ಬೆಂಗಳೂರು; ನಾವು ಯಾರ ಫೋನ್ ಗಳನ್ನು ಟ್ಯಾಪ್ ಮಾಡಿಲ್ಲ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಸರ್ಕಾರ ಫೋನ್ ಟ್ಯಾಪ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅವರು ಏನ್ ಮಾಡ್ತಿದ್ರೋ ಅದನ್ನ ನಾವು ಮಾಡುತ್ತಿದ್ದೇವೆ ಅಂತ ಹೇಳ್ತಿದ್ದಾರೆ. ನಾವು ಯಾರ ಫೋನ್ ಗಳನ್ನು ಟ್ಯಾಪ್ ಮಾಡಿಲ್ಲ. ಮಾಡುವುದು ಇಲ್ಲ.ಅದರ ಅವಶ್ಯಕತೆಯೂ ನಮಗೆ ಇಲ್ಲ.ಆರೋಪ ಮಾಡುವುದಕ್ಕೂ ಫೋನ್ ಟ್ಯಾಪ್ ಮಾಡುವುದಕ್ಕೂ ಸಂಬಂಧ ಇದೆಯಾ ಎಂದಿದ್ದಾರೆ. ಹಾಗಾದ್ರೆ ಅವರು ಪ್ರತಿನಿತ್ಯ ನೂರಾರು ಆರೋಪಗಳನ್ನ ಮಾಡುತ್ತಾರೆ. ಅದಕ್ಕೆಲ್ಲ ನಾವು ಏನು ಹೇಳಬೇಕು?. ಆರೋಪ ಮಾಡಿದರು ಅಂತ ಹೇಳಿದ ಕ್ಷಣಕ್ಕೆ ನಾವು ಅವರ ಖಾಸಗಿ ವಿಚಾರಗಳಿಗೆ ಹೋಗ್ತಿವಿ ಅನ್ನೋದು ಶುದ್ಧ ತಪ್ಪು. ನಾವು ಯಾರ ಫೋನನ್ನು ಟ್ಯಾಪ್ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ನಿನ್ನೆ ಇಡೀ ದಿನ ಕೌನ್ಸಿಲ್ ನಲ್ಲಿ ಇದ್ದೆ. ಆ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಾರೆ . ನಾವು ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ನಾವು ಪ್ರತಿನಿತ್ಯ ಅಧಿಕಾರಿಗಳಿಗೆ ಬಿಎನ್ಎಸ್ ವಿಚಾರವಾಗಿ ಪಾಠ ಮಾಡುತ್ತಲೇ ಇದ್ದೇವೆ. ಈ ನಡುವೆ ಇನ್ಸ್ಪೆಕ್ಟರ್ ಮೇಲೆ ಕ್ರಮವನ್ನು ತೆಗೆದುಕೊಂಡಿದ್ದೇವೆ . ಶಿಸ್ತು ಕ್ರಮವನ್ನು ತೆಗೆದುಕೊಂಡಿದ್ದೇವೆ . ತಪ್ಪು ಆದಾಗ ಸರಿಪಡಿಸುವ ನಮ್ಮ ಕೆಲಸ ನಾವು ಮಾಡಿಯೇ ಮಾಡುತ್ತೇವೆ, ಮಾಡಿದ್ದೇವೆ ಎಂದಿದ್ದಾರೆ.
ಅಧಿವೇಶನ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ನಿನ್ನೆ ಹೇಳಿದ್ದಾರೆ. ಬಿಎಸಿ ನಲ್ಲಿ ಮಾತುಕತೆ ಮಾಡಿ ತೀರ್ಮಾನ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ. ಮುಂದುವರಿಸುತ್ತಾರಾ ಅಥವಾ ಶನಿವಾರಕ್ಕೆ ಮುಗಿಸುತ್ತಾರಾ ಗೊತ್ತಿಲ್ಲ. ಮುಖ್ಯಮಂತ್ರಿ ಆಗಲಿ ನಾನಾಗಲಿ ತೀರ್ಮಾನ ಮಾಡಲು ಬರುವುದಿಲ್ಲ. ಬಿಎಸಿ ತೀರ್ಮಾನ ಮಾಡಬೇಕು ಎಂದ ಅವರು ಪಿಎಸ್ಐ ವರ್ಗಾವಣೆ ಮಿತಿಯನ್ನು ಒಂದು ವರ್ಷಕ್ಕೆ ಇಳಿಸುವ ವಿಚಾರದ ಬಗ್ಗೆ ಮಾತನಾಡಿ ಬಹಳ ಜನ ಪಿಎಸ್ಐ ವರ್ಗಾವಣೆ ವಿಚಾರವಾಗಿ ಹೇಳುತ್ತಲೇ ಇದ್ದಾರೆ.ಒಂದೇ ವರ್ಷ ಇದ್ದರೆ ಅಲ್ಲಿ ಕಷ್ಟ ಆಗುತ್ತೆ ಅಂತ ನಾವು ಎರಡು ವರ್ಷ ಮಾಡಿದ್ದೆವು. ಈ ಹಿಂದೆ ಒಂದು ವರ್ಷವೇ ಇತ್ತು . ಎರಡು ವರ್ಷ ಆಯ್ತು ಅದಾದ ನಂತರ ಒಂದು ವರ್ಷ ಆಯ್ತು.ನಮ್ಮ ಸರ್ಕಾರ ಬಂದ ಮೇಲೆ ಎರಡು ವರ್ಷ ಆಗಿತ್ತು.ಈಗ ನೀವು ಹೇಳಿರುವ ಅಂಶವನ್ನೂ ವಿಚಾರ ಮಾಡೋಣ . ಸಾಧಕಬಾಧಕಗಳನ್ನು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ತಿಮ್ಮಾಪುರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ನಾವು ಹೇಳಿದ್ದೇವೆ ಅಲ್ವಾ. ಯಾರೋ ಒಬ್ಬ ಅಧಿಕಾರಿ ಮಾತನಾಡಿದ ಕ್ಷಣ ಮಂತ್ರಿಗಳ ಮೇಲೆ ಆಪಾದನೆ ಮಾಡಿರೋದು ಅಂತ ಖಂಡಿಸಿದ್ದೇವೆ. ಪ್ರೂವ್ ಮಾಡಲಿ ಅದಾದ ನಂತರ ಸದನದಲ್ಲಿ ಹೇಳಲಿ ಎಂದ ಅವರು ಜೆಡಿಎಸ್ ಶಾಸಕಿ ಕರೆಮ್ಮನಾಯಕ್ ಗೆ ಪುಡಾರಿಗಳಿಂದ ಧಮ್ಕಿ ವಿಚಾರದ ಬಗ್ಗೆ ಮಾತನಾಡಿ ನಾನು ಸ್ಪಷ್ಟವಾಗಿ ವಿವರವಾಗಿ ಕರೆಮ್ಮಾ ಅವರಿಗೆ ಉತ್ತರವನ್ನು ನೀಡಿದ್ದೇನೆ.ಅಂತದ್ದು ಕಂಡು ಬಂದಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತೇನೆ.ಅವರಿಗೆಲ್ಲ ರೀತಿ ರಕ್ಷಣೆ ಕೊಡುವುದಾಗಿ ಭರವಸೆಯನ್ನು ಸದನದಲ್ಲೇ ನೀಡಿದ್ದೇನೆ ಎಂದಿದ್ದಾರೆ.











