ಮನೆ Latest News ಕೆ ಎನ್ ರಾಜಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೋ ಅವರನ್ನೇ ಕೇಳಬೇಕು; ಬಮುಲ್ ಅಧ್ಯಕ್ಷ ಡಿಕೆ ಸುರೇಶ್...

ಕೆ ಎನ್ ರಾಜಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೋ ಅವರನ್ನೇ ಕೇಳಬೇಕು; ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿಕೆ

0

 

ಬೆಂಗಳೂರು; ಕೆ ಎನ್ ರಾಜಣ್ಣ ಅವರ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜಣ್ಣ ಹೇಳಿಕೆ ಕಾಂಗ್ರೆಸ್ ನಾಯಕರಲ್ಲಿ ಅಚ್ಚರಿ ಮೂಡಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಅದರ ಬಗ್ಗೆ ಮಾಹಿತಿ ಇಲ್ಲ. ರಾಜಣ್ಣ ಸರ್ಕಾರದ ಒಂದು ಭಾಗ. ಯಾವ ಅರ್ಥದಲ್ಲಿ ಹೇಳಿದ್ದಾರೋ ಅವರನ್ನೇ ಕೇಳಬೇಕು.ಹಿರಿಯ ಸಚಿವರು ಅವರಿಗೇ ಮಾಹಿತಿ ಇರಬಹುದು. ಯಾವ ಕಂಟೆಕ್ಸ್ಟ್ ನಲ್ಲಿ ಹೇಳಿದ್ದಾರೆ ರಾಜಣ್ಣ ಹಾಗೂ ಸಿಎಂ ಅವರನ್ನೇ ಕೇಳಿ. ಇಲ್ಲದಿದ್ದರೆ ಪಕ್ಷದ ವರಿಷ್ಟರನ್ನು ಕೇಳಬೇಕು ಎಂದಿದ್ದಾರೆ.

ಇದೇ ವೇಳೆ ರಾಜೂ ಕಾಗೆ ನೀರಾವರಿ ಅನುದಾನದ ಬಗ್ಗೆ ಬೇಸರ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಡಿಸಿಎಙ ಚರ್ಚೆ ಮಾಡಿ ಎಲ್ಲ ಶಾಸಕರನ್ನು ಸಮಾಧಾನ ಪಡಿಸ್ತಾರೆ. ಅನುದಾನ ಎಲ್ಲರಿಗೂ ಕೊಟ್ಟಿದ್ದಾರೆ. ನೀರಾವರಿ ಇಲಾಖೆಯಲ್ಲಿ ಹಿಂದಿನ ಸರ್ಕಾರದ ಅನುಮೋದನೆ ಗಳು ಪೆಂಡಿಂಗ್ ಇವೆ. ೩೦೦- ೫೦೦- ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ಎಲ್ಲರನ್ನೂ ಸಮಾಧಾನ ಪಡಿಸುವ ಕೆಲಸ ಸಿಎಂ ಡಿಸಿಎಂ ಮಾಡ್ತಾರೆ. ಕಾವೇರಿ ಜಲಾನಯನ ಪ್ರದೇಶಕ್ಕೆ ಹಿಂದೆಲ್ಲ ಅನ್ಯಾಯ ಆಗಿದೆ. ರಾಮನಗರ ಜಿಲ್ಲೆ ಬಯಲು ಸೀಮೆ ಪ್ರದೇಶದಲ್ಲಿ ಬರುತ್ತದೆ ಯಾವುದೇ ನೀರಾವರಿ ಮೂಲಗಳಿಲ್ಲ.ಜಲ ಸಂಪನ್ಮೂಲ ಸಚಿವರಾಗಿ ಕೆಲವೊಂದು ಸಣ್ಣ ಸಣ್ಣ ಯೋಜನೆಗಳನ್ನು ರಾಮನಗರಕ್ಕೆ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ದೊಡ್ಡ ನೀರಾವರಿ ಯೋಜನೆಗಳಿವೆ.ಆದರೆ ರಾಮನಗರ ಭಾಗಕ್ಕೆ ಅಂಥ ಯಾವುದೇ ದೊಡ್ಡ ದೊಡ್ಡ ಯೋಜನೆಗಳಿಲ್ಲಎಂದಿದ್ದಾರೆ.

ಹುಲಿಗಳ ಸಾವಿನ ವಿಚಾರದ ಬಗ್ಗೆ ಮಾತನಾಡಿ ಹುಲಿಗಳು ಸಾವನ್ನಪ್ಪಿವೆ ಅದು ಆತಂಕಕಾರಿ ಬೆಳವಣಿಗೆ. ವನ್ಯಜೀವಿ ಗಳಿಂದ ಎಲ್ಲರಿಗೂ ಒಳ್ಳೆದಾಗುತ್ತದೆ.ಕೆಲವೊಂದು ಮಾನವ ಸಂಘರ್ಷ ಆದ್ರೂ ಅವುಗಳ ಸಂರಕ್ಷಣೆ ಮಾಡಬೇಕು.ಕಿಡಿಗೇಡಿಗಳು ಮಾಡಿದ ದುರಂತ ಕೃತ್ಯ ಎನಿಸುತ್ತದೆ.ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು ಎಚ್ಚರಿಕೆ ವಹಿಸಿ ಮುಂದಿನ ದಿನಗಳಲ್ಲಿ ತಡೆಯಬೇಕು.ಅರಣ್ಯ ಅಂಚಿನಲ್ಲಿ ಇರುವವರಿಗೂ ಕೂಡ ಯಾವುದೇ ತೊಂದರೆ ಆಗಬಾರದು.ಅವರಿಗೂ ಅರಿವು ಮೂಡಿಸಿ ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು ಎಂದಿದ್ದಾರೆ.