತಿತ್ತು. ಈಗ ಬಫರ್ ಸ್ಟಾಕ್ ಕಡಿತಗೊಳಿಸಿ 600 ಕೋಟಿಗೆ ಇಳಿಸಿ ಕೇವಲ 400 ಕೋಟಿ ಕೊಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಒಂದೇ ಸಮಯಕ್ಕೆ ಭಿತ್ತನೆ ಮಾಡುವುದಿಲ್ಲ. ಇದರ ಅಂದಾಜು ಕೃಷಿ ಸಚಿವರಿಗೆ ಇರಬೇಕಿತ್ತು. ಅಗತ್ಯಕ್ಕೆ ಹೆಚ್ಚು ಯೂರಿಯಾ ಬೇಕಂದ್ರೆ ಈಗ ಪತ್ರ ಬರೆಯುವುದಲ್ಲ. ಮುಂಚಿತವಾಗಿಯೇ ಪತ್ರದ ಮೂಲಕ ಕೇಂದ್ರಕ್ಕೆ ಮನವಿ ಮಾಡಬೇಕಿತ್ತು. ರೈತರಿಗೆ ಗೊಬ್ಬರದ ಬಗ್ಗೆ ಮಾಹಿತಿ ನೀಡಬೇಕು. ಅದಕ್ಕೂ ಕೇಂದ್ರ, ಮೋದಿಯವರೇ ಬರಬೇಕಾ?. ರಾಜ್ಯ ಸರ್ಕಾರ, ಸಿಎಂ, ಕೃಷಿ ಸಚಿವರು ತಮ್ಮ ಕರ್ತವ್ಯ ಮರೆತಿದ್ದಾರೆ. ನಾಳೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ರೈತರ ವಿಚಾರವಾಗಿ ನಾಳೆ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಪ್ರಮಾಣ ವಚನ ತೆಗೆದುಕೊಂಡು ಮಾಡಿದ ಕೆಲಸ ಅಂದ್ರೆ ಪ್ರಧಾನಿ ಕಿಸಾನ್ ಯೋಜನೆ ನಿಲ್ಲಿಸಿದ್ದಾರೆ. ರೈತ ನಿಧಿ ನಿಲ್ಲಿಸಿದ್ದಾರೆ ಅನೇಕ ವಿಚಾರಗಳಿವೆ, ಸದನದಲ್ಲಿ ಮಾತನಾಡುತ್ತೇವೆ. ಕೇಂದ್ರದಿಂದ 8 ಲಕ್ಷದ ಮೆಟ್ರಿಕ್ ನ್ ಗಿಂತ ಹೆಚ್ಚು ಯೂರಿಯಾ ಬಂದಿದೆ. ಬಾಕಿ ಯೂರಿಯಾ ಎಲ್ಲಿಗೆ ಹೋಯ್ತು? ಕಳ್ಳದಂದೆ ನಡೆಯುತ್ತಿದೆ. ಗುಣಮಟ್ಟ ಇಲ್ಲದ ಬೀಜ ರೈತರಿಗೆ ಸರ್ಕಾರ ನೀಡುತ್ತಿದೆ. ನಾಳೆ ರೈತ ಮೋರ್ಚಾ ವತಿಯಿಂದ ಬೆಂಗಳೂರನ್ನ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಹೋರಾಟ.ಎರಡು ಹಂತದಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ರೈತರಿಗೆ ನಕಲಿ ಬೀಜ ಮತ್ತು ಕಲಬೆರಕೆ ಗೊಬ್ಬರ ವಿತರಣೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ನಕಲಿ ಬಿತ್ತನೆ ಬೀಜ, ಕಲಬೆರಕೆ ರಸಗೊಬ್ಬರ ಕಂಡುಹಿಡಿಯಬೇಕು. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.ಮಾರುಕಟ್ಟೆಗೆ ಬಿತ್ತನೆ ಬೀಜ, ಕಲಬೆರಕೆ ಬರುತ್ತಿದೆ. ಬ್ರೋಕರ್ ಗಳಿಗೆ ಸಹಕಾರ ಕೊಡುವ ಕೆಲಸ ಸರ್ಕಾರದಲ್ಲಿ ಆಗ್ತಿದೆ ಎಂದು ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಬೆಂಗಳೂರನ್ನ ಹೊರತುಪಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ಎರಡು ಹಂತದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್ ಮಾಡಲಿದೆ. ರೈತ ಮೋರ್ಚಾ ವತಿಯಿಂದ ನಾಳೆ ಜಿಲ್ಲಾ ಕೇಂದ್ರಗಳ ಬಳಿ ಪ್ರತಿಭಟನೆ ನಡೆಯಲಿದೆ.











