ಬೆಂಗಳೂರು; ಸಿಎಂ, ಡಿಸಿಎಂ ಅವರನ್ನ ಯಾವಾಗ ನಮಗೆ ಅವಶ್ಯಕತೆ ಇರುತ್ತೋ ಆಗ ಕರೆಯುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಿಎಂ, ಡಿಸಿಎಂ ಅವರನ್ನ ಯಾವಗ ದೆಹಲಿಗೆ ಕರೆಸಿಕೊಳ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವಾಗ ನಮಗೆ ಅವಶ್ಯಕತೆ ಇರುತ್ತೋ ಆಗ ಕರೆಯುತ್ತೇವೆ. ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಒಂದೇ ಲೈನ್ನಲ್ಲಿ ಉತ್ತರಿಸಿದ್ದಾರೆ.
ಮನ್ರೇಗಾ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಯಾರ ಸ್ಟೇಟ್ಮೆಂಟ್ಗೂ ರಿಯಾಕ್ಷನ್ ಮಾಡಲ್ಲ .ಮನ್ರೇಗಾ ರೈಟು ವರ್ಕ್ ಕಾರಣಕ್ಕಾಗಿ ಕೊಡುಗೆ ಕೊಟ್ಟಿದ್ದು . ಮನಮೋಹನ್ ಸಿಂಗ್ ತಂದ ಕಾನೂನು ಬಡವರ ಹೊಟ್ಟೆ ತುಂಬಿಸುವುದಕ್ಕೆ. ಬಡವರಿಗೆ ಸಹಾಯ ಮಾಡುವ ಕಾನೂನಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ಪಂಚಾಯಿತಿಯಲ್ಲಿ ನಡೆಯುವ ಕೆಲಸಗಳಿಗೆ ಅಡ್ಡಗಾಲು ಹಾಕುವ ಯೋಜನೆ ಮಾಡ್ತಿದ್ದಾರೆ. 60/40 ಅಂತ ರಾಜ್ಯದ ಮೇಲೆ 30% ಹೆಚ್ಚಿನ ಭಾರವನ್ನು ಹಾಕ್ತಿದ್ದಾರೆ. ಬಡವರಿಗೆ ಸಿಗೋದನ್ನ ನಿಲ್ಲಿಸಬೇಕು ಅನ್ನೋದು ಅವರ ಉದ್ದೇಶ .ಇದೇ ರೀತಿ ಒಂದೊಂದಾಗಿ ಇವೆಲ್ಲ ತೆಗಿಬೇಕು ಅನ್ನೋ ಇಚ್ಛೆ ಅವರಿಗಿದೆ . ಬಡವರಿಗೆ ಸಿಗೋದನ್ನ ನಿಲ್ಲಿಸಿ ಅಂತ ಹೇಳುತ್ತಿದ್ದಾರೆ .ಇವರು ಏನೇ ಸ್ಪಷ್ಟನೆ ಕೊಟ್ರು ಕೂಡ ಅದು ಸರಿಯಲ್ಲ . ಯಾರು ಇದನ್ನ ಕ್ರಿಟಿಸೈಜ್ ಮಾಡ್ತಾರೋ ಮನ್ರೇಗಾ ತೆಗಿಬೇಕು ಅಂತರೋ.ಅವರ ಬಳಿಯೇ ಆಡಿಟ್ ಸಂಸ್ಥೆ ಇದೆ ಮಾಡಲಿ ಎಂದಿದ್ದಾರೆ.
ಸಿಎಜಿ ವರದಿ ಪ್ರಕಾರ ಇದರಿಂದ ಅಸೆಟ್ ಕ್ರಿಯೇಟ್ ಆಗಿದೆ ಅಂತ ಹೇಳಿದ್ದಾರೆ .ಇದಕ್ಕೆ ವಿರೋಧ ಮಾಡ್ತಾರೆ ಅಂದ್ರೆ ಬಿಜೆಪಿಗರು ಜನ ವಿರೋಧಿಗಳು .ಮೋದಿ ಬಡವರಿಗೆ ಸಹಾಯ ಮಾಡುವ ಬದಲು ಕಾರ್ಪೊರೇಟ್ಗೆ ಸಹಾಯ ಮಾಡಲು ಮುಂದಾಗಿದ್ದಾರೆ.ಮನ್ರೇಗಾದಲ್ಲಿ ಹಣ ಕಡಿತ ಮಾಡಲು ಮುಂದಾಗಿದ್ದಾರೆ .ನಾನು ಇದನ್ನು ಖಂಡಿಸುತ್ತೇನೆ.ಈ ಹೋರಾಟ ಕೊನೆಯವರೆಗೂ ನಡೆಯುತ್ತದೆ . ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.











