ಬೆಳಗಾವಿ; ದೆಹಲಿಯಲ್ಲಿ ಸುರ್ಜೇವಾಲಾ ಭೇಟಿ ಆಗಿದ್ದೇವೆ, ರಾಜಕೀಯವಾಗಿ ಏನೂ ಚರ್ಚೆ ಆಗಿಲ್ಲ ಎಂದು ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುನೀಲ್ ಹನುಮಣ್ಣವರು ಉಪಾಧ್ಯಕ್ಷರಾಗಿದ್ದರು, ಅದರ ಹಿನ್ನೆಲೆಯಲ್ಲಿ ಭೇಟಿ ಆಗಲು ಹೋಗಿದ್ದೆವು ಎಂದ ಅವರು ಸತೀಶ್ ಜಾರಕಿಹೊಳಿ ಮುಂದಿನ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ ಎಂಬ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಚರ್ಚೆ ಆಗುತ್ತದೆ, ಆರು ಕೋಟಿ ಜನಸಂಖ್ಯೆ ಇದೆ ಚರ್ಚೆ ಮಾಡ್ತಾರೆ, ಚರ್ಚೆಗೆ ಯಾವುದೇ ಕಡಿವಾಣ ಇಲ್ಲ.ಕೆಪಿಸಿಸಿ ಅಧ್ಯಕ್ಷ ಗಾದಿಯ ವಿಚಾರ ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದಾಗ ಬಗ್ಗೆ ಪ್ರತಿಕ್ರಿಯಿಸಿದ ಅವರು ನಿನ್ನೆ ಭೇಟಿ ಆಗಿದ್ದಾರೆ, ಅವರು ಏನು ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ. ಸಚಿವ ಸಂಪುಟದ ವಿಸ್ತರಣೆ ವಿಚಾರ ನಮ್ಮ ಕೈಯಲ್ಲಿ ಇಲ್ಲ. ವಿಸ್ತರಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಹೇಳಬೇಕು. ಅಂದಾಗ ಪುಲ್ ಸ್ಟಾಪ್ ಆಗುತ್ತದೆ ಇಲ್ಲಾ ಅಂದ್ರೆ ಊಹಾಪೋಹ ಇರುತ್ತದೆ ಎಂದರು. ನಾಯಕತ್ವದ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ವರಿಷ್ಠರು ಗಮನಿಸುತ್ತಾರೆ, ಅವರೇ ತೀರ್ಮಾನ ಮಾಡ್ತಾರೆ ನೋಡೋಣ. ಬೆಳಗಾವಿಯಲ್ಲಿ ಅಧಿವೇಶನಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ರಾಜು ಕಾಗೆ ಪ್ರತ್ಯೇಕ ರಾಜ್ಯಕ್ಕೆ ಸಿಎಂ ಸಿದ್ದರಾಮಯ್ಯ ಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅದು ಅವರ ವೈಯಕ್ತಿಕ ವಿಚಾರ, ಅದು ಪಕ್ಷದ ವಿಚಾರವಲ್ಲ ಎಂದು ಹೇಳಿದ್ದಾರೆ.
ಡಿಕೆ ಸುರೇಶ್ ದೆಹಲಿಗೆ ತೆರಳುವ ವಿಚಾರದ ಬಗ್ಗೆ ಮಾತನಾಡಿದ ಅವರು ನೋಡೋಣ, ಕಾದು ನೋಡೋಣ.ನನಗೆ ಬೇರೆ ಕೆಲಸ ಇದೆ.ಅದಕ್ಕಾಗಿ ನಾಳೆ ದೆಹಲಿಗೆ ಹೋಗ್ತಿದ್ದೇನೆ. ನಾನು ಏನು ಹೋಗ್ತಾನೇ ಇರುತ್ತೇನೆ ಬರ್ತಾನೇ ಇರುತ್ತೇನೆ. ದೆಹಲಿಗೆ ಹೋದಾಗ ಪಕ್ಷದ ಮುಖಂಡೆ ಭೇಟಿಗೆ ಅವಕಾಶ ಸಿಕ್ಕಿದರೆ ಭೇಟಿ ಮಾಡ್ತೀನಿ ಎಂದ ಅವರು ಪವರ್ ಶೇರಿಂಗ್ ವಿಚಾರದ ಬಗ್ಗೆ ಮಾತನಾಡಿ ಎಲ್ಲವನ್ನೂ ಕಾದು ನೋಡೋಣ. ಡಿಕೆ ಶಿವಕುಮಾರ್ ಒಬ್ಬರದ್ದೇ ಇಲ್ವಲ್ಲ ಕ್ಲೈಮ್ ಮಾಡೋಕೆ. ತುಂಬಾ ಜನರ ಕ್ಲೈಮ್ ಇದೆಯಲ್ಲ. ಏನೇನಾಗುತ್ತೆ ಎಂದು ಕಾದು ನೋಡೋಣ. ನಮ್ಮ ಅಣ್ಣ ಸಿಎಂ ಆಗಬೇಕೆಂಬ ಮಾತನ್ನು ನಾನು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಎಲ್ಲವೂ ಅಂತಿಮ. ಸಿಎಂ, ಸಚಿವ ಸಂಪುಟ, ಹಾಗೂ ಡಿಕೆ ಶಿವಕುಮಾರ್ ಗೆ ಇರಬಹುದು ಎಲ್ಲರಿಗೂ ಹೈಕಮಾಂಡ್ ತೀರ್ಮಾನವೇ ಮುಖ್ಯ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಎಂದು ಕಾದು ನೋಡೋಣ ಎಂದು ತಿಳಿಸಿದ್ದಾರೆ.










